Site icon Vistara News

Covid-19 Cases: 24 ಗಂಟೆಯಲ್ಲಿ ಕೇರಳದಲ್ಲೇ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಪತ್ತೆ

Kerala reports highest Covid-19 Cases in last 24 hours

ನವದೆಹಲಿ: ಕಳೆದ 24 ಗಂಟೆಯಲ್ಲಿ ಕೇರಳದಲ್ಲಿ (Kerala) 265 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದಲ್ಲದೇ (Highest Covide-19 Cases) ಒಂದು ಸಾವು ಕೂಡ ಸಂಭವಿಸಿದೆ (Death Case) ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ(Ministry of Health and Family Welfare). ದೇಶದಲ್ಲಿ ಒಟ್ಟು ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 2,997ಕ್ಕೆ ಏರಿಕೆಯಾಗಿದೆ.

ಗುರುವಾರ ಭಾರತದಲ್ಲಿ 594 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ದಾಖಲಾಗಿದ್ದವು. 2,311 ರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 2,669ಕ್ಕೆ ಏರಿಕೆಯಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು. ಏತನ್ಮಧ್ಯೆ, ಕೊರೊನಾವೈರಸ್‌ನ ಹೊಸ ರೂಪಾಂತರ ಹೆಚ್ಚುತ್ತಿರುವ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಾಜಿ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಪ್ರಸ್ತುತ ಭಯಪಡುವ ಅಗತ್ಯವಿಲ್ಲ. ಇದು ಅಪಾಯವನ್ನುಂಟು ಮಾಡುವ ರೂಪಾಂತರವಲ್ಲ, ಬದಲಿಗೆ ಹೆಚ್ಚು ಜಾಗೃತೆ ವಹಿಸುವ ರೂಪಾಂತರವಾಗಿದೆ ಎಂದು ಹೇಳಿದ್ದಾರೆ. ಹಾಗಿದ್ದೂ, ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ನಾವು ಹೆಚಚು ಜಾಗರೂಕರಾಗಿರಬೇಕು. ಹಾಗಂ ಆತಂಕಪಡಬೇಕಾದ ಅಗತ್ಯವಿಲ್ಲ. ಏಕೆಂದರೆ, ಈ ರೂಪಾಂತರದಿಂದ ಹೆಚ್ಚು ಹಾನಿಯಾಗುತ್ತದೆ ಎಂಬುದಕ್ಕೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ. ಈ ರೂಪಾಂತರ ಜೆಎನ್.1 ಹೆಚ್ಚು ತೀವ್ರವಾಗಿದೆ ಅಥವಾ ಇದು ಹೆಚ್ಚು ನ್ಯುಮೋನಿಯಾ, ಹೆಚ್ಚು ಸಾವಿಗೆ ಕಾರಣವಾಗುತ್ತದೆ ಎಂದು ಹೇಳಲು ಡೇಟಾಗಳಿಲ್ಲ ಎಂದು ವಿಜ್ಞಾನಿ ಹೇಳಿದ್ದಾರೆ.

ಸೋಂಕನ್ನು ತಪ್ಪಿಸುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮಾಸ್ಕ್ ಇಲ್ಲದೆ ಸೋಂಕಿನ ಜನರೊಂದಿಗೆ ತುಂಬಾ ಮುಚ್ಚಿದ ವಾತಾವರಣದಲ್ಲಿರುವುದನ್ನು ತಪ್ಪಿಸಿಕೊಳ್ಳಿ. ಒಂದೊಮ್ಮೆ ಅನಿವಾರ್ಯತೆವಾಗಿದ್ದರೆ ಮಾಸ್ಕ್ ಧರಿಸುವುದನ್ನು ಮರೆಯಬೇಡಿ ಎಂದು ಅವರು ಹೇಳಿದ್ದಾರೆ.

ಮುಕ್ತವಾದ ಜಾಗದಲ್ಲಿ ಹೆಚ್ಚು ಇರಲು ಪ್ರಯತ್ನಿಸಿ. ಹೆಚ್ಚಿನ ಪ್ರಕರಣಗಳು ಹೆಚ್ಚು ಜನಸಂದಣಿಯಿಂದಲೇ ಉತ್ಪತ್ತಿಯಾಗುತ್ತವೆ. ತೀವ್ರ ಆಯಾಸ, ದೀರ್ಘಕಾಲದ ಜ್ವರದಂತಹ ಲಕ್ಷಣಗಳನ್ನು ಹೊಂದಿದ್ದರೆ ಅಥವಾ ನೀವು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೆ ಆಸ್ಪತ್ರೆಗೆ ಭೇಟಿ ನೀಡುವುದು ಸೂಕ್ತ ಎಂದು ಡಾ. ಸೌಮ್ಯ ಸ್ವಾಮಿನಾಥನ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Covid Subvariant JN1: ಕೋವಿಡ್‌ ಉಲ್ಬಣ; ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

Exit mobile version