ಬಾಲ್ಯ ಅಂದರೇನೆ ಒಂಥರಾ ಖುಷಿ, ಮರೆಯಲಾಗದ ನೆನಪುಗಳ ಬುತ್ತಿ.. ಪ್ರತಿಯೊಬ್ಬರಿಗೂ ಮತ್ತೆ ಆ ಬಾಲ್ಯದ ಕ್ಷಣಗಳನ್ನು ಅನುಭವಿಸಬೇಕು ಎಂಬ ಆಸೆ ಇರುತ್ತದೆ. ಬಾಲ್ಯದಲ್ಲಿ ಸಿಗುವ ಸಣ್ಣ ಸಣ್ಣ ಖುಷಿಗಳ ಆ ಕ್ಷಣವನ್ನು ನೆನಪಿಸಿಕೊಂಡು ಎಲ್ಲರೂ ಮೈಮರೆಯುತ್ತಾರೆ.
ಈ ವಿಡಿಯೊ ನೋಡಿದರೆ, ಎಲ್ಲರಿಗೂ ಖುಷಿ ಆಗುವುದು ಖಂಡಿತ. ಇದು ಕೆಲವರಿಗೆ ಕನಸಾಗಿ ಕಾಡಿರಬಹುದು, ಇನ್ನು ಕೆಲವರಿಗೆ ನನಸಾಗಿ ಸಂಭ್ರಮಿಸಿರಬಹುದು. ಅಂತೂ ಪ್ರತಿಯೊಬ್ಬರಿಗೂ ಈ ಘಟನೆ ಎಲ್ಲೋ ಕನೆಕ್ಟ್ ಆಗುತ್ತದೆ.
ಇದು ಪುಟ್ಟ ಬಾಲಕನೊಬ್ಬ ತನ್ನ ಹುಟ್ಟುಹಬ್ಬಕ್ಕೆ ನೀಡಿದ ಉಡುಗೊರೆಯನ್ನು ಕಂಡು ಖುಷಿಯಿಂದ ಕುಣಿದು ಕುಪ್ಪಳಿಸುವ ದೃಶ್ಯ. ಆತನ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ! ಅವನಿಗೆ ಉಡುಗೊರೆಯಾಗಿ ಸಿಕ್ಕಿದ್ದು ಒಂದು ಚಂದದ ಸೈಕಲ್. ನಿಜವೆಂದರೆ, ಮನೆ ಮಂದಿ ಅವನಿಗೆ ಉಡುಗೊರೆ ಕೊಟ್ಟ ರೀತಿಯೂ ಅದ್ಭುತವಾಗಿತ್ತು.
ಇದನ್ನು ಓದಿ| ರಿಪೋರ್ಟರ್ಗಳಿಗೆ ಟೀ ಸರ್ವ್ ಮಾಡಿದ ಅಕ್ಷತಾ ಮೂರ್ತಿ, ಫೋಟೊ ವೈರಲ್
ಬಾಲಕನ ಕಣ್ಣು ಮುಚ್ಚಿ ಹೊರಗೆ ಕರೆದುಕೊಂಡು ಬರುವ ಅವರ ತಾಯಿ, ಮನೆಯ ಮುಂದೆ ಬಲೂನ್ಗಳಿಂದ ಸಿಂಗರಿಸಿ ನಿಲ್ಲಿಸಿದ್ದ ಪುಟ್ಟ ಸೈಕಲ್ನ್ನು ತೋರಿಸಿದ್ದಾರೆ. ಆಗ ಬಾಲಕ ತನ್ನ ಖುಷಿಯನ್ನು ತಡೆಯಲಾರದೆ ಕುಣಿದು ಸಂತೋಷ ಪಟ್ಟಿದ್ದಾನೆ. ಅದನ್ನು ವಿಡಿಯೊ ಮಾಡಿದ ಮನೆಯವರು ʻಹ್ಯಾಪಿ ಬರ್ತ್ ಡೇ ಪುಟ್ಟ ಕಂದ, ಈ ಸೈಕಲ್ ನಿನಗಾಗಿ.. ಹೊರಡು.. ಈ ದಿನ ನಿನ್ನದಾಗಿರಲಿʼʼ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ಈಗ ನೆಟ್ಟಿಗರ ಮನ ಕದ್ದಿದ್ದು, ಬಾಲಕನ ಖುಷಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ತಮ್ಮ ಬಾಲ್ಯದ ನೆನಪುಗಳು ಬಂದವು ಎಂದು ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ| ಭೂಕಂಪದಿಂದ ಮಗಳನ್ನು ಬಚಾಯಿಸಿದ ತೀಕ್ಷ್ಣಮತಿ ತಂದೆ: ವಿಡಿಯೊ ವೈರಲ್