ನವದೆಹಲಿ: ನಿಷೇಧಿತ ಸಂಘಟನೆಗಳಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮತ್ತು ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ. 72 ವರ್ಷದ ಲಖ್ಬೀರ್ ಸಿಂಗ್ ರೋಡ್(Lakhbir Singh) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ‘ವೈಯಕ್ತಿಕ ಭಯೋತ್ಪಾದಕ’ ಎಂದು ಪಟ್ಟಿಮಾಡಲಾಗಿತ್ತು. ಭಾರತದಿಂದ ಪಲಾಯನ ಮಾಡಿದ ನಂತರ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ.
ಲಖ್ಬೀರ್ ಸಿಂಗ್ ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ(Bhindranwale) ಅವರ ಸೋದರಳಿಯರಾಗಿದ್ದರು. ಲಖ್ಬೀರ್ ಸಿಂಗ್ ರೋಡೆ ಅವರ ನಿಧನದ ಸುದ್ದಿಯನ್ನು ಅವರ ಸಹೋದರ ಮತ್ತು ಮಾಜಿ ಅಕಲ್ ತಖ್ತ್ ಜತೇದಾರ್, ಖಚಿತಪಡಿಸಿದ್ದಾರೆ. ಲಖ್ಬೀರ್ ಸಿಂಗ್ ರೋಡ್ ಅವರನ್ನು ಈಗಾಗಲೇ ಪಾಕಿಸ್ತಾನದಲ್ಲಿ ದಹನ ಮಾಡಲಾಗಿದೆ ಎಂದು ಜಸ್ಬೀರ್ ಹಳಿದ್ದಾರೆ.
ಈ ವರ್ಷದ ಅಕ್ಟೋಬರ್‌ನಲ್ಲಿ, ಪಂಜಾಬ್‌ನ ಮೊಹಾಲಿಯಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯವು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 33 (5) ರ ಅಡಿಯಲ್ಲಿ ಲಖ್ಬೀರ್ ಸಿಂಗ್ ಅವರಿಗೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿತ್ತು.
ಅಕ್ಟೋಬರ್ 1, 2021 ರಂದು ರೋಡ್ ವಿರುದ್ಧ ನ್ಯಾಯಾಲಯ ಸ್ಫೋಟಕ ವಸ್ತುಗಳ ಕಾಯಿದೆ 1908 ರ ವಿಭಾಗಗಳು 3, 4, 5 & 6 ಸೇರಿದಂತೆ ಬಹು ಆರೋಪಗಳು; UA(P) ಆಕ್ಟ್ 1967 ರ ಸೆಕ್ಷನ್ 16, 17, 18, 18B, 20, 38 & 39, NDPS ಆಕ್ಟ್ 1985 ರ ಸೆಕ್ಷನ್ 21B, 27A, 29, ಮತ್ತು IPC ಯ ಸೆಕ್ಷನ್ 120B. ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ಭಾರತದ ರಾಯಭಾರಿ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿಗಳು!
ಭಾರತದ ಪಂಜಾಬ್, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿ ಉಗ್ರರು (Khalistani Terrorists) ಕೆಲ ದಿನಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿದ ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು (Taranjit Singh Sandhu) ಅವರ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ Khalistani Terrorist: ಖಲಿಸ್ತಾನ್- ಗ್ಯಾಂಗ್‌ಸ್ಟರ್ ಜಾಲ ಭೇದಿಸಲು 6 ರಾಜ್ಯಗಳ 50 ಕಡೆ NIA ದಾಳಿ
ತರಣ್‌ಜಿತ್ ಸಿಂಗ್ ಸಂಧು ಅವರು ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಗುರುದ್ವಾರಕ್ಕೆ ತೆರಳಿದ್ದರು. ಇದೇ ವೇಳೆ ಕೆಲ ಖಲಿಸ್ತಾನಿ ಬೆಂಬಲಿಗರು ಅವರನ್ನು ಅಡ್ಡಹಾಕಿದ್ದರು. ತಳ್ಳಾಟವೂ ನಡೆದಿತ್ತು. ತರಣ್‌ಜಿತ್ ಸಿಂಗ್ ಸಂಧು ಅವರು ವಾಹನದಲ್ಲಿ ತೆರಳುವಾಗ ಖಲಿಸ್ತಾನಿ ಧ್ವಜ ಪ್ರದರ್ಶಿಸುವ ಜತೆಗೆ ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗಿದ್ದರು. ಈ ವಿಡಿಯೊ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆಲ ತಿಂಗಳ ಹಿಂದಷ್ಟೇ ಕೆನಡಾ ಆರೋಪಿಸಿತ್ತು. ಈ ಆರೋಪವನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿತ್ತು ಹಾಗೂ ಸಾಕ್ಷ್ಯ ಕೊಡಿ ಎಂದು ಕೇಳಿತ್ತು. ಅಲ್ಲದೆ, ತರಣ್‌ಜಿತ್ ಸಿಂಗ್ ಸಂಧು ಅವರು ಕೂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ಮಾತನಾಡಿದ್ದಾರೆ. ಕೆನಡಾ ಆರೋಪಗಳಿಗೆ ತಿರುಗೇಟು ನೀಡಿದ್ದರು. ಇದೇ ಕಾರಣಕ್ಕಾಗಿ ಖಲಿಸ್ತಾನಿಗಳು ತರಣ್‌ಜಿತ್ ಸಿಂಗ್ ಸಂಧು ಅವರ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, “ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನೀವೇ ಕಾರಣ. ನೀವೇ ಸಂಚು ಮಾಡಿ ಹತ್ಯೆ ಮಾಡಿದ್ದೀರಿ” ಎಂದು ಕೂಡ ಖಲಿಸ್ತಾನಿಗಳು ಘೋಷಣೆ ಕೂಗಿದ್ದರು.