ನವದೆಹಲಿ: ಬಿಹಾರದ ಮಾಜಿ ಪ್ರಧಾನಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬಿಕರಿಗೆ ಸೇರಿದ 15ಕ್ಕೂ ಅಧಿಕ ಆಸ್ತಿಗಳ ಮೇಲೆ ಸಿಬಿಐ ಶುಕ್ರವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈಗಾಗಲೇ ಹಲವು ಹಗರಣಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಜೈಲುವಾಸವನ್ನೂ ಅನುಭವಿಸಿ ಬಂದಿರುವ ಲಾಲು ಪ್ರಸಾದ್‌ಗೆ ಈಗ ರೈಲ್ವೆ ಜಾಬ್‌ನ ಹಳೆ ಪ್ರಕರಣವೊಂದು ಮತ್ತೆ ಭೂತವಾಗಿ ಕಾಡಿದೆ.
ಲಾಲು ಪ್ರಸಾದ್ ಅವರು ಕೇಂದ್ರದಲ್ಲಿ ರೈಲ್ವೆ ಮಂತ್ರಿ ಆಗಿದ್ದಾಗ ರೈತರಿಂದ ಅಗ್ಗದ ಬೆಲೆಗೆ ಭೂಮಿಯನ್ನು ಖರೀದಿಸಿ ಅವರಿಗೆ ಹೆಚ್ಚಿನ ಪರಿಹಾರವಾಗಿ ರೈಲ್ವೆಯಲ್ಲಿ ಉದ್ಯೋಗ ಕೊಡಿಸುತ್ತಿದ್ದರು ಎಂದು ಆಪಾದಿಸಲಾಗಿದೆ. ರೈಲ್ವೆಯಲ್ಲಿ ಉದ್ಯೋಗ ಸಿಗುತ್ತದೆ, ಬದುಕಿಗೆ ಭದ್ರತೆ ಸಿಗುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ಮಂದಿ ಅಗ್ಗದ ಬೆಲೆಗೆ ಭೂಮಿಯನ್ನು ನೀಡಿದ್ದರು. ಈ ವ್ಯವಹಾರದಲ್ಲಿ ಲಾಲು ಪ್ರಸಾದ್ ಅವರ ಇಡೀ ಕುಟುಂಬವೇ ಭಾಗಿಯಾಗಿತ್ತು ಎಂದು ಆರೋಪಿಸಲಾಗಿದೆ. ಲಾಲು ಕುಟುಂಬ ಈ ತಂತ್ರದ ಮೂಲಕ ಭಾರಿ ಪ್ರಮಾಣದಲ್ಲಿ ಭೂಮಿಯನ್ನು ವಶಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ಒಂದು ಡಜನ್‌ನಷ್ಟು ಕೇಸ್ ಸ್ಟಡಿಗಳು ಸಿಬಿಐ ಬಳಿ ಲಭ್ಯವಿವೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್?: ಬಿಹಾರದಲ್ಲಿ ಇಫ್ತಾರ್ʼ ರಾಜಕೀಯ
ಲಾಲು ಪ್ರಸಾದ್ ಮತ್ತು ಅವರ ಕುಟುಂಬಿಕರಿಗೆ ಸೇರಿದ 16 ಕಡೆಗಳಲ್ಲಿ ದಾಳಿ ನಡೆದಿದೆ. ದಿಲ್ಲಿ, ಪಟನಾ, ಗೋಪಾಲ್‌ಗಂಜ್‌ನಲ್ಲಿ ಪ್ರಧಾನವಾಗಿ ತಂಡಗಳು ಲಗ್ಗೆ ಇಟ್ಟಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿವೆ. ಈ ನಡುವೆ, ʻʻಅನಾರೋಗ್ಯಪೀಡಿತರಾಗಿರುವ ಒಬ್ಬ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ತೊಂದರೆ ಮಾಡಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ,ʼʼ ಎಂದು ಆರ್‌ಜೆಡಿ ಮುಖ್ಯಸ್ಥರೂ ಆಗಿರುವ ಲಾಲು ಪ್ರಸಾದ್ ಅವರ ಸಹೋದರ ಪ್ರಭುನಾಥ ಯಾದವ್ ಹೇಳಿದ್ದಾರೆ. ಇದೇ ವೇಳೆ, ಆರ್‌ಜೆಡಿ ಕಾರ್ಯಕರ್ತರು ಮತ್ತು ನಾಯಕರು ಸಿಬಿಐ ದಾಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಎಲ್ಲೆಲ್ಲಿ ದಾಳಿ?
