Site icon Vistara News

Gujarat High Court: 3 ವರ್ಷದೊಳಗಿನ ಮಕ್ಕಳನ್ನು ಪ್ರಿಸ್ಕೂಲ್‌ಗೆ ಸೇರಿಸುವುದು ಕಾನೂನುಬಾಹಿರ ಕೃತ್ಯ; ಗುಜರಾತ್ ಹೈಕೋರ್ಟ್

Gujarat High Court

ನವದೆಹಲಿ: ಪೋಷಕರು ತಮ್ಮ ಮೂರು(3 Years Kids) ವರ್ಷದೊಳಗಿನ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಪ್ರೀಸ್ಕೂಲ್‌ಗೆ ಕಳುಹಿಸುವುದು ಕಾನೂನುಬಾಹಿರ ಕೃತ್ಯ (an illegal act) ಎನಿಸಿಕೊಳ್ಳುತ್ತದೆ ಎಂದು ಗುಜರಾತ್ ಹೈಕೋರ್ಟ್ (Gujarat High Court) ಹೇಳಿದೆ. 2023-24ನೇ ಶೈಕ್ಷಣಿಕೆ ಸಾಲಿನಿಂದ ಒಂದನೇ ತರಗತಿ ಪ್ರವೇಶಕ್ಕೆ ಮಗುವಿಗೆ 6 ವರ್ಷ ಪೂರ್ತಿಯಾಗಿರಬೇಕೆಂದು ಗುಜರಾತ್ ಸರ್ಕಾರ (Gujarat Government) ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹಲವುರ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ವೇಳೆ, ಮೂರು ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಾನೂನುಬಾಹಿರ ಕೃತ್ಯಗಳು ಎನಿಸಿಕೊಳ್ಳುತ್ತವೆ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ಜೂನ್ 1, 2023ಕ್ಕೆ ಆರು ವರ್ಷಗಳನ್ನು ಪೂರೈಸದ ಮಕ್ಕಳ ಪೋಷಕರ ಗುಂಪು 2023-24ರ ಶೈಕ್ಷಣಿಕ ವರ್ಷದಲ್ಲಿ 1 ನೇ ತರಗತಿಗೆ ಪ್ರವೇಶಕ್ಕಾಗಿ ವಯಸ್ಸಿನ ಮಿತಿಯನ್ನು ನಿಗದಿಪಡಿಸುವ ಜನವರಿ 31, 2020 ರ ದಿನಾಂಕದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪ್ರಿಸ್ಕೂಲ್‌ಗೆ ಹೋಗಲು ಒತ್ತಾಯಿಸುವುದು ನಮ್ಮ ಮುಂದೆ ಅರ್ಜಿದಾರರಾಗಿರುವ ಪೋಷಕರ ಕಡೆಯಿಂದ ಕಾನೂನುಬಾಹಿರ ಕ್ರಮವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಅವರ ವಿಭಾಗೀಯ ಪೀಠವು ಆದೇಶದಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: OBC Reservation: ಬಿಜೆಪಿ ರಣತಂತ್ರ; ಗುಜರಾತ್‌ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ 17% ಹೆಚ್ಚಳ

ಪೋಷಕರು ಮನವಿ ಸಲ್ಲಿಸಿದ ಮಕ್ಕಳನ್ನು ಅವರು, ಮೂರು ವರ್ಷಗಳನ್ನು ಪೂರೈಸುವ ಮೊದಲು ಪ್ರಿಸ್ಕೂಲ್‌ಗೆ ಸೇರಿಸಿದ್ದರು. 2012 ರ ಆರ್‌ಟಿಐ ನಿಯಮಗಳ ಪ್ರಕಾರ ಪ್ರಿಸ್ಕೂಲ್‌ನಲ್ಲಿ ಪ್ರವೇಶಕ್ಕೆ ನಿಗದಿಪಡಿಸಲಾದ ಕನಿಷ್ಠ ವಯಸ್ಸಾಗಿದ್ದು, 2012 ಫೆಬ್ರವರಿ 18ರಂದು ಗುಜರಾತ್‌ನಲ್ಲಿ ಜಾರಿಗೊಳಿಸಲಾಗಿದೆ ಎಂದು ವಾದಿಸಿದ್ದರು. ಗುಜರಾತ್‌ ಸರ್ಕಾರದ ಆದೇಶದಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಮಾರು ಒಂಬತ್ತು ಲಕ್ಷ ಮಕ್ಕಳ ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಾರೆ. ಹಾಗಾಗಿ, ಜೂನ್ 1 ಅನ್ನು ಪ್ರಸಕ್ತ ಶೈಕ್ಷಣಿಕ ವರ್ಷದ ಕಟ್-ಆಫ್ ದಿನಾಂಕವನ್ನಾಗಿ ನಿಗದಿಪಡಿಸುವುದನ್ನು ಪ್ರಶ್ನಿಸಲು ನಾವು ಬಯಸುತ್ತೇವೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version