Site icon Vistara News

Livestock Export Bill : ಜಾನುವಾರುಗಳ ಜೀವಂತ ರಫ್ತಿಗೆ ತೀವ್ರ ವಿರೋಧ, ಕರಡು ವಿಧೇಯಕ ಹಿಂತೆಗೆತ

Livestock

ನವ ದೆಹಲಿ: ಜಾನುವಾರುಗಳ ಜೀವಂತ ರಫ್ತಿಗೆ ಹಾದಿ ಸುಗಮಗೊಳಿಸಲಿದ್ದ ಕೇಂದ್ರ ಸರ್ಕಾರದ ಉದ್ದೇಶಿತ ವಿಧೇಯಕಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ವಿವಾದಾತ್ಮಕ ವಿಧೇಯಕವನ್ನು ಹಿಂತೆಗೆದುಕೊಂಡಿದೆ. (Livestock Export Bill 2023) ಹಾಗಾದರೆ ಸರ್ಕಾರ ಈ ವಿಧೇಯಕವನ್ನು ಪ್ರಸ್ತಾಪಿಸಿದ್ದೇಕೆ?

ಈಗಿನ ಕಾಯಿದೆ (Live stock importation act 1898) ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ್ದಾಗಿದೆ. ಹೀಗಾಗಿ ಸಮಕಾಲೀನ ಅಗತ್ಯಗಳು ಮತ್ತು ನೈರ್ಮಲ್ಯ ಉಪಕ್ರಮಗಳ ಅಗತ್ಯಗಳಿಗೆ ಹೊಂದುವಂತೆ ಹೊಸ ವಿಧೇಯಕದ ಅಗತ್ಯ ಇತ್ತು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿತ್ತು. ಜಾನುವಾರುಗಳ ಆರೋಗ್ಯ, ಸುರಕ್ಷೆಗೆ ಇದು ಅನುಕೂಲಕರವಾಗಲಿದೆ ಎಂದು ವ್ಯಾಖ್ಯಾನಿಸಲಾಗಿತ್ತು. ಹೀಗಿದ್ದರೂ, ಉದ್ದೇಶಿತ ಕರಡನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶದ ಅಗತ್ಯ ಇದೆ. ಹೀಗಾಗಿ ವಿಸ್ತೃತ ಸಮಾಲೋಚನೆಗೆ ವಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಪ್ರಾಣಿಗಳ ಹಕ್ಕು ಕಾರ್ಯಕರ್ತರು, ಬಲ ಪಂಥೀಯ ಸಂಘಟನೆಗಳು, ಜೈನ್‌ ಸಮುದಾಯದ ನಾಯಕರು ನಾನಾ ಕಾರಣಗಳಿಗೋಸ್ಕರ ಈ ವಿಧೇಯಕವನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿದ್ದವು. ಪಶು ಸಂಗೋಪನೆ ಮತ್ತು ಡೇರಿ ಇಲಾಖೆ 2023ರ ಜೂನ್‌ 8 ರಂದು ಸಾರ್ವಜಿನಿಕರ ಅಭಿಪ್ರಯಾಯವನ್ನು ಹಮ್ಮಿಕೊಂಡಿತ್ತು.

ಜಾನುವಾರುಗಳ ಸಾಗಣೆ ದೂರದ ಸಂಪರ್ಕಗಳನ್ನು ಒಳಗೊಂಡಿರುವುದರಿಂದ ಪಶುಗಳಿಗೆ ದೂರದ ಪ್ರಯಾಣ ಹಿಂಸಾತ್ಮಕವಾದೀತು. ಈ ರೀತಿ ಜಾನುವಾರುಳನ್ನು ಸಗಣೆ ಮಾಡುವ ಸಂದರ್ಭ ಅವುಗಳಿಗೆ ಅತ್ತಿತ್ತ ಚಲನವಲನಕ್ಕೆ ಸಾಧ್ಯವಾಗುವುದಿಲ್ಲ. ಉಸಿರಾಡಲು ಕೂಡ ಕಷ್ಟವಾಗುತ್ತದೆ, ಇದು ರೋಗಗಳು ಹರಡಲು ಕಾರಣವಾದೀತು. ಜಾನುವಾರುಗಳ ಜೀವಂತ ರಫ್ತು ಬಾರತದ ಅಹಿಂಸಾ ತತ್ತ್ವಕ್ಕೆ ವಿರುದ್ಧವಾಗಿದೆ. ಪ್ರಾಣಿಗಳ ಹಕ್ಕು ರಕ್ಷಣೆ ಕುರಿತ ಹೋರಾಟಗಾರರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಕೇಂದ್ರ ಸರ್ಕಾರ ಉದ್ದೇಶಿತ ವಿಧೇಯಕದ ಬಗ್ಗೆ ವ್ಯಾಪಕ ಸಮಾಲೋಚನೆ, ಸಲಹೆಗಳನ್ನು ಸಂಬಂಧಪಟ್ಟ ಎಲ್ಲರಿಂದ ಪಡೆಯಲಿದೆ. ಯುವಜನತೆ, ವಕೀಲರು, ವೈದ್ಯರು, ಎಲ್ಲ ವೃತ್ತಿಪರರು, ವ್ಯಾಪಾರಸ್ಥರು ವಿಧೇಯಕವನ್ನು ವಿರೋಧಿಸಿದ್ದರು. ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ವೃದ್ಧಿಸಿದೆ ಎಂದು ಪ್ರಾಣಿಗಳ ಸಂರಕ್ಷಣೆ ಕುರಿತ ಸಾಮಾಜಿಕ ಕಾರ್ಯಕರ್ತೆ ತರಾಮಾ ಸಿಂಗ್‌ ತಿಳಿಸಿದ್ದಾರೆ. ವಿಧೇಯಕವನ್ನು ಹಿಂತೆಗೆದುಕೊಂಡಿರುವುದರಿಂದ ಪಶು ಪ್ರಾಣಿಗಳನ್ನು ಮಮತೆಯಿಂದ ಸಲಹುವವರಿಗೆ ದೊಡ್ಡ ಗೆಲುವಾಗಿದೆ ಎಂದು ಮೇಧಾವಿ ಮಿಶ್ರಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ದೇಶಿಯವಾಗಿ ಎಲೆಕ್ಟ್ರಿಕ್ ಕಾರ್ ಮಾರಾಟ, ರಫ್ತಿಗಾಗಿ ಭಾರತದಲ್ಲೇ ಘಟಕ ತೆರೆಯಲು ಮುಂದಾದ ಟೆಸ್ಲಾ?

Exit mobile version