Site icon Vistara News

ಇಂದಿರಾ ಗಾಂಧಿ ಜನ್ಮದಿನದಂದು ಏರ್‌ ಇಂಡಿಯಾ ವಿಮಾನ ಸ್ಫೋಟಕ್ಕೆ ಖಲಿಸ್ತಾನಿ ಉಗ್ರರ ಸಂಚು; ವಿಡಿಯೊ ರಿಲೀಸ್!

Gurpatwant Singh Pannun

Gurpatwant Singh Pannun

ಒಟ್ಟಾವ/ನವದೆಹಲಿ: ಭಾರತ ಕೆನಡಾ ಬಿಕ್ಕಟ್ಟು ಉಲ್ಬಣವಾದ ಬಳಿಕ ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟಿಸ್‌ (Sikhs For Justice) ಸಂಘಟನೆಯ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಉಪಟಳ ಜಾಸ್ತಿಯಾಗಿದೆ. ಭಾರತ ವಿರೋಧಿ ಕೃತ್ಯಗಳು ಜಾಸ್ತಿಯಾಗಿವೆ. ಇದರ ಬೆನ್ನಲ್ಲೇ, ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಮತ್ತೊಂದು ಬೆದರಿಕೆ ವಿಡಿಯೊ ಬಿಡುಗಡೆ ಮಾಡಿದ್ದು, “ನವೆಂಬರ್‌ 19ರಂದು ಭಾರತದ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸುವುದಾಗಿ” ಹೇಳಿದ್ದಾನೆ.

ನವೆಂಬರ್‌ 4ರಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ ಬಿಟ್ಟಿದ್ದು, “ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದಾನೆ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ.

ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದ ಬಳಿಕ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಉಪಟಳ ಜಾಸ್ತಿಯಾಗುತ್ತಿದೆ. ಕೆನಡಾದಲ್ಲಿರುವ ಹಿಂದುಗಳಿಗೆ ಬೆದರಿಕೆ ಹಾಕುವುದು ಸೇರಿ ಹಲವು ಕೃತ್ಯಗಳಲ್ಲಿ ಖಲಿಸ್ತಾನಿ ಉಗ್ರರು ತೊಡಗಿದ್ದಾರೆ. ಇದಕ್ಕೆಲ್ಲ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಪಿತೂರಿ ಇದೆ. ಆದರೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), 1967 ರ ಸೆಕ್ಷನ್ 33 (5) ರ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರ್​ಪತ್ವಂತ್ ಸಿಂಗ್ ಪನ್ನುನ್​ಗೆ ಸೇರಿದ ಚಂಡೀಗಢದಲ್ಲಿನ ಮನೆ ಮತ್ತು ಅಮೃತಸರದ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಆತನಿಗೆ ಭಾರತದ ಬಾಗಿಲನ್ನು ಸಂಪೂರ್ಣ ಬಂದ್ ಮಾಡುವ ಜತೆಗೆ ಆತನಿಗೆ ಇಲ್ಲಿಂದ ಒಂದು ಪೈಸೆಯೂ ದೊರೆಯದಂತೆ ಮಾಡಿದೆ.

ಇದನ್ನೂ ಓದಿ: Gurpatwant Singh Pannun: ದೆಹಲಿಯಲ್ಲಿ ಮತ್ತೆ ಖಲಿಸ್ತಾನಿ ಬರಹ; ಆಸ್ತಿ ಜಪ್ತಿ ಬೆನ್ನಲ್ಲೇ ಪನ್ನುನ್‌ ಕುತಂತ್ರ

ಗುರುಪತ್ವಂತ್ ಸಿಂಗ್ ಪನ್ನುನ್ ಯಾರು?

2020 ರಲ್ಲಿ ಭಾರತದಿಂದ ಭಯೋತ್ಪಾದಕ ಎಂದು ಕರೆಯಲಾದ ಪನ್ನುನ್, ಯುಎಸ್ ಮೂಲದ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್​ಜಿ) ಗುಂಪಿನ ಸ್ಥಾಪಕರಲ್ಲಿ ಒಬ್ಬ. ಕೆನಡಾದ ಟೊರೊಂಟೊದಲ್ಲಿ ವಾಸಿಸುತ್ತಿದ್ದ ಆತ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ್ದಾನೆ. ಹರ್ದೀಪ್ ಸಿಂಗ್ ನಿಜ್ಜರ್ ಜತೆ ನಿಕಟ ಸಂಬಂಧ ಹೊಂದಿದ್ದ ಎಂದು ವರದಿಯಾಗಿದೆ, ನಿಜ್ನರ್​ ಹತ್ಯೆಯ ಹಿಂದೆ ಭಾರತ ಸರ್ಕಾರದವಿದೆ ಎಂದು ಕೆನಡಾ ಆರೋಪಿಸಿದ ಬಳಿಕ ಪನ್ನುನ್​ ಭಾರತದ ಹಿಂದೂಗಳಿಗೆ ಬೆದರಿಕೆ ಹಾಕಿದ್ದರ. ಪನ್ನುನ್​ ಮೇಲೆ ಭಯೋತ್ಪಾದನೆ ಮತ್ತು ದೇಶದ್ರೋಹದ ಆರೋಪಗಳು ಸೇರಿದಂತೆ 2017 ರಿಂದ ಪನ್ನುನ್ ವಿರುದ್ಧ 22 ಪ್ರಕರಣಗಳು ದಾಖಲಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version