ಲಖನೌ: ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯಾನಾಥ್(Yogi Adityanath) ಮತ್ತು ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ(Keshav Prasad Maurya) ನಡುವಿನ ಭಿನ್ನಮತವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಸಮಾಜವಾದಿ ಪಕ್ಷ ಮುಂಬರುವ ವಿಧಾನಸಭೆಯಲ್ಲಿ ಮತ್ತೆ ಗದ್ದುಗೆ ಏರುವುದು ಖಚಿತ, ಬಿಜೆಪಿ ಸೋಲು ನಿಶ್ಚಿತ ಎಂದು ಹೇಳಿಕೆ ನೀಡುತ್ತಿದ್ದಾರೆ. ಅದೂ ಅಲ್ಲದೇ ಮಳೆಗಾಲದ ಆಫರ್! 100 ಶಾಸಕರನ್ನು ತನ್ನಿ ಸರ್ಕಾರ ರಚಿಸಿ ಎಂದು ಅಖಿಲೇಶ್ ಯಾದವ್(Akhilesh Yadav) ಕೂಡ ಟ್ವೀಟ್ ಮಾಡಿ ಬಿಜೆಪಿಯನ್ನು ಕೆಣಕಿದ್ದರು. ಇದೀಗ ಇದಕ್ಕೆ ಕೇಶವ್ ಪ್ರಸಾದ್ ಯಾದವ್ ತಿರುಗೇಟು ನೀಡಿದ್ದಾರೆ.
ಅಖಿಲೇಶ್ ಯಾದವ್ ಅವರು ಹಗಲುಗನಸು ಕಾಣುತ್ತಿದ್ದಾರೆ. ಸಮಾಜವಾದಿ ಪಕ್ಷವೊಂದು ಮುಳುಗುತ್ತಿರುವ ಹಡಗು. 2017ನಂತಹ ಸೋಲು ಎಸ್‌ಪಿಗೆ ಕಟ್ಟಿಟ್ಟ ಬುತ್ತಿ. 2027ರಲ್ಲಿ ಬಿಜೆಪಿ ಮತ್ತೊಮ್ಮೆ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಖಚಿತ. ಬಿಜೆಪಿ ಕಾರ್ಯಕರ್ತರು ಮಾನ್ಸೂನ್ ಆಫರನ್ನು ತಂದೆ ತರುತ್ತಾರೆ. ಎಸ್‌ಪಿ ಒಂದು ಸಾಯುತ್ತಿರುವ ಪಕ್ಷ. ಯಾದವ್ ಅವರು ಮುಂಗೇರಿಲಾಲ್‌ನ ಹಗಲುಗನಸಿನಂತೆ ಕನಸು ಕಾಣುತ್ತಲೇ ಇರಲಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
मानसून आफर को 2027 में 47 पर जनता और कार्यकर्ता फिर समेटेंगे।
— Keshav Prasad Maurya (@kpmaurya1) July 19, 2024
एक डूबता जहाज़ और समाप्त होने वाला दल जिसका वर्तमान और भविष्य ख़तरे में है।
वह मुंगेरीलाल के हसीन सपने देख सकता है,
परंतु पूर्ण नहीं हो सकता।
2027 में 2017 दोहरायेंगे,
फिर कमल की सरकार बनायेंगे।
ಕಳೆದ ಜೂನ್ 14ರಂದು ಲಖನೌದಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೋಕಸಭೆ ಚುನಾವಣೆಯ ಹಿನ್ನಡೆಗೆ ‘ಅತಿಯಾದ ಆತ್ಮವಿಶ್ವಾಸ’ ಕಾರಣ ಎಂದು ಸಿಎಂ ಯೋಗಿ ಆದಿತ್ಯನಾಥ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಸೇರಿದಂತೆ ರಾಜ್ಯ ಬಿಜೆಪಿಯ ಹಲವು ನಾಯಕರು, ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಸೋಲಿಗೆ ಯೋಗಿ ಅವರ ಆಡಳಿತ ಶೈಲಿಯೇ ಕಾರಣ ಎಂದು ಆರೋಪಿಸುತ್ತಿದ್ದರು. ಸಿಎಂ ಯೋಗಿ ಆದಿತ್ಯಾನಾಥ್ ಮತ್ತು ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಇಬ್ಬರ ನಡುವಿನ ಭಾರೀ ಭಿನ್ನಮತದ ಬೆನ್ನಲ್ಲೇ ಕೇಶವ್ ಪ್ರಸಾದ್ ಮೌರ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರನ್ನು ಭೇಟಿ ಮಾಡಿದ್ದರು.
ಅಖಿಲೇಶ್ ಯಾದವ್ ಗೆ ತಿರುಗೇಟು
ಏತನ್ಮಧ್ಯೆ, ಮೌರ್ಯ ಅವರ ಪೋಸ್ಟ್ ಅನ್ನೇ ಅಸ್ತ್ರವನ್ನಾಗಿಸಿಕೊಂಡು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ವ್ಯಂಗ್ಯವಾಡಿದೆ. ಈ ಬಗ್ಗೆ ಎಸ್ಪಿ ನಾಯಕ ಅಖಲೇಶ್ ಯಾದವ್ ಬಿಜೆಪಿಯನ್ನು ಟೀಕಿಸಿದ್ದರು. ಇದಕ್ಕೆ ಟಾಂಗ್ ಕೊಟ್ಟ, ಕೇಶವ್ ಪ್ರಸಾದ್ ಮೌರ್ಯ, ಇಂದು ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಬಲವಾಗಿದೆ ಮತ್ತು 2027 ರಲ್ಲಿ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿದರು.
ಇದನ್ನೂ ಓದಿ:Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು