Site icon Vistara News

LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ

LIC

LIC Offices To Remain Open on March 30, 31

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನವು ಭಾನುವಾರವೇ ಇರುವುದರಿಂದ ಬ್ಯಾಂಕ್‌ಗಳು (Banks) ಶನಿವಾರ ಹಾಗೂ ಭಾನುವಾರವೂ (ಮಾರ್ಚ್‌ 30, 31) ಕಾರ್ಯನಿರ್ವಹಿಸಲಿವೆ. ಬ್ಯಾಂಕ್‌ಗಳು ಮಾತ್ರವಲ್ಲ, ಭಾರತೀಯ ಜೀವ ವಿಮಾನ ನಿಗಮದ (LIC Offices) ಕಚೇರಿಗಳು ಕೂಡ ಶನಿವಾರ ಹಾಗೂ ಭಾನುವಾರ ಕಾರ್ಯನಿರ್ವಹಿಸಲಿವೆ. ಮಾರ್ಚ್‌ 30 ಹಾಗೂ 31 ಪ್ರಸಕ್ತ ಹಣಕಾಸು ವರ್ಷದ (Fiscal Year) ಕೊನೆಯ ದಿನಗಳಾಗಿರುವ ಕಾರಣ ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ವೀಕೆಂಡ್‌ನಲ್ಲೂ ಎಲ್‌ಐಸಿ ಕಚೇರಿಗಳು ಕಾರ್ಯನಿರ್ವಹಿಸಲಿವೆ.

ವಿತ್ತೀಯ ವರ್ಷದ ಕೊನೆಯ ಎರಡು ದಿನಗಳಂದು ಆದಾಯ ತೆರಿಗೆ ಇಲಾಖೆ ಕಚೇರಿಗಳು ಕೂಡ ಕಾರ್ಯನಿರ್ವಹಿಸಲಿವೆ. ಹಣಕಾಸು ಚಟುವಟಿಕೆಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಗಳು ಕೂಡ ತೆರೆದಿರಲಿವೆ. ಎಲ್‌ಐಸಿ ಕಚೇರಿಗಳ ಕಾರ್ಯನಿರ್ವಹಣೆ ಕುರಿತು ಎಲ್‌ಐಸಿಯೇ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Job Alert: ಎಸ್‌ವಿಸಿ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಏ. 9ರೊಳಗೆ ಅರ್ಜಿ ಸಲ್ಲಿಸಿ

2023-24ರ ಹಣಕಾಸು ವರ್ಷದ (ಎಫ್​ಎ) ಕೊನೆಯ ದಿನ ಭಾನುವಾರ ಬರುವುದರಿಂದ ಈ ಸೂಚನೆ ಬಂದಿದೆ. ಅಧಿಕೃತ ಹೇಳಿಕೆಯಲ್ಲಿ, “2023-24ರ ಹಣಕಾಸು ವರ್ಷದಲ್ಲಿ ತೆರಿಗೆ ಪಾವತಿಗಳಿಗೆ ಸಂಬಂಧಿಸಿದ ಎಲ್ಲ ವಹಿವಾಟುಗಳನ್ನು ಲೆಕ್ಕಹಾಕಲು ಮಾರ್ಚ್ 31, 2024 ರಂದು (ಭಾನುವಾರ) ಸರ್ಕಾರಿ ರಸೀದಿಗಳು ಮತ್ತು ಪಾವತಿಗಳನ್ನು ವ್ಯವಹರಿಸುವ ಬ್ಯಾಂಕುಗಳ ಎಲ್ಲಾ ಶಾಖೆಗಳನ್ನು ವಹಿವಾಟುಗಳಿಗೆ ತೆರೆದಿಡಲು ಭಾರತ ಸರ್ಕಾರ ವಿನಂತಿಸಿದೆ” ಎಂದು ಆರ್​​ಬಿಐ ಹೇಳಿದೆ.

ಆರ್‌ಬಿಐನ ಏಜೆನ್ಸಿ ಬ್ಯಾಂಕುಗಳಾಗಿ ಪಟ್ಟಿ ಮಾಡಲಾದ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (ಪಿಎಸ್​ಬಿ) ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಸೇರಿವೆ. ಅಂತೆಯೇ, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಲಿಮಿಟೆಡ್​ನಂತ ಖಾಸಗಿ ಬ್ಯಾಂಕುಗಳು ಏಜೆನ್ಸಿ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.

ವಾರಾಂತ್ಯದಲ್ಲಿ ತೆರೆದಿರುವ ಬ್ಯಾಂಕ್​ಗಳ ವಿವರ ಇಲ್ಲಿದೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version