Site icon Vistara News

Kerala Horror: ಕ್ಷಮಿಸು ಮಗಳೇ… ಎಂದು ಕಣ್ಣೀರಿಟ್ಟ ಕೇರಳ ಪೊಲೀಸ್!

ತಿರುವನಂಥಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಐದು ವರ್ಷದ ಬಾಲಕಿಯ (5 year Old girl) ಶವ (Kerala Horror) ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪದಲ್ಲಿ ಬಿಹಾರ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಬಂಧಿಸಿಲಾಗಿದೆ. ಮತ್ತೊಂದೆಡೆ ಕೇರಳ ಪೊಲೀಸ್ ಇಲಾಖೆ, ಈ ಘಟನೆ ಕುರಿತು ಟ್ವಿಟರ್‌ನಲ್ಲಿ ಕ್ಷಮೆ ಕೋರಿದ್ದಾರೆ. ಸಾರಿ ಡಾಟರ್(ಕ್ಷಮಿಸು ಮಗಳೇ) ಎಂದು ಕೇರಳ ಪೊಲೀಸ್ (Kerala Police) ಟ್ವೀಟ್ ಮಾಡಿದೆ. 5 ವರ್ಷದ ಮಗುವನ್ನು ಸುರಕ್ಷಿತವಾಗಿ ವಾಪಸ್ ತರುವ ತಮ್ಮ ಪ್ರಯತ್ನ ಹಾಗೂ ಪೋಷಕರ ಪ್ರಯತ್ನ ಕೈಗೊಡಲಿಲ್ಲ ಎಂದು ಹೇಳಿದೆ.

ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ, ಮಗುವನ್ನು ರೇಪ್ ಮಾಡಿ ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ಪೋಷಕರೂ ಬಿಹಾರದ ಮೂಲದವರಾಗಿದ್ದಾರೆ. ಈ ಘಟನೆ ಸಂಬಂಧ ಬಂಧಿತನಾಗಿರುವ ವ್ಯಕ್ತಿಯೂ ಬಿಹಾರದವನೇ ಆಗಿದ್ದಾನೆ.

ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಗುವಿನ ಕುಟುಂಬ ವಾಸಿಸುತ್ತಿದ್ದ ಕಟ್ಟಡದ ಮೊದಲ ಮಹಡಿಯ ಕೊಠಡಿಯಲ್ಲಿ ತಂಗಿದ್ದ ಬಿಹಾರ ಮೂಲದ ಆರೋಪಿ ಕಾರ್ಮಿಕನನ್ನು ಪೊಲೀಸರು ಬಂಧಿಸಲಾಗಿದೆ. ಆರಂಭದಲ್ಲಿ ಆರೋಪಿ ಕುಡಿದ ಅಮಲಿನಲ್ಲಿದ್ದ ಕಾರಣ ಆತನನ್ನು ವಿಚಾರಣೆಗೊಳಪಡಿಸಲು ಮತ್ತು ವಿವರಗಳನ್ನು ಸಂಗ್ರಹಿಸಲು ಪೊಲೀಸರಿಗೆ ಕಷ್ಟವಾಯಿತು. ಆದರೆ, ಶನಿವಾರ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Kerala Horror: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ; ಅಶ್ಫಾಕ್‌ ಅಸ್ಲಾಂ ಎಂಬ ನೀಚನ ಬಂಧನ

ಶುಕ್ರವಾರ ನಾವು ಸಂಜೆ 7.10 ದೂರು ಸ್ವಿಕಸಿದೆವು ಮತ್ತು ರಾತ್ರಿ 8 ಗಂಟೆ ಮೊದಲೇ ಎಫ್ಐಆರ್ ಕೂಡ ದಾಖಲಿಸಿದೆವು. ನಮ್ಮ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು ಮತ್ತು ಬಾಲಕಿಯ ಜತೆ ಆರೋಪಿ ಕಾರ್ಮಿಕ ಇದ್ದದ್ದು ಖಚಿತವಾಯಿತು. ಹಾಗಾಗಿ, ನಾವ ಆತನನ್ನು ರಾತ್ರಿ 9.30ಕ್ಕಿಂತ ಮೊದಲೇ ವಶಕ್ಕೆ ತೆಗೆದುಕೊಂಡೆವು. ಆದರೆ, ಕುಡಿದ ಅಮಲಿನಲ್ಲಿದ್ದ ಕಾರಣ ಆತ ಸರಿಯಾಗ ವಿಚಾರಣೆಗೆ ಸಹಕರಿಸುತ್ತಿರಲಿಲ್ಲ. ಅಲ್ಲದೇ, ಆ ಹೊತ್ತಿನಲ್ಲಿ ಮಗು ಕೂಡ ಆತನೊಂದಿಗೆ ಇರಲಿಲ್ಲ ಎಂದು ಎರ್ನಾಕುಲಂ ರೂರಲ್ ಎಸ್‌ಪಿ ವಿವೇಕ್ ಕುಮಾರ್ ಅವರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version