Site icon Vistara News

AI News Anchor: ಆ್ಯಂಕರ್‌ಗಳೇ ಸುಂದರಿ ಎಂದು ಬೀಗಬೇಡಿ; ಒಡಿಶಾದಲ್ಲಿ AI ನ್ಯೂಸ್‌ ಆ್ಯಂಕರ್‌ಗಳು ಮಿಂಚುತ್ತಿದ್ದಾರೆ

AI News Anchor Of Odisha TV

Lisa, Odisha’s First AI News Anchor Is Touted To Transform TV Presentation

ಭುವನೇಶ್ವರ: ಮನೆಯಿಂದ ಎಲ್ಲಿಗೋ ಹೊರಟಿರುತ್ತೀರಿ. ಆಕಸ್ಮಿಕವಾಗಿ ನಿಮ್ಮ ಕಣ್ಣು ಸುದ್ದಿ ವಾಹಿನಿಯ ಆ್ಯಂಕರ್ ಮೇಲೆ ಬೀಳುತ್ತದೆ. ಅವರು ಓದುವ ಸುದ್ದಿಗಿಂತ, ಅವರ ಅಂದವೇ ನಿಮ್ಮನ್ನು ಸೆಳೆಯುತ್ತದೆ. ಒಂದು ಕ್ಷಣ ನಿಂತು ಸುಂದರವಾದ ಸುದ್ದಿ ನಿರೂಪಕಿಯನ್ನು ನೋಡಿ ಖುಷಿಪಡುತ್ತೀರಿ. ಆದರೆ, ಇದು ಇಷ್ಟು ದಿನಗಳ ಖುಷಿ ಮಾತ್ರ. ಇನ್ನು ಮುಂದೆ ನ್ಯೂಸ್‌ ಚಾನೆಲ್‌ಗಳಲ್ಲಿ ನೀವು ನೋಡುವ ಆ್ಯಂಕರ್‌ಗಳು ಕೃತಕ ಬುದ್ಧಿಮತ್ತೆ ಆಧಾರಿತ (AI News Anchor) ಆ್ಯಂಕರ್‌ಗಳಾಗಿರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಒಡಿಶಾದಲ್ಲಿ ಮೊದಲ ಬಾರಿಗೆ ಎಐ ನ್ಯೂಸ್‌ ಆ್ಯಂಕರ್‌ ಪ್ರಯೋಗ ಯಶಸ್ವಿಯಾಗಿದೆ.

ಹೌದು, ಒಡಿಶಾ ಟಿವಿ (OTV) ಸುದ್ದಿ ವಾಹಿನಿಯಲ್ಲಿ ಭಾನುವಾರ ಲೀಸಾ ಎಂಬ ಎಐ ನ್ಯೂಸ್‌ ಆ್ಯಂಕರ್‌ ಅವರು ಯಶಸ್ವಿಯಾಗಿ ಸುದ್ದಿ ಓದಿದ್ದಾರೆ. ನೋಡಲು ಚೆಂದುಳ್ಳಿಯಾಗಿರುವ, ಭಾರತೀಯ ಉಡುಗೆಯಲ್ಲಿ ಮಿಂಚಿರುವ ಲೀಸಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ರಾಯಭಾರಿ ಎಂಬಂತೆ ಕಂಡಿದ್ದಾರೆ. ಇವರು ಚೆಂದವಾಗಿ, ಸ್ಫುಟವಾಗಿ ಇಂಗ್ಲಿಷ್‌ನಲ್ಲಿ ಸುದ್ದಿ ಓದಿದ್ದಾರೆ. ಒಡಿಶಾ ಟಿವಿ ಪ್ರಯೋಗಕ್ಕೆ ಹೆಚ್ಚಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವರೇ ನೋಡಿ ಎಐ ನ್ಯೂಸ್‌ ಆ್ಯಂಕರ್‌

ಈ ಕುರಿತು ಒಟಿವಿ ಟ್ವೀಟ್‌ ಮಾಡಿದೆ. “ಒಟಿವಿಯ ಎಐ ನ್ಯೂಸ್‌ ಆ್ಯಂಕರ್‌ ಲೀಸಾ ಅವರು ಹಲವು ಭಾಷೆಗಳನ್ನು ಮಾತನಾಡಲು ಶಕ್ತರಾಗಿದ್ದಾರೆ. ಇಂಗ್ಲಿಷ್‌ ಜತೆಗೆ ಒಡಿಯಾದಲ್ಲೂ ಡಿಜಿಟಲ್‌ ವೇದಿಕೆಗಳಲ್ಲಿ ಅವರು ಸುದ್ದಿ ನಿರೂಪಣೆ ಮಾಡಲಿದ್ದಾರೆ” ಎಂದು ತಿಳಿಸಿದೆ.

“ಲೀಸಾಗೆ ತರಬೇತಿ ನೀಡುವುದು ದೊಡ್ಡ ಕಸರತ್ತಾಯಿತು. ಕೊನೆಗೂ ನಾವು ಲೀಸಾಗೆ ತರಬೇತಿ ನೀಡಿ, ಸುದ್ದಿಯನ್ನು ಜನರ ಮುಂದೆ ಇಟ್ಟಿದ್ದೇವೆ. ಆದರೂ, ಕೃತಕ ಬುದ್ಧಿಮತ್ತೆ ಆಧಾರಿತ ಟಿವಿ ಆ್ಯಂಕರ್‌ಗೆ ಇನ್ನಷ್ಟು ತರಬೇತಿ ನೀಡುತ್ತೇವೆ. ಮತ್ತಷ್ಟು ಬದಲಾವಣೆಗಳಿಗೆ ನಾವು ತೆರೆದುಕೊಳ್ಳುತ್ತೇವೆ. ಲೀಸಾ ಬೇರೆಯವರ ಜತೆ ಸಂವಾದ ಮಾಡಲು ಕೂಡ ಶಕ್ತವಾಗುವಂತೆ ರೂಪಿಸುತ್ತೇವೆ” ಎಂದು ಒಟಿವಿ ಡಿಜಿಟಲ್‌ ಬ್ಯುಸಿನೆಸ್‌ ಹೆಡ್‌ ಲಿತಿಶಾ ಮಂಗತ್‌ ಪಾಂಡಾ ತಿಳಿಸಿದ್ದಾರೆ.

ಇದನ್ನೂ ಓದಿ: Rajeev Chandrasekhar: ಕೃತಕ ಬುದ್ಧಿಮತ್ತೆ ಜನರ ಉದ್ಯೋಗ ಕಸಿಯಲಿದೆಯೇ? ರಾಜೀವ್‌ ಚಂದ್ರಶೇಖರ್‌ ಹೇಳುವುದೇನು?

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವ ದಿನೇದಿನೆ ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಅದರಲ್ಲೂ, ಚಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್‌ಗಳು ಕೋಡಿಂಗ್‌ ರಚನೆಯಿಂದ ಪ್ರಬಂಧ ರಚನೆವರೆಗೆ ಎಲ್ಲ ಕೆಲಸ ಮಾಡುತ್ತಿವೆ. ಇದರಿಂದಾಗಿ ಮನುಷ್ಯನ ಉದ್ಯೋಗಕ್ಕೆ ಕತ್ತರಿ ಬೀಳುತ್ತದೆ ಎಂಬ ಚರ್ಚೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಟಿವಿ ಪರದೆಗೆ ಎಐ ನ್ಯೂಸ್‌ ಆ್ಯಂಕರ್‌ಗಳು ಕಾಲಿಟ್ಟಿದ್ದಾರೆ.

Exit mobile version