ನವದೆಹಲಿ: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಸಂಸದೆ ಕಂಗನಾ ರಣಾವತ್(Kangana v/s Rahul Gandhi)ಗೆ ಕಾನೂನು ಸಂಕಷ್ಟ ಎದುರಾಗಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ತಿರುಚಿದ ಫೊಟೋವನ್ನು ಶೇರ್ ಮಾಡಿರುವ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಕಂಗನಾ ವಿರುದ್ಧ ಬರೋಬ್ಬರಿ 40ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಇತ್ತೀಚೆಗೆ ಸಂಸತ್‌ನಲ್ಲಿ ಜಾತಿಗಣತಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ನೀಡಿರುವುದನ್ನೇ ಉಲ್ಲೇಖಿಸಿ ಕಂಗನಾ ರಾಹುಲ್ ಗಾಂಧಿಯವರ ಫೊಟೋವೊಂದನ್ನು ಶೇರ್ ಮಾಡಿದ್ದಾರೆ. ತಲೆಗೆ ಮುಸ್ಲಿಮರು ಧರಿಸುವಂತಹ ಟೋಪಿ, ಕತ್ತಿನಲ್ಲಿ ಕ್ರೈಸ್ತರು ಧರಿಸುವ ಕ್ರಾಸ್, ಹಣೆಗೆ ವಿಭೂತಿ ಹಚ್ಚಿರುವ ರೀತಿಯಲ್ಲಿ ಎಡಿಟ್ ಮಾಡಿರುವ ಫೊಟೋವನ್ನು ಕಂಗನಾ ರಣಾವತ್ ಶೇರ್ ಮಾಡಿದ್ದಾರೆ. ʼಜಾತಿ ಕೇಳದೇ ಜಾತಿ ಗಣತಿ ಮಾಡಲು ಹೊರಟಿರುವ ಜಾತಿ ಜೀವಿʼ ಎಂದು ಪೋಸ್ಟ್ ಮಾಡಿದ್ದಾರೆ.
ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ
ಗಾಂಧಿ ಕುರಿತ ಅಸಹ್ಯಕರ ಮೀಮ್‌ಗಾಗಿ ಕಂಗನಾ ಅವರನ್ನು ನೆಟ್ಟಿಗರು ಟೀಕಿಸಿದ್ದಾರೆ ಮತ್ತು ಇದೀಗ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ನರೇಂದ್ರ ಮಿಶ್ರಾ ಅವರು ನಟಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಐಟಿ ಕಾಯ್ದೆಯಡಿ ಯಾರೊಬ್ಬರ ಚಿತ್ರವನ್ನು ಮಾರ್ಫ್ ಮಾಡುವುದು ಮತ್ತು ಅವರ ಅನುಮತಿಯಿಲ್ಲದೆ ಅದನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳುವುದು ಕಾನೂನುಬಾಹಿರ ಎಂದು ಮಿಶ್ರಾ ಹೇಳಿದ್ದಾರೆ. ನಂತರ ರಾಹುಲ್ ಅವರು ತಮ್ಮ ವಿರುದ್ಧ 40 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಮತ್ತು ಗಾಂಧಿಯವರ ಪ್ರತಿಷ್ಠೆಯನ್ನು ಹಾಳು ಮಾಡಿದ್ದಕ್ಕಾಗಿ ಪರಿಹಾರ ಕೇಳಿದ್ದಾರೆ ಎಂದು ಹೇಳಿದರು.
इंस्टाग्राम पर राहुल गांधी की तस्वीर को एडिट कर पोस्ट करने के जुर्म में सुप्रीम कोर्ट के मशहूर लॉयर ने कंगना रनौत के खिलाफ 40 करोड़ का डिफेमेशन केस फाइल किया pic.twitter.com/EAgchtctqs
— Rapunzel (@_DilS3Rahul_) August 8, 2024
“ಯಾರೊಬ್ಬರ ಒಪ್ಪಿಗೆಯಿಲ್ಲದೆ ಅಂತಹ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ನೀವು ಹೇಗೆ ಅವರ ಮಾನಹಾನಿ ಮಾಡುತ್ತೀರಿ? ಮೀಮ್‌ಗಳನ್ನು ಮಾಡಲು ಮತ್ತು ಇನ್ನೊಬ್ಬರ ವ್ಯಕ್ತಿತ್ವವನ್ನು ಕೆಡಿಸಲು ಒಬ್ಬರು ಸಂಸತ್ತಿಗೆ ಪ್ರವೇಶಿಸುವುದಿಲ್ಲ. ನಾನು ಸೇರಿದಂತೆ ನಾವು ಕಾಂಗ್ರೆಸ್ ಪಕ್ಷದ ಭಾಗವಾಗಿದ್ದೇವೆ ಮತ್ತು ಮಾನಹಾನಿ ಮಾಡುವ ಹಕ್ಕನ್ನು ಅವರಿಗೆ ಕೊಟ್ಟವರು ಯಾರು? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಯವರ ಡ್ರಗ್ ಟೆಸ್ಟ್ ಮಾಡಿಸಬೇಕೆಂದು ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿಗೆ ಘನತೆ ಇಲ್ಲ, ನಿನ್ನೆ ಅವರು ನಾವು ಶಿವಾಜಿಯವರ ಬಾರಾತ್ ಮತ್ತು ಇದು ಚಕ್ರವ್ಯೂಹ ಎಂದು ಹೇಳುತ್ತಿದ್ದಾರೆ, ಅವರು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದರೆ ಅವರನ್ನು ಪರೀಕ್ಷಿಸಬೇಕು ಎಂದು ನನಗೆ ಅನಿಸುತ್ತದೆ ಎಂದು ಹೇಳಿದ್ದರು.
इस बालबुद्धि का ड्रग्स टेस्ट कराओ – कंगना रानौत pic.twitter.com/4aW1JQNKTH
— Prakash lalit (@PrakashLalit3) July 30, 2024