ಮುಂಬೈ: ಸುರಕ್ಷತಾ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಬಾರದು, ಹೊಸ ಗ್ರಾಹಕರಿಗೆ ಆನ್‌ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸಬಾರದು ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್‌ಗೆ (Kotak Mahindra Bank) ಆರ್‌ಬಿಐ ನಿರ್ಬಂಧ ವಿಧಿಸಿದೆ. ಇದರ ಬೆನ್ನಲ್ಲೇ, ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಷೇರುಗಳ (Kotak Bank Shares) ಮೌಲ್ಯವು ಗುರುವಾರ (ಏಪ್ರಿಲ್ 25) ಶೇ.10ರಷ್ಟು ಕುಸಿತವಾಗಿದೆ. ಇದರಿಂದ ಹೂಡಿಕೆದಾರರಿಗೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಗುರುವಾರ ಷೇರುಪೇಟೆಯಲ್ಲಿ ವಹಿವಾಟು ಆರಂಭವಾಗುತ್ತಲೇ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳ ಮೌಲ್ಯವು ಕುಸಿಯುತ್ತ ಹೋಯಿತು. ಒಟ್ಟು ಶೇ.10ರಷ್ಟು ಮೌಲ್ಯ ಕುಸಿತ ಕಂಡಿದ್ದು, ಬಿಎಸ್‌ಇಯಲ್ಲಿ ಕೊಟಕ್ ಬ್ಯಾಂಕ್‌ನ ಒಂದು ಷೇರಿನ ಮೌಲ್ಯವು 1,658.75 ರೂ.ಗೆ ಕುಸಿತವಾಗಿದೆ. ಅಷ್ಟೇ ಅಲ್ಲ, ಆರ್‌ಬಿಐ ನಿರ್ಬಂಧದಿಂದ ಕೊಟಕ್ ಮಹಿಂದ್ರಾ ಬ್ಯಾಂಕ್‌ಗೆ ಮುಂದಿನ ದಿನಗಳಲ್ಲಿ ಭಾರಿ ನಷ್ಟವಾಗಲಿದೆ. ಬ್ಯಾಂಕ್ ಏಳಿಗೆ, ಹೊಸ ಗ್ರಾಹಕರನ್ನು ಸೆಳೆಯುವಲ್ಲಿಯೂ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
Kotak Mahindra Bank shares crashed by -10% today following the RBI's decision to restrict the bank from onboarding new customers through online and mobile banking channels, as well as issuing new credit cards.
— Kritesh Abhishek (@kritesh_rocks) April 25, 2024
In this digital age, Kotak urgently needs to address these online… pic.twitter.com/UxJiJOLCb3
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ 35ಎ ಸೆಕ್ಷನ್‌ನ ಅಡಿಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿದೆ. ಆರ್‌ಬಿಐ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿದೆ ಎಂದು ತಿಳಿದುಬಂದಿದೆ. “ನೂತನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಬಾರದು. ಹಾಗೆಯೇ, ಹೊಸ ಗ್ರಾಹಕರಿಗೆ ಆನ್‌ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಬಾರದು. ತತ್‌ಕ್ಷಣದಿಂದಲೇ ನಿರ್ಬಂಧಗಳು ಜಾರಿಗೆ ಬರಲಿವೆ” ಎಂದು ಆರ್‌ಬಿಐ ಆದೇಶಿಸಿದೆ.
ಆರ್‌ಬಿಐ ನಿರ್ಬಂಧಕ್ಕೆ ಕಾರಣ ಏನು?

ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಆನ್‌ಲೈನ್ ಮೂಲಕ ವಹಿವಾಟು ನಡೆಸಲು ಬ್ಯಾಂಕ್ ಸರಿಯಾದ ಸುರಕ್ಷತೆ ಒದಗಿಸಿಲ್ಲ. 2022 ಹಾಗೂ 2023ರಲ್ಲಿ ಐಟಿ ಪರಿಶೀಲನೆ ಕುರಿತು ಆರ್‌ಬಿಐ ಆತಂಕ ವ್ಯಕ್ತಪಡಿಸಿದರೂ ಸುರಕ್ಷತೆ ನೀಡುವಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ವಿಫಲವಾಗಿದೆ. ಬ್ಯಾಂಕ್‌ನ ಐಟಿ ಮೂಲ ಸೌಕರ್ಯ, ಐಟಿ ನಿರ್ವಹಣೆ, ಪ್ಯಾಚ್ ಮತ್ತು ಚೇಂಜ್ ಮ್ಯಾನೇಜ್‌ಮೆಂಟ್, ಬಳಕೆದಾರರ ಅನುಮತಿ ನಿರ್ವಹಣೆ, ವೆಂಡರ್ ರಿಸ್ಕ್ ಮ್ಯಾನೇಜ್‌ಮೆಂಟ್, ಡೇಟಾ ಸೆಕ್ಯುರಿಟಿ ಸೇರಿ ಹಲವು ಸುರಕ್ಷತೆಗಳನ್ನು ಒದಗಿಸುವಲ್ಲಿ ಬ್ಯಾಂಕ್ ವಿಫಲವಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದೇ ಕಾರಣಕ್ಕಾಗಿ ನಿರ್ಬಂಧಗಳನ್ನು ವಿಧಿಸಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: Kotak Bank: ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಷೇಧ; ಹಳೆಯ ಗ್ರಾಹಕರಿಗೆ ಏನು ತೊಂದರೆ? ಇಲ್ಲಿದೆ ಮಾಹಿತಿ