Site icon Vistara News

Lalu Prasad Yadav: “ಇಂದಿರಾ ಗಾಂಧಿ ನಮ್ಮನ್ನು ಜೈಲಿಗಟ್ಟಿದರು, ಆದರೆ…” ಎಮರ್ಜೆನ್ಸಿ ಬಗ್ಗೆ ಲಾಲೂ ಹೇಳಿದ್ದೇನು?

Indira Gandhi's Emergency

ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ತುರ್ತು ಪರಿಸ್ಥಿತಿ(Emergency) ಹೇರಿಕೆಯ ವಿಚಾರವನ್ನಿಟ್ಟುಕೊಂಡು ಆಡಳಿತ ಪಕ್ಷ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ. ಇದು ಸಾಲದೆನ್ನುವಂತೆ ಸ್ಪೀಕರ್‌ ಓಂ ಬಿರ್ಲಾ(Om birla), ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಕೂಡ ಎಮರ್ಜೆನ್ಸಿ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಇದೇ ವಿಚಾರವನ್ನಿಟ್ಟುಕೊಂಡು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Prasad Yadav) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭದಲ್ಲಿ ತಾವು ಎದುರಿಸಿದ ಕರಾಳ ದಿನಗಳನ್ನು ಲಾಲು ಪ್ರಸಾದ್ ಯಾದವ್ ನೆನಪಿಸಿಕೊಂಡಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ನಾಯಕರನ್ನು ಜೈಲು ಕಂಬಿಯ ಹಿಂದೆ ಹಾಕಿದ್ದರು. ಆದರೆ ಎಂದಿಗೂ ಅವರನ್ನು ನಿಂದಿಸಿರಲಿಲ್ಲ ಎಂದು ಲಾಲು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಲಾಲೂ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧದ ಚಳವಳಿಯನ್ನು ಮುಂದುವರಿಸಲು ಜಯಪ್ರಕಾಶ್ ನಾರಾಯಣ್ ರಚಿಸಿದ್ದ ಸಮಿತಿಯಲ್ಲಿ ನಾನು ಸಂಚಾಲಕನಾಗಿದ್ದೆ. ನನ್ನನ್ನು 15 ತಿಂಗಳ ಕಾಲ ಭದ್ರತಾ ನಿರ್ವಹಣಾ ಕಾಯ್ದೆ (ಮಿಸಾ) ಅಡಿ ಜೈಲಿನಲ್ಲಿ ಇರಿಸಲಾಗಿತ್ತು ಎಂದರು.

ಇದೇ ವೇಳೆ ಅವರು ಬಿಜೆಪಿ ಮುಖಂಡರ ವಿರುದ್ಧ ಕಿಡಿ ಕಾರಿದ್ದು, ಇಂದು ಎಮರ್ಜೆನ್ಸಿ ಕುರಿತು ಮಾತನಾಡುತ್ತಿರುವ ಬಿಜೆಪಿ ಸಚಿವರ ಬಗ್ಗೆ ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಗೊತ್ತೇ ಇರಲಿಲ್ಲ. ಮೋದಿ, ಜೆಪಿ ನಡ್ಡಾ ಹಾಗೂ ಇಂದು ಸ್ವಾತಂತ್ರ್ಯದ ಮೌಲ್ಯಗಳ ಬಗ್ಗೆ ನಮಗೆ ಉಪದೇಶ ನೀಡುತ್ತಿರುವ ಪ್ರಧಾನಿಯ ಇತರೆ ಸಚಿವ ಸಹೋದ್ಯೋಗಿಗಳ ಹೆಸರನ್ನೇ ನಾವು ಕೇಳಿರಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಇಂದಿರಾ ಗಾಂಧಿ ನಮ್ಮನ್ನು ಕಂಬಿಗಳ ಹಿಂದೆ ಇರಿಸಿದ್ದು ಎಷ್ಟು ನಿಜವೂ ಅವರು ನಮ್ಮನ್ನು ನಿಂದಿಸಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಅವರಾಗಲೀ ಅಥವಾ ಅವರ ಸಚಿವರಾಗಲೀ ನಮ್ಮನ್ನು ದೇಶ ದ್ರೋಹಿಗಳು ಅಥವಾ ದೇಶಪ್ರೇಮಿಗಳಲ್ಲ ಎಂದು ಕರೆದಿರಲಿಲ್ಲ. ನಮ್ಮ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಕ್ಕೆ ಧಕ್ಕೆ ತರುವ ವಿಧ್ವಂಸಕ ಕೃತ್ಯಗಳಿಗೆ ಅವಕಾಶ ನೀಡಿರಲಿಲ್ಲ. 1975 ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಕಪ್ಪು ಚುಕ್ಕೆ ಹೌದು. ಹಾಗಂದ ಮಾತ್ರಕ್ಕೆ ವಿರೋಧ ಪಕ್ಷದವರನ್ನು ಅಗೌರವದಿಂದ ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Exit mobile version