Site icon Vistara News

Kolkata Doctor Murder Case: ಬರೋಬ್ಬರಿ 11ದಿನಗಳ ಬಳಿಕ ಮುಷ್ಕರ ಹಿಂಪಡೆದ ವೈದ್ಯರು

kolkata Doctor murder case

ನವದೆಹಲಿ: ಕೊಲ್ಕತ್ತಾ ಟ್ರೈನಿ ವೈದ್ಯೆ ಕೊಲೆ ಅತ್ಯಾಚಾರ ಕೊಲೆ ಪ್ರಕರಣ(Kolkata Doctor Murder Case) ಖಂಡಿಸಿ ದೇಶವ್ಯಾಪಿ ವೈದ್ಯರು ಕಳೆದ 11 ದಿನಗಳಿಂದ ನಡೆಸುತ್ತಿರುವ ಮುಷ್ಕರವನ್ನು ಹಿಂಪಡೆದಿದ್ದಾರೆ(Doctors Strike Called Off). ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಸುಪ್ರೀಂಕೋರ್ಟ್‌(Supreme Court) ಭರವಸೆ ನೀಡಿರುವ ಬೆನ್ನಲ್ಲೇ ವೈದ್ಯರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ. ಅಲ್ಲದೇ ಆಗಸ್ಟ್ 23ರಂದು ಅಂದರೆ ನಾಳೆ ಬೆಳಿಗ್ಗೆ 8 ಗಂಟೆಯಿಂದ ಸೇವೆಯನ್ನು ಮರು ಆರಂಭಿಸಲಾಗುವುದು ಎಂದು ವೈದ್ಯಕೀಯ ಸಂಘ ತಿಳಿಸಿದೆ.

ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಡಾ.ಆರ್‌.ಎಂ.ಎಲ್.ಆಸ್ಪತ್ರೆ ವೈದ್ಯರ ಸಂಘವು, ಸುಪ್ರೀಂಕೋರ್ಟ್​ ತಮ್ಮ ಬೇಡಿಕೆಗಳು ಮತ್ತು ಕಾಳಜಿಯನ್ನು ಅರ್ಥ ಮಾಡಿಕೊಂಡಿದೆ. ಕೋರ್ಟ್​ನ ಮೇಲಿನ ನಂಬಿಕೆಯಿಂದಾಗಿ ಮುಷ್ಕರ ಅಂತ್ಯಗೊಳಿಸುತ್ತಿದ್ದೇವೆ. ವೈದ್ಯರು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 11 ದಿನಗಳ ಮುಷ್ಕರ ಅಂತ್ಯವಾಗಲಿದೆ ಎಂದು ತಿಳಿಸಿದೆ.

ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಮೂಲಕ ಕೋಲ್ಕತ್ತಾ ಹೈಕೋರ್ಟ್‌ ನಮ್ಮ ಮೊದಲ ಬೇಡಿಕೆಯನ್ನು ಈಡೇರಿಸಿದೆ. ಬಳಿಕ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೊಲೆ ಕೇಸ್​ ಅನ್ನು ತನಿಖೆ ನಡೆಸುತ್ತಿದೆ. ಹೀಗಾಗಿ ವೈದ್ಯರ ಮುಷ್ಕರವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ದೆಹಲಿಯ ಏಮ್ಸ್​ ಆಸ್ಪತ್ರೆಯ ಜನರಲ್​ ಸೆಕ್ರೆಟರಿ ರಘುನಂದನ್​​ ದೀಕ್ಷಿತ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಟ್ರೈನಿ ವೈದ್ಯೆ ಕೊಲೆ ಪ್ರಕರಣ- ಪ್ರಧಾನಿ ಮೋದಿಗೆ ದಿಢೀರ್‌ ಪತ್ರ ಬರೆದ ಮಮತಾ ಬ್ಯಾನರ್ಜಿ

Exit mobile version