ನವದೆಹಲಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ(Lok Sabha Election 2024)ಯ ಮೂರನೇ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಇದರ ನಡುವೆಯೇ ನಟ ಶೇಖರ್ ಸುಮನ್(Shekhar Suman) ಮತ್ತು ಮಾಜಿ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾ(Radhika Khera) ಇಂದು ಬಿಜೆಪಿ(BJP). ಸೇರ್ಪಡೆಗೊಂಡಿದ್ದಾರೆ
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶೇಖರ್ ಸುಮನ್ ಮತ್ತು ರಾಧಿಕಾರನ್ನು ಬಿಜೆಪಿ ಪ್ರಧಾನ ಕಾರ್ಯಕದರ್ಶಿ ವಿನೋದ್ ತಾವ್ಡೆ ಸ್ವಾಗತಿಸಿದರು. ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ರಾಧಿಕಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕೌಸಲ್ಯಾ ಮಾತೆಯ ಜನ್ಮಭೂಮಿ ಛತ್ತೀಸ್‌ಗಡದಲ್ಲಿ ನಾನೊಬ್ಬ ರಾಮ ಭಕ್ತೆ ಎಂಬ ಕಾರಣಕ್ಕಾಗಿ ನನ್ನ ಮೇಲೆ ಪಕ್ಷದ ಕಾರ್ಯಕರ್ತರೇ ಹಲ್ಲೆ ನಡೆಸಿದ್ದರು.ಅವತ್ತು ನನ್ನ ಸಹಾಯಕ್ಕೆ ಬಿಜೆಪಿ ಮತ್ತು ಮೋದಿ ಸರ್ಕಾರ ಬರದೇ ಇದ್ದಿದ್ದರೆ ನಾನು ಇಲ್ಲಿ ಇರಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.
#WATCH | Actor Shekhar Suman joins BJP at the party headquarters in Delhi pic.twitter.com/Y1izO3Fp6X
— ANI (@ANI) May 7, 2024
ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಕನಸಿನಂತೆ ಈಗಿಲ್ಲ. ಅದು ರಾಮ ವಿರೋಧಿ, ಹಿಂದೂ ವಿರೋಧಿ ಪಕ್ಷವಾಗಿ ಬೆಳೆದು ನಿಂತಿದೆ. ರಾಹುಲ್ ಗಾಂಧಿಯವರ ನ್ಯಾಯಯಾತ್ರೆಯ ಸಂದರ್ಭದಲ್ಲಿ ಛತ್ತೀಸ್‌ಗಡ ಕಾಂಗ್ರೆಸ್ ಮುಖಂಡ ಸುಶಿಲ್ ಆನಂದ್ ಶುಕ್ಲಾ ಮದ್ಯ ಸೇವಿಸುವಂತೆ ನನ್ನನ್ನು ಒತ್ತಾಯಿಸಿದ್ದರು. ಮದ್ಯದ ಅಮಲಿನಲ್ಲಿ ಅವರು ಮತ್ತು ಅವರ 5-6 ಜನ ಕಾರ್ಯಕರ್ತರು ನನ್ನ ಕೋಣೆಯ ಬಾಗಿಲು ಬಡಿಯುತಿದ್ದರು. ನಾನು ಈ ಬಗ್ಗೆ ಸಚಿನ್ ಪೈಲಟ್ ಮತ್ತು ಜೈರಾಮ್ ರಮೇಶ್ ಅವರಿಗೆ ದೂರು ನೀಡಿದ್ದೆ ಆದರೆ ಯಾವ ಪ್ರಯೋಜನವೂ ಆಗಿರಲಿಲ್ಲ ಎಂದು ದೂರಿದ್ದಾರೆ.
#WATCH | Former Congress National Media Coordinator, Radhika Khera joins BJP at the party headquarters in Delhi pic.twitter.com/ZnYeVvtFAA
— ANI (@ANI) May 7, 2024
ಈ ವೇಳೆ ಶೇಖರ್ ಸುಮನ್ ಮಾತನಾಡಿದ್ದು, ನಿನ್ನೆಯವರೆಗೆ ನಾನು ಇಲ್ಲಿ ಬಂದು ಕೂರುತ್ತೇನೆ ಎಂದು ಭಾವಿಸಿಯೇ ಇರಲಿಲ್ಲ. ಜೀವನದಲ್ಲಿ ನಡೆದ ಅನೇಕ ಘಟನೆಗಳಿಂದಾಗಿ ನಾನು ಇಂದು ಇಲ್ಲಿ ಬಂದಿದ್ದೇನೆ. ಬಹಳ ಧನಾತ್ಮಕ ಚಿಂತನೆಯೊಂದಿಗೆ ನಾನು ಇಲ್ಲಿ ಬಂದಿದ್ದೇನೆ. ಇಲ್ಲಿ ಬರಲು ಪ್ರೇರೇಪಿಸಿದ ದೇವರಿಗೆ ನಾನು ಆಭಾರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:Rahul Gandhi: ಮೇಲ್ವರ್ಗದವರಿಂದಾಗಿ ಪರೀಕ್ಷೆಗಳಲ್ಲಿ ದಲಿತರು ಫೇಲ್; ರಾಹುಲ್ ಗಾಂಧಿ ಹೊಸ ವಿವಾದ
ತಮ್ಮ ಜೊತೆ ಪಕ್ಷದ ನಾಯಕರು ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ರಾಮಭಕ್ತೆ ಎಂಬ ಕಾರಣಕ್ಕಾಗಿ ರೂಂನಲ್ಲಿ ಕೂಡಿ ಹಾಕಿದ್ದಾರೆ ಎಂದು ರಾಧಿಕಾ ಇತ್ತೀಚೆಗೆ ದೂರಿದ್ದರು. ಎಐಸಿಸಿಯ ವಕ್ತಾರೆಯೂ ಆಗಿದ್ದ ಆಕೆ ಇತ್ತೀಚೆಗೆ ಪಕ್ಷ ತೊರೆದಿದ್ದರು.