ಗೋರಖಪುರ್, ಉತ್ತರ ಪ್ರದೇಶ: ವಿಕೃತ ಮನಸ್ಸಿನ ವ್ಯಾಪಾರಿಯೊಬ್ಬ ನಾಯಿ (Dog) ಮತ್ತು ಅದರ ಏಳು ಮರಿಗಳಿಗೆ (Puppies) ವಿಷ ಪ್ರಾಶನ ಮಾಡಿಸಿ, ಅವುಗಳನ್ನು ಸುಟ್ಟ ಹಾಕಿದ ಘಟನೆ ಉತ್ತರ ಪ್ರದೇಶದ (Uttar Pradesh) ಗೋರಖಪುರ್‌ನ (Gorakhpur) ಖೋಯಾ ಮಂಡಿ ಲೇನ್‌ನಲ್ಲಿ ನಡೆದಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಫುಲ್ ವೈರಲ್ ಆಗಿದೆ(Viral video).
ಸ್ಥಳೀಯ ವ್ಯಾಪಾರಿಯೊಬ್ಬನ ವಿಕೃತಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸ್ಥಳೀಯ ವ್ಯಾಪಾರಿ ವಿರುದ್ಧ ಜಿಲ್ಲಾ ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಆರೋಪಿ ಗುರ್ಮುಖ್ ಗಂಗಾರಾಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 428 ಮತ್ತು 429ಗಳಡಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
गोरखपुर में 6 डॅाग्स को जहर एवं पेट्रोल डाल कर मार डालने वाले व्यापारी के खिलाफ पशु क्रूरता अधिनियम में मुकदमा दर्ज कर कठोर कार्रवाई की जाए @gorakhpurpolice @dgpup @Heritage_fn @CZA_Delhi @peta pic.twitter.com/supbpzTqER
— Rajeev Datt Panday (@DattRajeev) July 19, 2023
ಖೋಯಾ ಮಂಡಿ ಲೇನ್‌ನಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಆರೋಪಿ ಗಂಗಾರಾಮ್ ಮೊಬೈಲ್ ಶಾಪ್ ನಡೆಸುತ್ತಿದ್ದಾರೆ. ಇದೇ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ನಾಯಿಯೊಂದು ಏಳು ಮರಿಗಳಿಗೆ ಜನ್ಮ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಗಂಗಾರಾಮ್, ವಿಷದಿಂದ ಕೂಡಿದ ಬಿಸ್ಕತ್‌ಗಳನ್ನು ನಾಯಿ ಮತ್ತು ಮರಿಗಳಿಗೆ ತಿನ್ನಿಸಿದ್ದಾನೆ. ವಿಷದ ಬಿಸ್ಕತ್‌ಗಳನ್ನು ಸೇವಿಸಿದ ನಾಯಿ ಮತ್ತು ಮರಿಗಳು ಕೂಡಲೇ ಮೃತಪಟ್ಟಿವೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ವೈರಲ್ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!
ಮೃತ ನಾಯಿ ಮತ್ತು ಮರಿಗಳನ್ನು ಸುಟ್ಟು ಹಾಕಿದ್ದಾನೆ. ಆಗ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಇಡೀ ಘಟನೆಯನ್ನು ವಿಡಿಯೋ ಮಾಡಿದ್ದಾನೆ. ಬಳಿಕ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಗ ಇಡೀ ಘಟನೆಯ ಮಾಹಿತಿ ಬಹಿರಂಗಗೊಂಡಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಯೋಗೇಂದ್ರ ಸಿಂಗ್ ಅವರು ಹೇಳಿದ್ದಾರೆ. ಗಂಗಾರಾಮ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.