Site icon Vistara News

ಆನ್‌ಲೈನ್ ಗೇಮಿಂಗ್, ಕುದುರೆ ರೇಸ್ ಕ್ಲಬ್, ಕ್ಯಾಸಿನೊಗಳ ಮೇಲೆ ಶೇ.28 ತೆರಿಗೆ, ಜಿಎಸ್‌ಟಿ ಬಿಲ್ ಪಾಸ್

GST Collection

GST collection in October 2023 hit second highest ever of ₹1.72 lakh crore

ನವದೆಹಲಿ: ಆನ್‌ಲೈನ್ ಗೇಮಿಂಗ್(online gaming), ಕ್ಯಾಸಿನೊಗಳು (Casino) ಮತ್ತು ಹಾರ್ಸ್ ರೇಸ್ ಕ್ಲಬ್‌‌ಗಳ (horse race clubs) ಮೇಲೆ ಶೇ.28ರಷ್ಟು ತೆರಿಗೆ ವಿಧಿಸುವ ಜಿಎಸ್‌ಟಿ ತಿದ್ದುಪಡಿ ವಿಧೇಯಕಗಳಿಗೆ (GST bills) ಲೋಕಸಭೆಯಲ್ಲಿ(Lok Sabha) ಒಪ್ಪಿಗೆ ನೀಡಲಾಯಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಳೆಗಾಲದ ಸಂಸತ್ ಅಧಿವೇಶನದ ಕೊನೆ ದಿನವಾದ ಶುಕ್ರವಾರ ಲೋಕಸಭೆಯಲ್ಲಿ ಸೆಂಟ್ರಲ್ ಗೂಡ್ಸ್ ಆ್ಯಂಡ್ ಸರ್ವೀಸಸ್ ಟ್ಯಾಕ್(ತಿದ್ದುಪಡಿ) 2023 ಮತ್ತು ಇಂಟಿಗ್ರೆಟೆಡ್ ಗೂಡ್ಸ್ ಆ್ಯಂಡ್ ಸರ್ವೀಸಸ್ ತೆರಿಗೆ(ತಿದ್ದುಪಡಿ) 2023 ವಿಧೇಯಕಗಳನ್ನು ಮಂಡಿಸಿದರು. ಪ್ರತಿಪಕ್ಷಗಳ ಗೈರಿನಲ್ಲೇ ಲೋಕಸಭೆ ಈ ವಿಧೇಯಕಗಳಿಗೆ ಒಪ್ಪಿಗೆ ನೀಡಿತು.

ರಾಜ್ಯಗಳು ಈಗ ತಮ್ಮ ಅಸೆಂಬ್ಲಿಗಳಲ್ಲಿ ರಾಜ್ಯ ಜಿಎಸ್‌ಟಿ ಕಾನೂನುಗಳಲ್ಲಿ ಅಂಗೀಕರಿಸಿದ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಲಿವೆ. ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್‌ಗಳಲ್ಲಿನ ಸರಬರಾಜುಗಳ ತೆರಿಗೆಯ ಮೇಲೆ ಸ್ಪಷ್ಟತೆಯನ್ನು ಒದಗಿಸಲು, 2017 ರ CGST ಕಾಯಿದೆಯ ಶೆಡ್ಯೂಲ್ IIIರಲ್ಲಿ ನಿಬಂಧನೆಯನ್ನು ಸೇರಿಸುವುದಕ್ಕೆ ಈ ತಿದ್ದುಪಡಿಗಳನ್ನು ತರಲಾಗಿದೆ.

