Site icon Vistara News

Kangana Ranaut: “ರಾಜಕಾರಣಿಗಳು ರಾಜಕೀಯ ಬಿಟ್ಟು ಪಾನಿಪೂರಿ ಮಾರಬೇಕೆ?”- ಕಂಗನಾ ಕೆಂಡಾಮಂಡಲ

ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ‘ದ್ರೋಹದ ಬಲಿಪಶು’ ಎಂದು ಕರೆದಿದ್ದ ಜ್ಯೋತಿರ್‌ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ(Swami Avimukteshwaranand Saraswati) ಅವರ ವಿರುದ್ಧ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್(Kangana Ranaut) ಕಿಡಿ ಕಾರಿದ್ದಾರೆ. ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿದ ಕಂಗನಾ, ಪರೋಕ್ಷವಾಗಿ ಶಿಂಧೆ ಅವರನ್ನು ‘ವಿಶ್ವಾಸಘಾತುಕ’ ಹಾಗೂ ‘ದ್ರೋಹಿ’ ಎಂದು ಕರೆಯುವ ಮೂಲಕ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಎಲ್ಲರ ಭಾವನೆಗಳಿಗೆ ಘಾಸಿ ಉಂಟುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ರಾಜಕಾರಣಿಗಳು ರಾಜಕೀಯ ಬಿಟ್ಟು ಪಾನೀಪೂರಿ ಮಾರಬೇಕೆ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಂಗನಾ ‘ರಾಜಕಾರಣದಲ್ಲಿ ಮೈತ್ರಿ, ಒಪ್ಪಂದಗಳು, ಮತ್ತು ಪಕ್ಷದ ವಿಭಜನೆ ಹೊಂದಿರುವುದು ತೀರಾ ಸಾಮಾನ್ಯವಾಗಿದೆ ಮತ್ತು ಸಂವಿಧಾನಾತ್ಮಕವಾಗಿದೆ. ಕಾಂಗ್ರೆಸ್‌ ಪಕ್ಷವು 1907ರಲ್ಲಿ ವಿಭಜನೆಯಾಯಿತು. 1971ರಲ್ಲಿ ಮತ್ತೊಮ್ಮೆ ವಿಭಜನೆ ಆಯಿತು. ರಾಜಕಾರಣಿಗಳು ರಾಜಕೀಯದಲ್ಲಿ ರಾಜಕಾರಣದ ಮಾಡದೇ, ಪಾನಿಪುರಿ ಮಾರಬೇಕೆ?’ ಎಂದು ಬರೆದುಕೊಂಡಿದ್ದಾರೆ.

ಬದರಿ ಶಂಕರಾಚಾರ್ಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಕಂಗನಾ. ತನ್ನ ಪ್ರಜೆಗಳನ್ನು ರಾಜನೇ ಶೋಷಿಸಲು ಆರಂಭಿಸಿದರೆ ವಿಶ್ವಾಸಘಾತುಕತನವೇ ಅಂತಿಮವಾದ ಧರ್ಮ ಎಂದು ಧರ್ಮ ಕೂಡ ಹೇಳುತ್ತದೆ. ಇಂತಹ ಕ್ಷುಲ್ಲಕ ಹೇಳಿಕೆಗಳ ಮೂಲಕ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಶಂಕರಾಚಾರ್ಯ ಅವರು ತಮ್ಮ ಮಾತುಗಳು ಹಾಗೂ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ವಿಶ್ವಾಸಘಾತಕ ಹಾಗೂ ದ್ರೋಹಿ ಎಂದು ಆರೋಪಿಸುವ ಮೂಲಕ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ವಿರುದ್ಧ ಅವಹೇಳನಾಕಾರಿ ಪದಗಳನ್ನು ಬಳಸಿ ನೆಮ್ಮಲ್ಲರ ಭಾವನೆಗಳಿಗೂ ಧಕ್ಕೆ ಉಂಟುಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಉತ್ತರಾಖಂಡದ ಜ್ಯೋತಿರ್‌ಮಠದ 46ನೇ ಶಂಕರಾಚಾರ್ಯರಾಗಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸೋಮವಾರ ಮುಂಬಯಿಯಲ್ಲಿನ ಉದ್ಧವ್ ಠಾಕ್ರೆ ಅವರ ‘ಮಾತೋಶ್ರೀ’ ನಿವಾಸಕ್ಕೆ ಭೇಟಿ ನೀಡಿದ್ದರು. ಉದ್ಧವ್ ಠಾಕ್ರೆ ಅವರು ಮತ್ತೆ ಮಹಾರಾಷ್ಟ್ರ ಸಿಎಂ ಆಗುವವರೆಗೂ ತಮ್ಮ ನೋವು ನಿವಾರಣೆಯಾಗುವುದಿಲ್ಲ.ಹಿಂದೂ ಧರ್ಮದ ಅನುಯಾಯಿಗಳಾದ ನಾವು, ಪಾಪ ಮತ್ತು ಪುಣ್ಯದಲ್ಲಿ ನಂಬಿಕೆ ಇರಿಸಿದ್ದೇವೆ. ಅತಿ ದೊಡ್ಡ ಪಾಪ ಎಂದರೆ ದ್ರೋಹ. ಉದ್ಧವ್ ಠಾಕ್ರೆ ಅವರಿಗೆ ವಂಚಿಸಲಾಗಿದೆ” ಎಂದು ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕೆಲವು ದಿನಗಳ ಹಿಂದೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಅವರ ಹೇಳಿಕೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಸಂದರ್ಭದಲ್ಲೂ ರಾಹುಲ್‌ ಪರ ಉತ್ತರಾಖಂಡದ ಜ್ಯೋತಿರ್ ಮಠದ 46ನೇ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು

Exit mobile version