ನವದೆಹಲಿ: ಸೌಹಾರ್ದ ವಾತಾವರಣ ಮತ್ತು ತನ್ನ ವಿಶಿಷ್ಟ ವಾಸ್ತುಶಿಲ್ಪ (harmony and unique architecture) ಕಾರಣಕ್ಕಾಗಿ ಪಶ್ಚಿಮ ಬಂಗಾಳದ (West Bengal) ಕಿರೀಟೇಶ್ವರಿ ಹಳ್ಳಿಯು (Kiriteshwari village) ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ (Best Tourism Village of India) ಎಂಬ ಗೌರವಕ್ಕೆ ಪಾತ್ರವಾಗಿದೆ. ಪಶ್ಚಿಮ ಬಂಗಾಳದ ಮುರ್ಶಿಬಾದ್ ಜಿಲ್ಲೆಯಲ್ಲಿರುವ ಈ ಕಿರೀಟೇಶ್ವರಿ ಹಳ್ಳಿಯ ತನ್ನ ವಿಶಿಷ್ಟತೆಯಿಂದಾಗಿ ಗಮನ ಸೆಳೆಯುತ್ತಿದೆ. ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿಯಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಇತ್ತೀಚೆಗೆ ಆಯ್ಕೆ ಮಾಡಿದೆ.
ಶಕ್ತಿ ಪೀಠಗಳಲ್ಲಿ ಒಂದಾಗಿರುವ ಕಿರೀಟೇಶ್ವರಿ ದೇಗಲುದಿಂದಾಗಿ ಈ ಹಳ್ಳಿಗೆ ಕೀರ್ತೇಶ್ವರಿ ಎಂಬ ಹೆಸರು ಬಂದಿದೆ. ಪುರಾಣದ ಪ್ರಕಾರ ಸತಿ ದೇವಿಯ ತಲೆಬುರುಡೆಯ ಮೇಲ್ಭಾಗವು ಇಲ್ಲಿ ಬಿದ್ದಿದೆ. ಹಲವಾರು ಹೊಸ ದೇವಾಲಯಗಳು ಮತ್ತು ಹಳೆಯ ದೇವಾಲಯಗಳ ಅವಶೇಷಗಳು ಇಲ್ಲಿ ಸಹ ಅಸ್ತಿತ್ವದಲ್ಲಿವೆ. ಕಿರಿಟ್‌ಕೋಣ ಎಂದೂ ಕರೆಯಲ್ಪಡುವ ಈ ಗ್ರಾಮವು ಜಿಲ್ಲಾ ಕೇಂದ್ರವಾದ ಬರ್ಹಾಂಪುರದಿಂದ 20 ಕಿಮೀ ದೂರದಲ್ಲಿದೆ. 1,200 ಕ್ಕಿಂತ ಸ್ವಲ್ಪ ಹೆಚ್ಚು ಮತದಾರರಿರುವ ಕುಗ್ರಾಮವಾಗಿದ್ದು, ಕೃಷಿ ಮುಖ್ಯ ಉದ್ಯೋಗವಾಗಿದೆ.
ಈ ಹಳ್ಳಿಯು ಕೋಮು ಸೌಹಾರ್ದತೆಗೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಇಲ್ಲಿ, ದೇವಸ್ಥಾನ ಸಮಿತಿಯು ಮುಸ್ಲಿಂ ಸಮುದಾಯದ ಸದಸ್ಯರನ್ನು ಹೊಂದಿದೆ ಮತ್ತು ಅವರು ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಆಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ದೇವಾಲಯದ ಒಂದು ಭಾಗ ಇದ್ದುದರಿಂದ ಮುಸ್ಲಿಮರು ಹಿಂದೂಗಳಿಗೆ ತುಂಡು ಭೂಮಿಯನ್ನು ಸಹ ನೀಡಿದ್ದಾರೆ.
