Site icon Vistara News

Kangana Ranaut: ಸಂಸದೆ ಕಂಗನಾ ಆಯ್ಕೆ ಪ್ರಶ್ನಿಸಿ ಅರ್ಜಿ; ಹೈಕೋರ್ಟ್‌ನಿಂದ ನೊಟೀಸ್‌ ಜಾರಿ

Kangana Ranaut

ಶಿಮ್ಲಾ: ಬಿಜೆಪಿ ಸಂಸದೆ ಕಂಗನಾ ರಣಾವತ್‌ ಚುನಾವಣಾ (Kangana Ranaut) ಸ್ಪರ್ಧೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್‌ (Himachal Pradesh High Court) ನೋಟಿಸ್‌ ಜಾರಿ ಮಾಡಿದೆ. ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಚುನಾಯಿತರಾಗಿರುವ ಕಂಗನಾಗೆ ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ಆಗಸ್ಟ್ 21 ರೊಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ

ಏನಿದು ಪ್ರಕರಣ?

ಬಿಜೆಪಿ ಸಂಸದೆ ವಿರುದ್ಧ ಕಿನ್ನೌರ್‌ ನಿವಾಸಿ ಲಾಯಿಕ್‌ ರಾಮ್‌ ನೇಗಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಕಂಗನಾ ಆಯ್ಕೆ ರದ್ದುಗೊಳಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಮಂಡಿ ಕ್ಷೇತ್ರದಿಂದ ನಾನು ಕೂಡ ಸ್ಪರ್ಧಿಸಲು ಬಯಸಿದ್ದೆ. ಆದರೆ ನನ್ನ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಪ್ಪಾಗಿ ತಿರಸ್ಕರಿಸಲಾಗಿದೆ. ನನ್ನ ನಾಮಪತ್ರವನ್ನು ಸರಿಯಾಗಿ ಪರಿಶೀಲಿಸಿ ಅಂಗೀಕರಿಸಿದ್ದರೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ ಎಂದಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಇದೀಗ ಕಂಗನಾಗೆ ನೊಟೀಸ್‌ ಜಾರಿಗೊಳಿಸಿದೆ.

ಅರಣ್ಯ ಇಲಾಖೆಯ ಮಾಜಿ ನೌಕರ ನೇಗಿ ಅವರು ಸ್ವಯಂ ನಿವೃತ್ತಿಯನ್ನು ಪಡೆದು ಚುನಾವಣೆ ಸ್ಪರ್ಧಿಸಲು ಮುಂದಾಗಿದ್ದರು. ಸರ್ಕಾರಿ ಅಧಿಕಾರಿಯಾಗಿದ್ದ ಕಾರಣ ಅವರು ನೋ ಡ್ಯೂ ದಾಖಲೆಯನ್ನು ಚುನಾವಣಾಧಿಕಾರಿಗೆ ಸಲ್ಲಿಸಬೇಕಾಗಿತ್ತು. ವಿದ್ಯುತ್‌, ನೀರು, ದೂರವಾಣಿ ಇಲಾಖೆಗಳಿಂದ ‘ನೋ ಡ್ಯೂ ಸರ್ಟಿಫಿಕೇಟ್‌’ ಸಲ್ಲಿಸಲು ಒಂದು ದಿನ ಕಾಲಾವಕಾಶ ನೀಡಲಾಗಿತ್ತು. ಅದನ್ನು ಸಲ್ಲಿಸಿದಾಗ ಚುನಾವಣಾಧಿಕಾರಿ ಅದನ್ನು ಸ್ವೀಕರಿಸದೆ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ದೂರಿದ್ದಾರೆ.

ಕಂಗನಾ ಅವರು ಮಂಡಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರನ್ನು 74,755 ಮತಗಳಿಂದ ಸೋಲಿಸಿದ್ದರು. ಸಿಂಗ್ 4,62,267 ಮತಗಳನ್ನು ಪಡೆದಿದ್ದರು. ಕಂಗನಾ ರಣಾವತ್‌ 5,37,002 ಮತಗಳನ್ನು ಪಡೆದಿದ್ದರು.

ಇನ್ನು ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಕನ್ವರ್ ಯಾತ್ರೆ ಸಾಗುವ ದಾರಿಯಲ್ಲಿರುವ ಅಂಗಡಿಗಳ ಹೆಸರನ್ನು ಪ್ರದರ್ಶನ ಮಾಡಬೇಕು ಎಂದು ಆದೇಶ ಮಾಡಿರುವ ವಿಚಾರದ ಬಗ್ಗೆ ನಟ ಸೋನು ಸೂದ್ (Sonu Sood) ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ನಟಿ ಹಾಗೂ ಸಂಸದೆ ಕಂಗನಾ ರಣಾವತ್​ ಹಾಗೂ ಸೋನು ಸೂದ್​​ ಸೋಶಿಯಲ್ ಮೀಡಿಯಾದಲ್ಲಿ ಗಲಾಟೆ ಮಾಡಿಕೊಂಡಿದ್ದರು.

ಇದನ್ನೂ ಓದಿ: Kangana Ranaut: “ರಾಜಕಾರಣಿಗಳು ರಾಜಕೀಯ ಬಿಟ್ಟು ಪಾನಿಪೂರಿ ಮಾರಬೇಕೆ?”- ಕಂಗನಾ ಕೆಂಡಾಮಂಡಲ

Exit mobile version