Site icon Vistara News

King Charles III: ಬ್ರಿಟನ್‌ನ ಕಿಂಗ್ ಚಾರ್ಲ್ಸ್‌, ಕೆಮಿಲಾ ಪಟ್ಟಾಭಿಷೇಕ; ಮೋದಿ ಅಭಿನಂದನೆ

King Charles III and Queen Camilla formally crowned; PM Modi tweets congratulations

King Charles III and Queen Camilla formally crowned; PM Modi tweets congratulations

ನವದೆಹಲಿ: ಬ್ರಿಟನ್‌ ಅರಸನಾಗಿ ಕಿಂಗ್‌ ಚಾರ್ಲ್ಸ್‌ III (King Charles III) ಅವರ ಪಟ್ಟಾಭಿಷೇಕ ನೆರವೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಿಂಗ್‌ ಚಾರ್ಲ್ಸ್‌ III ಹಾಗೂ ಅವರ ಪತ್ನಿ ಕ್ವೀನ್‌ ಕೆಮಿಲಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಕಿಂಗ್‌ ಚಾರ್ಲ್ಸ್‌ III ಹಾಗೂ ಕ್ವೀನ್‌ ಕೆಮಿಲಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ ಹಾಗೂ ಬ್ರಿಟನ್‌ ಸಂಬಂಧವು ಇನ್ನಷ್ಟು ವೃದ್ಧಿಸಲಿದೆ ಎಂಬ ವಿಶ್ವಾಸ ನಮ್ಮದು” ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ನರೇಂದ್ರ ಮೋದಿ ಟ್ವೀಟ್‌

ಬ್ರಿಟನ್‌ನ ವೆಸ್ಟ್‌ ಮಿನಿಸ್ಟರ್‌ ಅಬೆಯಲ್ಲಿರುವ ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಚಾರ್ಲ್ಸ್‌ ಹಾಗೂ ಕೆಮೆಲ್‌ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು. 1952ರ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್‌ ಅರಸನ ಪಟ್ಟಾಭಿಷೇಕ ನೆರವೇರಿದೆ. 1952ರಲ್ಲಿ ಬ್ರಿಟನ್‌ ರಾಣಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕ್ವೀನ್‌ ಎಲಿಜಬೆತ್‌ II ಅವರು ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ಹಾಗಾಗಿ, ಚಾರ್ಲ್ಸ್‌ III ಅವರಿಗೆ ಪಟ್ಟಾಭಿಷೇಕ ಮಾಡಲಾಗಿದೆ.

ಪಟ್ಟಾಭಿಷೇಕದ ವಿಡಿಯೊ

ಮೂರನೇ ಸಾಲಿನಲ್ಲಿ ಕುಳಿತ ಹ್ಯಾರಿ

ಚಾರ್ಲ್ಸ್‌ ಅವರ ಕಿರಿಯ ಪುತ್ರ ಪ್ರಿನ್ಸ್‌ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್‌ ಅವರು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಆದರೆ, ಅವರನ್ನು ಮೂರನೇ ಸಾಲಿನಲ್ಲಿ ಕೂರಿಸಲಾಗಿತ್ತು. ಇದರಿಂದ, ಬ್ರಿಟನ್‌ ರಾಜಮನೆತನದ ಜತೆಗಿನ ಮುನಿಸು ಹಾಗೆಯೇ ಮುಂದುವರಿದಿದೆ ಎಂಬುದು ಜಗಜ್ಜಾಹೀರಾಗಿದೆ.

ಇದನ್ನೂ ಓದಿ: Modi In Karnataka: ಭಾನುವಾರವೂ ಇರಲಿದೆ ಬೆಂಗಳೂರಲ್ಲಿ ಮೋದಿ ಮೋಡಿ; ರೋಡ್‌ ಶೋ ಎಲ್ಲೆಲ್ಲಿ?

ಭಾರತದ ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಹಾಗೂ ಬಾಲಿವುಡ್‌ ನಟಿ ಸೋನಂ ಕಪೂರ್‌ ಅವರು ಕೂಡ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ.

Exit mobile version