Site icon Vistara News

Khalistani Terrorist: ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನ ಹತ್ಯೆ

Punjab Gangster Sukhdool Singh

Khalistani Terrorist Sukha Duneke Killed In Canada Gang War: Sources

ಒಟ್ಟಾವ: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಸರ್ಕಾರ ಆರೋಪಿಸಿದ ಬೆನ್ನಲ್ಲೇ ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನನ್ನು (Khalistani Terrorist) ಹತ್ಯೆಯಾಗಿದೆ. ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಸುಖ್‌ದೂಲ್‌ ಸಿಂಗ್‌ನನ್ನು (Sukha Duneke) (ಸುಖಾ ದುನೆಕೆ ಎಂದೇ ಖ್ಯಾತಿ) ಬುಧವಾರ (ಸೆಪ್ಟೆಂಬರ್‌ 20) ರಾತ್ರಿ ಹತ್ಯೆ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದವಿಂದರ್‌ ಬಾಂಬಿಹಾ ಎಂಬ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಸುಖಾ ದುನೆಕೆಯನ್ನು ಮೋಗಾ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಗ್ಯಾಂಗ್‌ವಾರ್‌ನಲ್ಲಿ ಸುಖಾ ದುನೆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಜೂನ್‌ 19ರಂದು ಆಂತರಿಕ ಗ್ಯಾಂಗ್‌ವಾರ್‌ನಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಸರ‍್ರೆಯಲ್ಲಿ ಹತ್ಯೆ ಮಾಡಲಾಗಿತ್ತು. ಇಬ್ಬರ ಹತ್ಯೆಯ ಮಾದರಿಯೂ ಒಂದೇ ಆಗಿದೆ ಎಂದು ಮೂಲಗಳು ತಿಳಿಸಿವೆ. ನಿಜ್ಜರ್‌ಗೆ 15 ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಸುಖಾ ದುನೆಕೆಯು ಹಲವು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ತಿಳಿದುಬಂದಿದೆ.

ನಕಲಿ ದಾಖಲೆ ಸೃಷ್ಟಿಸಿ ಪರಾರಿ

ಪಂಜಾಬ್‌ನಲ್ಲಿ ಹಲವು ಅಪರಾಧಗಳಲ್ಲಿ ತೊಡಗಿದ್ದ ಸುಖಾ ದುನೆಕೆಯು 2017ರಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆನಡಾಗೆ ಪರಾರಿಯಾಗಿದ್ದ. ಅಲ್ಲಿ, ದವಿಂದರ್‌ ಬಾಂಬಿಹಾ ಎಂಬ ಗ್ಯಾಂಗ್‌ ಜತೆ ಗುರುತಿಸಿಕೊಂಡಿರುವ ಈತ ಖಲಿಸ್ತಾನಿಗಳ ಉಗ್ರರ ಒಡನಾಟವನ್ನೂ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ದವಿಂದರ್‌ ಬಾಂಬಿಹಾ ಗ್ಯಾಂಗ್‌ನ ವಿರೋಧಿ ಬಣದ ಜತೆ ಆಗಾಗ ಕಾಳಗಗಳು ನಡೆಯುತ್ತಿವೆ. ಇಂತಹ ಸಂಘರ್ಷದಲ್ಲಿ ಸುಖಾ ದುನೆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪಾಕ್ ಮಾನವ ಹಕ್ಕು ಹೋರಾಟಗಾರ್ತಿ ಹತ್ಯೆಯಲ್ಲಿ ಕೆನಡಾ ಸರ್ಕಾರದ ಪಾತ್ರ?

ಜೂನ್‌ 19ರಂದು ಇಂತಹ ಗ್ಯಾಂಗ್‌ವಾರ್‌ನಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಹತ್ಯೆ ಮಾಡಿದ ಬಳಿಕ ಸುಮ್ಮನಿದ್ದ ಕೆನಡಾ ಈಗ ಭಾರತದ ಮೇಲೆ ಆರೋಪ ಮಾಡುತ್ತಿದೆ. ಜಿ20 ಶೃಂಗಸಭೆಗಾಗಿ ಭಾರತಕ್ಕೆ ಬಂದಿದ್ದ ಜಸ್ಟಿನ್‌ ಟ್ರುಡೋ ಅವರಿಗೆ, “ಕೆನಡಾದಲ್ಲಿ ಭಾರತ ವಿರೋಧಿ ಕೃತ್ಯಗಳನ್ನು ನಿಗ್ರಹಿಸಿ” ಎಂದು ನರೇಂದ್ರ ಮೋದಿ ಹೇಳಿರುವುದು ಕೆನಡಾ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ, ನಿಜ್ಜರ್‌ ಹತ್ಯೆಯ ಆರೋಪವನ್ನು ಕೆನಡಾ ಭಾರತದ ಮೇಲೆ ಹಾಕಿದೆ. ಇನ್ನು, ಇದರ ಕುರಿತ ತನಿಖೆಗೆ ಭಾರತ ಸಹಕರಿಸಬೇಕು ಎಂದು ಕೂಡ ಅಮೆರಿಕ ಹೇಳಿದೆ.

Exit mobile version