ಲಾಲು ಪ್ರಸಾದ್, ಅವರ ಪತ್ನಿ ರಾಬ್ರಿ ದೇವಿ, ಮೀಸಾ ಭಾರತಿ, ಹೇಮಾ ಯಾದವ್ ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆಪಾದನೆಗಳಿವೆ. ಹಾಗಾಗಿ ಅವರ ಮನೆಗಳ ಮೇಲೂ ದಾಳಿ ನಡೆದಿದೆ.
ಮೇವು ಹಗರಣದಲ್ಲಿ ಶಿಕ್ಷೆ
ಲಾಲು ಪ್ರಸಾದ್ ಯಾದವ್ ಅವರನ್ನು ಬಹುವಾಗಿ ಕಾಡುತ್ತಿರುವ ಹಗರಣಗಳಲ್ಲಿ ಮೇವು ಹಗರಣವೂ ಒಂದು. 1985-95ರ ನಡುವೆ ಅವಿಭಜಿತ ಬಿಹಾರದ ಪಶುಸಂಗೋಪನಾ ಇಲಾಖೆಯಲ್ಲಿ ನಡೆದ ಈ ಹಗರಣದಲ್ಲಿ ನಡೆದ ಅವ್ಯವಹಾರದ ಒಟ್ಟು ಮೊತ್ತ 930 ಕೋಟಿ ರೂ. ಇದಕ್ಕೆ ಸಂಬಂಧಿಸಿ ಒಟ್ಟು 12 ಪ್ರಕರಣಗಳು ದಾಖಲಾಗಿ ಪ್ರತ್ಯೇಕವಾಗಿ ವಿಚಾರಣೆ ನಡೆಯುತ್ತಿದೆ. ಮೇವು ಹಗರಣದ ಐದನೇ ಪ್ರಕರಣ ಡೊರಾಂಡಾ ಖಜಾನೆಗೆ ಆಗಿರುವ ಸುಮಾರು 139 ಕೋಟಿ ರೂ. ನಷ್ಟಕ್ಕೆ ಸಂಬಂಧಿಸಿದ್ದು. ಇದರ ವಿಚಾರಣೆ ನಡೆಸಿದ ರಾಂಚಿಯ ವಿಶೇಷ ಸಿಬಿಐ ಕೋರ್ಟ್ ಲಾಲು ಪ್ರಸಾದ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂ. ದಂಡ ವಿಧಿಸಿತ್ತು. ಈ ಹಗರಣ ನಡೆದಾಗ ಲಾಲು ಬಿಹಾರದ ಹಣಕಾಸು ಸಚಿವರಾಗಿದ್ದರು. ಮೇವು ಖರೀದಿಯಲ್ಲಿ ದೊಡ್ಡ ಮಟ್ಟದ ಲಂಚ ಪಡೆದ ಆರೋಪ ಅವರ ಮೇಲಿತ್ತು.
2017ರಲ್ಲಿ ಲಾಲೂ ಜೈಲು ಸೇರಿದ್ದರೂ ಅನಾರೋಗ್ಯದ ಕಾರಣದಿಂದಾಗಿ ಅವರು ಜೈಲಿನಲ್ಲಿ ಇದ್ದುದಕ್ಕಿಂತ ಹೆಚ್ಚು ಆಸ್ಪತ್ರೆಯಲ್ಲಿ ಇದ್ದುದೇ ಹೆಚ್ಚು. ಅವರು 39 ತಿಂಗಳು ಆಸ್ಪತ್ರೆಯಲ್ಲಿದ್ದರೆ, ಜೈಲಿನಲ್ಲಿದ್ದುದು ಎಂಟು ತಿಂಗಳು ಮಾತ್ರ. ಲಾಲು ಪ್ರಸಾದ್ ಅವರು ಕಿಡ್ನಿ, ಮತ್ತು ಹೃದಯದ ಸಮಸ್ಯೆ ಎದುರಿಸುತ್ತಿದ್ದಾರೆ. ಜತೆಗೆ ಮಧುಮೇಹ ಮತ್ತು ರಕ್ತದ ಒತ್ತಡವೂ ತೀವ್ರವಾಗಿದೆ. ಈಗ ಮೇವು ಹಗರಣದ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.
ನನ್ನ ವಾಚ್ ಹೆಸರು ಹೇಳಿ ನಿಮ್ಮ ಹಗರಣ ಮುಚ್ಚಿಹಾಕುವ ಪ್ರಯತ್ನ ಎಂದೂ ಫಲಿಸಲ್ಲ