Site icon Vistara News

Lion & Lioness Name: ಅಕ್ಬರ್‌-ಸೀತಾ ಸಿಂಹಗಳಿಗೆ ಹೊಸ ಹೆಸರು; ವಿವಾದಕ್ಕೆ ತೆರೆ ಎಳೆದ ದೀದಿ ಸರ್ಕಾರ

Lion & Lioness Name

ಕೋಲ್ಕತ್ತಾ: ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಪಶ್ಚಿಮ ಬಂಗಾಳ ಮೃಗಾಲಯದ ಸಿಂಹ(Lion) ಮತ್ತು ಸಿಂಹಿಣಿ(Lioness) ಹೆಸರು ಕೊನೆಗೂ ಬದಲಾಗಿದೆ (Lion & Lioness Name). ಅಕ್ಬರ್‌(Akbar) ಮತ್ತು ಸೀತಾ(Seetha) ಸಿಂಹಗಳ ಹೆಸರನ್ನು ಬದಲಿಸಬೇಕೆಂದು ಪಟ್ಟು ಹಿಡಿದಿದ್ದ ವಿಶ್ವ ಹಿಂದೂ ಪರಿಷದ್‌(VHP)ಗೆ ಕೊನೆಗೂ ಜಯ ಸಂದಿದ್ದು, ಈ ಸಿಂಹ ಜೋಡಿಗಳ ಹೆಸರನ್ನು ಸೂರಜ್‌ ಮತ್ತು ತಾನ್ಯಾ ಎಂದು ಬದಲಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಪಶ್ಚಿಮ ಬಂಗಾಳದ ಸಫಾರಿ ಪಾರ್ಕ್‌ನಲ್ಲಿದ್ದ ಸಿಂಹದ ಜೋಡಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅಕ್ಬರ್, ಸೀತಾ ಎಂದು ಈ ಹಿಂದೆ ನಾಮಕರಣ ಮಾಡಿತ್ತು. ಆದರೆ ಈ ನಾಮಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಈಗ ಈ ನಾಮಕರಣ ವಿಚಾರದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ಸಿಂಹದ ಜೋಡಿಗೆ ಅಕ್ಬರ್-ಸೀತಾ ಬದಲು ಸೂರಜ್ ತಾನ್ಯಾ ಎಂದು ಹೆಸರಿಡಲಾಗಿದೆ.

ಸಿಂಹ ಹಾಗೂ ಸಿಂಹಿಣಿಯನ್ನು ತ್ರಿಪುರಾದಿಂದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಲ್ಲಿ ಇರುವ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ಕರೆ ತಂದ ಬಳಿಕ ಈ ವಿವಾದ ಭುಗಿಲೆದ್ದಿತ್ತು. ಈ ಪ್ರಕರಣ ಸಂಬಂಧ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಪಶ್ಚಮ ಬಂಗಾಳ ಘಟಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ ಇರುವ ಕೋಲ್ಕತ್ತಾ ಹೈಕೋರ್ಟ್‌ ಸಂಚಾರಿ ಪೀಠದಲ್ಲಿ ಫೆಬ್ರವರಿ 21 ರಂದು ಈ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಸಿಂಹ ಹಾಗೂ ಸಿಂಹಿಣಿ ಹೆಸರನ್ನು ಈ ಕೂಡಲೇ ಬದಲಿಸುವಂತೆ ಆದೇಶ ನೀಡಿತ್ತು.

ಕೋರ್ಟ್‌ ಹೇಳಿದ್ದೇನು?

ಸಿಂಹಗಳನ್ನು ಕರೆತರಲಾದ ತ್ರಿಪುರಾದಿಂದಲೇ ಅವುಗಳಿಗೆ ವಿವಾದಾತ್ಮಕ ಹೆಸರುಗಳನ್ನು ನೀಡಲಾಗಿತ್ತು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಗುರುವಾರ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೋಯ್ಜಿತ್ ಚೌಧರಿ ಈ ಬಗ್ಗೆ ತೀರ್ಪು ಪ್ರಕಟಿಸಿದ್ದು, ಈ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ. ರಾಜ್ಯ ಸರಕಾರವೇ ಆ ಹೆಸರನ್ನು ಇಟ್ಟಿದೆ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ಇದು ನಿಜವಲ್ಲ ಎಂದು ನಾವು ಸಾಬೀತಾಗಿದೆ. ಇದನ್ನು ತ್ರಿಪುರಾ ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ನಮಗೆ ತಿಳಿದಾಗ ಬಂಗಾಳ ಅರಣ್ಯ ಇಲಾಖೆ ಯಾವುದೇ ವಿವಾದವಾಗದಂತೆ ಅವರ ಹೆಸರನ್ನು ಬದಲಿಸಿದೆ. ಹೆಸರುಗಳನ್ನು ಬದಲಿಸಿ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: NEET: ಕರ್ನಾಟಕ ಬಳಿಕ ಪಶ್ಚಿಮ ಬಂಗಾಳದಲ್ಲೂ ನೀಟ್‌ ಪರೀಕ್ಷೆ ವಿರುದ್ಧ ನಿರ್ಣಯ; ಹೆಚ್ಚಾಯ್ತು ಆಕ್ರೋಶ

Exit mobile version