Site icon Vistara News

Layoffs at Citigroup: ಸಿಟಿಗ್ರೂಪ್‌ನಲ್ಲಿ ನೂರಾರು ಉದ್ಯೋಗ ಕಡಿತಕ್ಕೆ ಚಿಂತನೆ

Layoffs at Citigroup

ನವದೆಹಲಿ: ಅಮೆರಿಕದ ಮಲ್ಟಿನ್ಯಾಷನಲ್ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಗ್ರೂಪ್ ಸಿಟಿಗ್ರೂಪ್ ಇಂಕ್ ನೂರಾರು ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂಬು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಆರ್ಥಿಕ ಹಿಂಜರಿತ ಭೀತಿಯಲ್ಲಿ ಹಲವು ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುತ್ತಿವೆ. ಈಗ ಸಿಟಿಗ್ರೂಪ್ ಕೂಡ ಅದೇ ಹಾದಿಯನ್ನು ಹಿಡಿದಿದೆ ಎಂದು ಹೇಳಲಾಗುತ್ತಿದೆ(Layoffs at Citigroup).

240,000 ಕೆಲಸಗಾರರ ಪೈಕಿ ಶೇ.1ರಷ್ಟು ಉದ್ಯೋಗಗಳನ್ನು ಕಡಿತ ಮಾಡಲಿದೆ. ವಿಶೇಷ ಆಪರೇಷನ್ ಮತ್ತು ಟೆಕ್ನಾಲಜಿ ಹಾಗೂ ಕಂಪನಿಯ ಅಮೆರಿಕದ ವಿಮಾ ವಿಭಾಗದಲ್ಲಿನ ಉದ್ಯೋಗಗಳನ್ನು ಕಡಿತ ಮಾಡಲಾಗುತ್ತಿದೆ. ಸಿಟಿಗ್ರೂಪ್‌ನ‌ ನಾರ್ಮಲ್ ಬಿಸಿನೆಸ್ ಪ್ಲ್ಯಾನಿಂಗ್‌ನ ಭಾಗವಾಗಿ ಈ ಉದ್ಯೋಗಗಳನ್ನು ಕಡಿತ ಮಾಡಲಾಗುತ್ತಿದೆ. ಇದರಲ್ಲೇನೂ ವಿಶೇಷ ಇಲ್ಲ ಎಂಬ ಸಂಗತಿಯನ್ನು ವರದಿಯಲ್ಲಿ ತಿಳಿಸಲಾಗಿದೆ. ಸಿಬ್ಬಂದಿಯನ್ನು ಕಡಿತಗೊಳಿಸಲು ವ್ಯವಸ್ಥಾಪಕರು ಆದೇಶವನ್ನು ಹೊಂದಿಲ್ಲ. ಬದಲಾಗಿ, ವಿವಿಧ ವಿಭಾಗಗಳು ಕಡಿತಕ್ಕೆ ವಿವಿಧ ಕಾರಣಗಳನ್ನು ಹುಡುಕುತ್ತಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: McKinsey layoffs : ಮೆಕೆನ್ಸಿ ಕಂಪನಿಯಲ್ಲಿ 2,000 ಉದ್ಯೋಗ ಕಡಿತ

ಕಳೆದ ವಾರವಷ್ಟೇ ಸಿಟಿಗ್ರೂಪ್‌ನ ಎದುರಾಳಿ ಕಂಪನಿಯು ಜೆಪಿ ಮಾರ್ಗನ್ ಚೇಸ್ ಮತ್ತು ಕಂಪನಿಯು ಅಡಮಾನ ವಿಭಾಗದ ನೂರಾರು ಉದ್ಯೋಗಗಳನ್ನು ಕಡಿತ ಮಾಡಿತ್ತು. ಜನವರಿ ತಿಂಗಳಲ್ಲಿ ಗೋಲ್ಡಮನ್‌ ಸಾಚ್ಸ್ ಗ್ರೂಪ್ ಇಂಕ್ 3200 ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಭಾರತದಲ್ಲೇ ಸುಮಾರು 700ರಿಂದ 800 ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.

Exit mobile version