Site icon Vistara News

Kerala Governor | ಕೇರಳ ಸರ್ಕಾರ v/s ಗವರ್ನರ್ : ಹಳೆ ವಿಡಿಯೋ ಷೇರ್ ಮಾಡಿದ ಖಾನ್!

Kerala Governor

Kerala Governor

ನವ ದೆಹಲಿ: ಕೇರಳ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮುಗಿಲು ಮುಟ್ಟಿದೆ. ಕೇರಳ ರಾಜ್ಯಪಾಲ (Kerala Governor) ಆರೀಫ್ ಮೊಹಮ್ಮದ್ ಖಾನ್ ಅವರು ವಿಡಿಯೋವೊಂದನ್ನು ಷೇರ್ ಮಾಡಿದ್ದು, ವಿವಾದ ಭುಗಿಲೆದ್ದಿದೆ. ಏತನ್ಮಧ್ಯೆ, ರಾಜ್ಯಪಾಲರು ಆರ್‌ಎಸ್ಎಸ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದು ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಪ್ತ ಕಾರ್ಯದರ್ಶಿ ಸಂಬಂಧಿಯೊಬ್ಬರನ್ನು ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಟೀಚಿಂಗ್ ಪೋಸ್ಟ್‌ಗೆ ನೇಮಕ ಮಾಡಿದ ಬೆನ್ನಲ್ಲೇ ಈ ವಿವಾದ ಶುರುವಾಗಿದೆ. ರಾಜ್ಯಪಾಲರು ಈ ನೇಮಕಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ನಡುವೆ ವಾಗ್ವಾದಕ್ಕೆಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಣ್ಣೂರು ವಿವಿಯಲ್ಲಿ 2019ರಲ್ಲಿ ತಮ್ಮ ವಿರುದ್ಧ ನಡೆಸಿದ ದಾಂಧಲೆಯ ವಿಡಿಯೋವನ್ನು ಷೇರ್ ಮಾಡಿದ್ದಾರೆ. ಈ ಮೂಲಕ ಎಲ್‌ಡಿಎಫ್ ಸರ್ಕಾರ ಹೇಗೆ ಗೂಂಡಾಗಿರಿ ಮಾಡುತ್ತಿದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.

ರಾಜ್ಯಪಾಲರ ಈ ಕೃತ್ಯಕ್ಕೆ ಸರ್ಕಾರವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನೇಮಕಾತಿ ವೇಳೆ ಸ್ವಜನ ಪಕ್ಷಪಾತ ಮಾಡಲಾಗುತ್ತಿದೆ ಎಂಬ ರಾಜ್ಯಪಾಲರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದೆ.

ರಾಜಭವನದ ಸಭಾಂಗಣದಲ್ಲಿ ಸ್ಥಾಪಿಸಲಾದ ಎರಡು ವೈಡ್‌ಸ್ಕ್ರೀನ್‌ಗಳಲ್ಲಿ ಘಟನೆಯ ವೀಡಿಯೊಗಳನ್ನು ಖಾನ್ ಅವರು ಹಂಚಿಕೊಂಡಿದ್ದಾರೆ. ಈಗ ಮುಖ್ಯಮಂತ್ರಿಗಳ ಕಚೇರಿಯಲ್ಲಿ (ಸಿಎಂಒ) ಇರುವ ಹಿರಿಯ ಅಧಿಕಾರಿಯೊಬ್ಬರು ಅಂದು, ಪೊಲೀಸರು ತಮ್ಮ ಕಾರ್ಯಗಳನ್ನು ನಿರ್ವಹಿಸದಂತೆ ತಡೆಯುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು ಎಂದು ಹೇಳಿಕೊಂಡಿದ್ದಾರೆ.

ಕಪ್ಪು ಬಣ್ಣದ ಶರ್ಟ್ ಧರಿಸುವ ಜನರನ್ನು ಬಂಧಿಸುವ ರಾಜ್ಯದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುತ್ತೇವೆ. ಅಂದು, ಜನರನ್ನು ತಮ್ಮತ್ತ ನುಗ್ಗಿ ಬರುವುದನ್ನು ತಡೆಯಲು ಪೊಲೀಸರು ಪ್ರಯತ್ನಿಸಿದರು ಎಂದು ರಾಜ್ಯಪಾಲ ಖಾನ್ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ಕೇರಳ ಸಿಎಂ ವಿಜಯನ್‌ ತಂದಿದ್ದ ಮೂರಕ್ಕೆ ಮೂರೂ ಪ್ರಸ್ತಾವನೆಯನ್ನು ರಿಜೆಕ್ಟ್‌ ಮಾಡಿದ ಸಿಎಂ ಬೊಮ್ಮಾಯಿ

Exit mobile version