ಮುಸ್ಲಿಮ್‌ರಿಂದ ಭೂ ದಾನ
ನನ್ನ ಅಜ್ಜ ದೇವಸ್ಥಾನಕ್ಕೆ ಭೂಮಿ ನೀಡಲು ಇಚ್ಛೆ ಪಟ್ಟಿದ್ದರು. ಅವರ ಆಸೆಯಂತೆ ದೇವಸ್ಥಾನಕ್ಕೆ ಭೂಮಿಯನ್ನು ನೀಡಲಾಗಿದೆ. ಎರಡು ವರ್ಷಗಳ ಹಿಂದೆ ಭೂ ವರ್ಗಾಣೆಗೆ ಸಂಬಂಧಿಸದಂತೆ ದಾಖಲೆ ಪತ್ರಗಳ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಕಿರೀಟೇಶ್ವರಿ ದೇಗುಲ ಸಮಿತಿಯ ಸದಸ್ಯ ಸಿರಾಜುಲ್ ಇಸ್ಲಾಮ್ ಅವರು ಹೇಳಿದ್ದಾರೆ. ಪ್ರತಿ ವರ್ಷವೂ ಅಷ್ಠಮಿ ವೇಳೆ ದುರ್ಗಾಪೂಜೆಯ ದೊಡ್ಡ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ, ಮುಸ್ಲಿಮ್ ಕುಟುಂಬಗಳು ಸೇರಿದಂತೆ ಸುಮಾರು 7 ಸಾವಿರದಿಂದ 8 ಸಾವಿರವರೆಗೂ ಜನರು ಸೇರುತ್ತಾರೆ.
300 ವರ್ಷಗಳ ಹಿಂದೆ ದೇಗುಲ ನಿರ್ಮಾಣ
ಸುಮಾರು 300 ವರ್ಷಗಳ ಹಿಂದೆ ಕಿರೀಟೇಶ್ವರ ದೇಗುಲವನ್ನು ನಥೋರ್‌ನ ರಾಣಿ ಭವಾನಿ ಅವರು ನಿರ್ಮಾಣ ಮಾಡಿದರು. ಅಂದಿನಿಂದಲೂ ಪ್ರತಿ ದಿನ ಪೂಜೆಯನ್ನು ನಡೆಸಲಾಗುತ್ತದೆ. ಬಳಿಕ, ನೂರು ವರ್ಷಗಳ ಹಿಂದೆ ಲಾಲಗೋಲಾ ಮಹಾರಾಜ ಯೋಗೇಂದ್ರ ನಾರಾಯಣ್ ರಾಯ್ ಅವರು ಈ ದೇಗುಲವನ್ನು ರಿಪೇರಿ ಮಾಡಿದರು ಎಂದು ದೇಗುಲದಲ್ಲಿ ಅರ್ಚಕರಾಗಿರುವ ದಿಲೀಪ್ ಕುಮಾರ್ ಭಟ್ಟಚಾರ್ಯ ಅವರು ಹೇಳುತ್ತಾರೆ. ಆದರೆ, ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ದೇಗಲವು ಸುಮಾರು 900ರಿಂದ ಸಾವಿರ ವರ್ಷಗಳಷ್ಟು ಹಳೆಯದು. ಅದೀಗ ಪಾಳು ಬಿದ್ದಿದೆ. ಹಾಗೆಯೇ, ಹಳ್ಳಿಯ ಸುತ್ತ ಇನ್ನೂ ಎಷ್ಟು ಪ್ರಾಚೀನ ದೇಗುಲಗಳಿವೆ ಎಂಬ ಬಗ್ಗೆ ನಮಗೇ ಗೊತ್ತಿಲ್ಲ. ಕೆಲವರು ಅವರು ಶಿವ ದೇವಾಲಯಗಳು ಎಂದು ಹೇಳುತ್ತಾರೆ ಎಂದು ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Bangalore Tourist Places : ಬೆಂಗಳೂರಿಗೆ ಬಂದಾಗ ನೀವು ನೋಡಲೇಬೇಕಾದ ಟಾಪ್ 11 ಪ್ರವಾಸಿ ಸ್ಥಳಗಳಿವು
300 ವರ್ಷಗಳಷ್ಟು ಹಳೆಯದಾದ ಕಿರೀಟೇಶ್ವರಿ ದೇವಸ್ಥಾನದ ವಿಶೇಷತೆಯು ಅದರ ರಚನೆಯಲ್ಲಿದೆ ಎದ್ದು ಕಾಣುತ್ತದೆ. ಅದರ ಛಾವಣಿಯು ಬೌದ್ಧ, ಮುಸ್ಲಿಂ ಮತ್ತು ಹಿಂದೂ ವಾಸ್ತುಶಿಲ್ಪದ ಪ್ರಭಾವವನ್ನು ಹೊಂದಿದೆ. ಕಪ್ಪು ಕಲ್ಲನ್ನು ದೇವತೆಯಾಗಿ ಪೂಜಿಸುವ ‘ಗರ್ಭ ಗೃಹ’ ವಿನ್ಯಾಸವು ಹಿಂದೂ, ಬೌದ್ಧ ಮತ್ತು ಮುಸ್ಲಿಂ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ದೇವಸ್ಥಾನ ಮಾತ್ರವಲ್ಲದೇ, ಇಡೀ ಹಳ್ಳಿಯು ಸೌಹಾರ್ದತೆಗೆ ಮಾದರಿಯಾಗಿದೆ.