Site icon Vistara News

Bus Fare Hiked | ಕೇರಳ-ಬೆಂಗಳೂರು ಪ್ರಯಾಣಿಕರಿಗೆ ಹೊರೆ, ಖಾಸಗಿ ಬಸ್ ದರ ಹೆಚ್ಚಳ!

Bus Fare hiked

ಬೆಂಗಳೂರು: ಕೇರಳ ಮತ್ತು ಬೆಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ (Bus Fare Hiked). ಬೇರೆ ಬೇರೆ ಕ್ಲಾಸ್‌ನ ದರದಲ್ಲಿ ಕನಿಷ್ಠ 150ರಿಂದ 250 ರೂ. ವರೆಗೂ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ. ಇದರಿಂದ ಸಹಜವಾಗಿಯೇ ಪ್ರಯಾಣಿಕರ ಜೇಬಿಗೆ ಹೊರೆ ಬಿದ್ದಿದೆ. ಎರ್ನಾಕುಲಂ-ಬೆಂಗಳೂರು ಜನಪ್ರಿಯ ಹಾಗೂ ಹೆಚ್ಚು ದಟ್ಟಣೆಯ ರೂಟ್ ಆಗಿದ್ದು, ಈ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ದರ ದುಬಾರಿಯಾಗಿದೆ. 1350 ರೂ. ಇದ್ದ ದರವನ್ನು ಈಗ 1,500 ರೂ.ಗೆ ಏರಿಕೆ ಮಾಡಲಾಗಿದೆ.

ಕರ್ನಾಟಕ ಅಂತಾ ರಾಜ್ಯ ಬಸ್ ನಿರ್ವಾಹಕರ ಸಂಘಟನೆಯು ಈ ದರವನ್ನು ಹೆಚ್ಚಿಸಿದೆ. ಕೇರಳ ಸರ್ಕಾರವು, ಕೇರಳ ಹೊರತಾಗಿ ನೋಂದಣಿ ಮಾಡಿಕೊಂಡಿರುವ ವಾಹನಗಳ ಮೇಲೆ ವೆಹಿಕಲ್ ಟ್ಯಾಕ್ಸ್ ಪರಿಚಯಿಸಿದೆ. ಈ ತೆರಿಗೆ ನವೆಂಬರ್ 1ರಿಂದ ಜಾರಿಗೆ ಬಂದಿದೆ. ಎರ್ನಾಕುಲಂ-ಬೆಂಗಳೂರು ರೂಟ್‌ನಲ್ಲಿ ಓಡಾಡುವ ಬಹುತೇಕ ಬಸ್‌ಗಳು ಕೇರಳದ ಹೊರಗೆ ನೋಂದಣಿಯಾದ ಬಸ್‌ಗಳಿವೆ. ಕೇರಳದಲ್ಲಿ ನೋಂದಣಿ ದರ ಹೆಚ್ಚಿರುವುದಕ್ಕೆ ಇದಕ್ಕೆ ಕಾರಣ. ಈ ತೆರಿಗೆ ಭಾರವನ್ನು ಖಾಸಗಿ ಬಸ್ ನಿರ್ವಾಹಕರು ಇದೀಗ ಪ್ರಯಾಣಿಕರಿಗೆ ವರ್ಗಾಯಿಸಿದ್ದಾರೆ. ಹಾಗಾಗಿ, ಬಸ್ ದರ ಹೆಚ್ಚಿಸಿದ್ದಾರೆ.

ಈ ಹೊಸ ತೆರಿಗೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಬಸ್ ನಿರ್ವಾಹಕರು ಪ್ರತಿ ತ್ರೈಮಾಸಿಕವಾಗಿ, ಪ್ರತಿ ಸೀಟಿಗೆ 4 ಸಾವಿರ ರೂ. ತೆರಿಗೆಯನ್ನು ನೀಡಬೇಕಾಗುತ್ತದೆ. ಅಂದರೆ, 36 ಸೀಟ್‌ಗಳಿರುವ ಬಸ್‌ ಕನಿಷ್ಠ 1.44 ಲಕ್ಷ ರೂ. ತೆರಿಗೆಯನ್ನು ಪಾವತಿಸಬೇಕು. ಈ ಕಾರಣಕ್ಕಾಗಿ ಬಸ್‌ಗಳ ನಡುವಿನ ದರ ವ್ಯತ್ಯಾಸದಿಂದ ಪ್ರಯಾಣಿಕರಿಗೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಏಕರೂಪ ಬಸ್ ದರವನ್ನು ರೂಪಿಸಲಾಗಿದೆ ಎಂದು ಕರ್ನಾಟಕ ಅಂತಾ ರಾಜ್ಯ ಬಸ್ ನಿರ್ವಾಹಕರ ಸಂಘಟನೆ ತಿಳಿಸಿದೆ.

ಇದನ್ನೂ ಓದಿ | Deepavali | ಟಿಕೆಟ್‌ ದರದಲ್ಲಿ ಭಾರಿ ಹೆಚ್ಚಳ; ವಿಮಾನಕ್ಕಿಂತ ಖಾಸಗಿ ಬಸ್ ಟಿಕೆಟ್‌ ದರವೇ ದುಬಾರಿ!

Exit mobile version