ಗಾಂಧಿನಗರ: ಬದುಕಿನ ಪಯಣವೇ ಅಚ್ಚರಿ ಹಾಗೂ ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತದೆ. ನಾವು ಅಂದುಕೊಂಡಿದ್ದೇ ಒಂದಾದರೆ, ನಮಗೆ ಎದುರಾಗುವುದೇ ಬೇರೆ. ಎಷ್ಟೇ ಒಳ್ಳೆಯವರಾಗಿರಿ, ಎಷ್ಟೇ ಪರೋಪಕಾರಿಯಾಗಿರಿ, ವಿಧಿಯ ತೀರ್ಮಾನವೇ ಬೇರೆಯಾಗಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಗುಜರಾತ್‌ನಲ್ಲಿ ರಾಜಿ ಮೂಲಕ 138 ಜೋಡಿಗಳ ವಿಚ್ಛೇದನ ತಪ್ಪಿಸಿದ್ದ (Viral News) ವಕೀಲರೊಬ್ಬರಿಗೆ ಅವರ ಪತ್ನಿ ವಿಚ್ಛೇದನ ನೀಡಿದ್ದಾರೆ.
ಹೌದು, ಅಹ್ಮದಾಬಾದ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ 16 ವರ್ಷಗಳ ವೃತ್ತಿ ಅನುಭವವಿದೆ. ಈ ವಕೀಲರ ಹೆಸರು ತಿಳಿದುಬಂದಿಲ್ಲವಾದರೂ, ಇವರ ಜೀವನದಲ್ಲಿ ನಡೆದ ಬೆಳವಣಿಗೆಯ ಸುದ್ದಿ ವೈರಲ್ ಆಗಿದೆ. ವಿಚ್ಛೇದನ ಕೊಡಿಸಿ ಎಂದು ಬರುವ ದಂಪತಿಗಳ ಮನವೊಲಿಸಿ, ಅವರಿಗೆ ಸಮಾಧಾನ ಮಾಡಿ ವಿಚ್ಛೇದನ ಪಡೆಯದಂತೆ ನೋಡಿಕೊಳ್ಳುತ್ತಿದ್ದರು. ರಾಜಿ ಸಂಧಾನದ ಮೂಲಕ ಇದುವರೆಗೆ ಇವರು 138 ದಂಪತಿಗಳ ವಿಚ್ಛೇದನ ತಪ್ಪಿಸಿದ್ದಾರೆ. ಆದರೆ, ನ್ಯಾಯವಾದಿಯ ಪತ್ನಿಯೇ ಅವರಿಗೆ ವಿಚ್ಛೇದನ ನೀಡಿದ್ದಾರೆ.
ವಿಚ್ಛೇದನ ನೀಡಲು ಕಾರಣವೇನು?
ಅಹ್ಮದಾಬಾದ್ ಹೈಕೋರ್ಟ್‌ನಲ್ಲಿ ವಕೀಲರಾಗಿರುವ ಇವರು ವಿಚ್ಛೇದನ ಬಯಸಿ ಬರುವವರ ಬಳಿ ಯಾವುದೇ ಶುಲ್ಕ ಪಡೆಯುವುದಿಲ್ಲ. ಉಚಿತವಾಗಿ ಅವರಿಗೆ ಕೌನ್ಸೆಲಿಂಗ್ ಮಾಡಿ, ದಾಂಪತ್ಯದ ಮಹತ್ವ ವಿವರಿಸಿ, ಅವರ ವಿಚ್ಛೇದನವನ್ನು ತಪ್ಪಿಸುತ್ತಾರೆ. ಇದರಿಂದ ನ್ಯಾಯವಾದಿಗೆ ಯಾವುದೇ ಆದಾಯ ಬರುತ್ತಿಲ್ಲ. ಆದಾಯ ಬರದ ಕಾರಣ ಮನೆಯ ಆರ್ಥಿಕ ಪರಿಸ್ಥಿತಿಯು ಹದಗೆಟ್ಟು ಹೋಗಿದೆ. ಹಾಗಾಗಿ, ನ್ಯಾಯವಾದಿಯ ಪತ್ನಿ ಇದರ ಬಗ್ಗೆ ಹಲವು ಬಾರಿ ಹೇಳಿದರೂ, ಎಚ್ಚರಿಸಿದರೂ ಅವರು ಆದರ್ಶ ಮೆರೆಯುತ್ತಿದ್ದಾರೆ. ಕೊನೆಗೆ ಬೇಸತ್ತ ಪತ್ನಿಯು ನ್ಯಾಯವಾದಿಗೆ ವಿಚ್ಛೇದನ ನೀಡಿದ್ದಾರೆ.
ಇದನ್ನೂ ಓದಿ: Heart attack: 16,000 ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಹೃದಯಾಘಾತಕ್ಕೆ ಬಲಿ
ಕೆಲ ದಿನಗಳ ಹಿಂದಷ್ಟೇ ಅಹ್ಮದಾಬಾದ್‌ನಲ್ಲಿ ವೈದ್ಯರೊಬ್ಬರು ಮೃತಪಟ್ಟಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 16 ಸಾವಿರ ಹೃದ್ರೋಗಿಗಳಿಗೆ ಡಾ.ಗೌರವ್ ಗಾಂಧಿ ಅವರು ಶಸ್ತ್ರಚಿಕಿತ್ಸೆ ಮಾಡಿದ್ದರು. ಆದರೆ, ಅವರೇ ಹೃದಯಾಘಾತದಿಂದ ಕೆಲ ದಿನಗಳ ಹಿಂದೆ ಮೃತಪಟ್ಟ ಸುದ್ದು ವೈರಲ್ ಆಗಿತ್ತು. ರೋಗಿಗಳನ್ನು ವಿಚಾರಿಸಿಕೊಂಡು ಮನೆಗೆ ಬಂದಿದ್ದ ಗೌರವ್ ಗಾಂಧಿ, ರಾತ್ರಿ ಊಟ ಮಾಡಿ ಮಲಗಿದ್ದರು. ಯಾವುದೇ ಹೃದಯಾಘಾತದ ಸೂಚನೆ ತೋರಿಸಿರಲಿಲ್ಲ. ಬೆಳಗ್ಗೆ ಮನೆಯವರು ಎಬ್ಬಿಸಲು ಹೋದಾಗ ಮೂರ್ಛೆ ಹೋಗಿರುವುದು ತಿಳಿದುಬಂದಿತ್ತು. ಕೂಲಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.