ಐಜಿಎಸ್‌ಟಿ ಕಾಯಿದೆಯಲ್ಲಿನ ತಿದ್ದುಪಡಿಯು ಕಡಲಾಚೆಯ ಘಟಕಗಳು ಒದಗಿಸುವ ಆನ್‌ಲೈನ್ ಹಣದ ಗೇಮಿಂಗ್‌ಗೆ ಜಿಎಸ್‌ಟಿ ಹೊಣೆಗಾರಿಕೆಯನ್ನು ವಿಧಿಸುವ ನಿಬಂಧನೆಯನ್ನು ಸೇರಿಸಲಾಗಿದೆ. ಅಂತಹ ಘಟಕಗಳು ಭಾರತದಲ್ಲಿ ಜಿಎಸ್‌ಟಿ ನೋಂದಣಿಯನ್ನು ಪಡೆಯುವ ಅಗತ್ಯವಿರುತ್ತದೆ. ಒಂದೊಮ್ಮೆ ಭಾರತದಲ್ಲಿ ಜಿಎಸ್‌ಟಿಯನ್ನು ನೋಂದಣಿ ಮಾಡಿಕೊಳ್ಳದಿದ್ದರೆ ಅಂಥ ಆನ್‌ಲೈನ್‌ ಗೇಮಿಂಗ್ ಅಕ್ಸೆಸ್ ಅನ್ನು ಬ್ಲಾಕ್ ಮಾಡಬಹುದಾಗಿದೆ.

ಲೋಕಸಭೆಯಲ್ಲಿ ಪಾಸು ಮಾಡಲಾದ ಎರಡೂ ಜಿಎಸ್‌ಟಿ ತಿದ್ದುಪಡಿ ವಿಧೇಯಕಗಳಿಗೆ ಕಳೆದ ವಾರವಷ್ಟೇ ಜಿಎಸ್‌ಟಿ ಕೌನ್ಸಿಲ್ ತನ್ನ ಒಪ್ಪಿಗೆಯನ್ನು ನೀಡಿತ್ತು.

ಜುಲೈನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಕರ್ನಾಟಕ ನಂ.2

ಕಳೆದ ಜುಲೈ ತಿಂಗಳಿನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಪದ್ಧತಿ ಜಾರಿಯಾದಂದಿನಿಂದ 5ನೇ ಬಾರಿಗೆ (GST collection July 2023) 1.6 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹ ಆದಂತಾಗಿದೆ. 2023ರ ಜುಲೈನಲ್ಲಿ 1,65,105 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

ಕರ್ನಾಟಕ 2023ರ ಜುಲೈನಲ್ಲಿ 11,505 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ( 9795 ಕೋಟಿ ರೂ.) 17% ಏರಿಕೆ ದಾಖಲಿಸಿದೆ. ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿದ ರಾಜ್ಯ ಕರ್ನಾಟಕ ಆಗಿದೆ. ಇದರಲ್ಲಿ 29,773 ಕೋಟಿ ರೂ. ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ 37,623 ಕೋಟಿ ರೂ, ಐಜಿಎಸ್‌ಟಿ 85,930 ಕೋಟಿ ರೂ. ಮತ್ತು ಸೆಸ್‌ 11,779 ಕೋಟಿ ರೂ.ಗಳಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11% ಏರಿಕೆಯಾಗಿದೆ. ಸರಕುಗಳ ಆಮದು ವಿಭಾಗದಿಂದ 840 ಕೋಟಿ ರೂ. ಸಂಗ್ರಹವಾಗಿದೆ. 11,779 ಕೋಟಿ ರೂ. ಸೆಸ್‌ ಸಂಗ್ರಹವಾಗಿದೆ.

ಈ ಸುದ್ದಿಯನ್ನೂ ಓದಿ: GST collection : ಜುಲೈನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಕರ್ನಾಟಕ ನಂ.2

ದೇಶೀಯ ವರ್ಗಾವಣೆಗಳ ಮೂಲಕ ಸಿಗುವ ಆದಾಯದಲ್ಲಿ 15% ಹೆಚ್ಚಳವಾಗಿದೆ. ಜೂನ್‌ ತಿಂಗಳಿನಲ್ಲಿ 1,61,487 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಹೀಗಿದ್ದರೂ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ ದಾಖಲೆಯ 1.87 ಲಕ್ಷ ಕೋಟಿ ರೂ.ಗಳ ದಾಖಲೆಯ ಮಟ್ಟಕ್ಕಿಂತ ಕೆಳಕ್ಕಿಳಿದಿದೆ. ಮೇನಲ್ಲಿ 1,57,090 ಕೋಟಿ ರೂ. ಸಂಗ್ರಹವಾಗಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version