Site icon Vistara News

Karnataka Election 2023: ಪ್ರಧಾನಿ ಮೋದಿ- ಪ್ರತಿಪಕ್ಷದ ನಡುವೆ ಕುತೂಹಲಕಾರಿ ವಾಗ್ಯುದ್ಧಕ್ಕೆ ಕಾರಣವಾದ ಅರಿಶಿನ!

Karnataka Election Results: PM Narendra Modi Congratulates Congress For Winning

Karnataka Election Results: PM Narendra Modi Congratulates Congress For Winning

ಬೆಂಗಳೂರು: ಅರಿಶಿನ ಬಗೆಗಿನ ತನ್ನ ಹೇಳಿಕೆಗೆ ವ್ಯಂಗ್ಯವಾಡುವ ಮೂಲಕ ಅರಿಶಿನ (Turmeric) ಬೆಳೆಗಾರರಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ ಎಂದು ಪ್ರಧಾನಿ ಮೋದಿ (Narendra Modi) ಹೇಳಿದ್ದರೆ, ಅವಮಾನ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್‌ ಅಲ್ಲ ಎಂದು ತೆಲಂಗಾಣ ಸಚಿವರೊಬ್ಬರು ಬಾಂಡ್‌ ಪೇಪರ್‌ ತೋರಿಸಿ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮೈಸೂರಿನಲ್ಲಿ ಭಾನುವಾರ ನಡೆದ ಕೊನೆಯ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ʼʼಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅರಿಶಿನವು ರೋಗನಿರೋಧಕ ಶಕ್ತಿವರ್ಧಕ ಎಂದು ನಾನು ಹೇಳಿದಾಗ ಕಾಂಗ್ರೆಸ್ ನನ್ನನ್ನು ಅಪಹಾಸ್ಯ ಮಾಡಿತ್ತು. ಕಾಂಗ್ರೆಸಿಗರು ಆ ಮೂಲಕ ನನ್ನನ್ನು ಅವಮಾನಿಸಿಲ್ಲ, ಆದರೆ ಅರಿಶಿನ ರೈತರನ್ನು ಅವಮಾನಿಸಿದ್ದಾರೆ” ಎಂದಿದ್ದರು.

ಈಗ ಅವರ ಈ ಕಾಮೆಂಟ್‌ ಟ್ವಿಟರ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ತೆಲಂಗಾಣ ಸಚಿವ ಕೆ. ತಾರಕ ರಾಮರಾವ್ ಅವರು, ಒಂದು ಬಾಂಡ್‌ ಪೇಪರ್‌ ಅನ್ನು ಪೋಸ್ಟ್‌ ಮಾಡುವುದರ ಜತೆಗೆ, ಅರಿಶಿನ ರೈತರಿಗೆ ನೀಡಿದ ಭರವಸೆಯನ್ನು ವಿಫಲಗೊಳಿಸುವುದು ನಿಜವಾದ ಅವಮಾನ ಎಂದು ಟೀಕಿಸಿದ್ದಾರೆ.

“ಲೋಕಸಭೆ ಚುನಾವಣೆಯ ಸಮಯದಲ್ಲಿ ನಿಜಾಮಾಬಾದ್‌ನ ನಿಮ್ಮ ಬಿಜೆಪಿ ಅಭ್ಯರ್ಥಿ ಅರಿಶಿನ ಮಂಡಳಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೂ ಅದು ಈಡೇರಿಲ್ಲ. ಹಲವಾರು ಪ್ರತಿಭಟನೆಗಳ ಹೊರತಾಗಿಯೂ ಅದನ್ನು ನೀಡಲು ನಿರಾಕರಿಸಲಾಗಿದೆ. ಇದು ಅರಿಶಿನ ರೈತರಿಗೆ ಮಾಡಿದ ನಿಜವಾದ ಅವಮಾನವಾಗಿದೆʼʼ ಎಂದು ಕೆಟಿಆರ್ ಟ್ವೀಟ್ ಮಾಡಿದ್ದಾರೆ.

ಅರಿಶಿನದ ರೋಗರೋಧಕ ಶಕ್ತಿನಿರ್ಮಾಣ ಸಾಮರ್ಥ್ಯದ ಬಗ್ಗೆ ಟ್ವಿಟರ್‌ ಬಳಕೆದಾರರು ಎರಡಾಗಿ ಒಡೆದುಹೋಗಿ ಕಾದಾಡಿದ್ದಾರೆ. ಕೆಲವರು ಪ್ರಧಾನಿ ಮಾತನ್ನು ಅನುಮೋದಿಸಿದ್ದಾರೆ. ಆದರೆ ಕೇರಳದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ವರುಣ್ ಚೆರುಪರಂಬತ್ ಅವರು, “ಅರಿಶಿನವು ರೋಗನಿರೋಧಕ ಶಕ್ತಿ ವರ್ಧಕವಲ್ಲ. ಲಸಿಕೆಗಳು ಮಾತ್ರ ನಮ್ಮ ದೇಹಕ್ಕೆ ಅಗತ್ಯವಿರುವ ಏಕೈಕ ಸಾಬೀತಾದ ರೋಗನಿರೋಧಕ ವರ್ಧಕಗಳು. ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಒಳಗೊಂಡ ಸೂಕ್ತ ಆರೋಗ್ಯಕರ ಜೀವನಶೈಲಿ ಮಾತ್ರ ರೋಗನಿರೋಧಕʼʼ ಎಂದು ಬರೆದಿದ್ದಾರೆ.

ಇದನ್ನೂ ಓದಿ: Karnataka Election : ಸೋಮಣ್ಣ ಪರ ಮೋದಿ ಹವಾ; ಗಾಣಿಗ ಸಮುದಾಯದಿಂದ ಚುನಾವಣಾ ಖರ್ಚಿಗೆ ಚಂದಾ ಹಣ!

Exit mobile version