Site icon Vistara News

Lok Sabha Election 2024: ಕರ್ನಾಟಕದಲ್ಲಿ ಏ. 26, ಮೇ 7ರಂದು 2 ಹಂತದಲ್ಲಿ ಮತದಾನ; ಯಾವ ಜಿಲ್ಲೆಯಲ್ಲಿ ಯಾವಾಗ?

LOK SABHA ELECTION 2024 Karnataka

ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election 2024) ವೇಳಾಪಟ್ಟಿ (Election Time Table) ಪ್ರಕಟವಾಗಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಚುನಾವಣಾ ಆಯೋಗದ (Election Commission of India) ರಾಜೀವ್‌ ಕುಮಾರ್‌ ಅವರು ಚುನಾವಣಾ ದಿನಾಂಕಗಳನ್ನು (Voting Dates) ಪ್ರಕಟಿಸಿದರು.

ದೇಶದಲ್ಲಿ ಏಳು ಹಂತದಲ್ಲಿ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್‌ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಏಪ್ರಿಲ್‌ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಏಪ್ರಿಲ್‌ 26ರಂದು ಮತದಾನ ನಡೆಯುವ ಕ್ಷೇತ್ರಗಳು: ದಕ್ಷಿಣ ಕರ್ನಾಟಕ

1.ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)

2.ಹಾಸನ (ಸಾಮಾನ್ಯ)

3.ದಕ್ಷಿಣ ಕನ್ನಡ (ಸಾಮಾನ್ಯ)

4.ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)

5..ತುಮಕೂರು (ಸಾಮಾನ್ಯ)

6.ಮಂಡ್ಯ (ಸಾಮಾನ್ಯ)

7.ಮೈಸೂರು-ಕೊಡಗು (ಸಾಮಾನ್ಯ)

8.ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)

9. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)

10 ಬೆಂಗಳೂರು ಉತ್ತರ (ಸಾಮಾನ್ಯ)

11. ಬೆಂಗಳೂರು ಕೇಂದ್ರ (ಸಾಮಾನ್ಯ)

12. ಬೆಂಗಳೂರು ದಕ್ಷಿಣ (ಸಾಮಾನ್ಯ)

13.ಚಿಕ್ಕಬಳ್ಳಾಪುರ (ಸಾಮಾನ್ಯ)

14.ಕೋಲಾರ (ಪರಿಶಿಷ್ಟ ಜಾತಿ ಮೀಸಲು)\

ಎರಡನೇ ಹಂತದ ಮತದಾನದ ವಿವರ ಹೀಗಿದೆ

ಚುನಾವಣೆ ಘೋಷಣೆ: ಮಾರ್ಚ್‌ 16

ಗಜೆಟ್‌ ನೋಟಿಫಿಕೇಶನ್‌: ಮಾರ್ಚ್‌ 28

ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್‌ 04

ನಾಮಪತ್ರ ಪರಿಶೀಲನೆ: ಏಪ್ರಿಲ್‌ 05

ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್‌ 08

ಮತದಾನದ ದಿನಾಂಕ: ಏಪ್ರಿಲ್‌ 26, ಶುಕ್ರವಾರ

ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು: ಉತ್ತರ ಕರ್ನಾಟಕ

1.ಚಿಕ್ಕೋಡಿ (ಸಾಮಾನ್ಯ)

2.ಬೆಳಗಾವಿ (ಸಾಮಾನ್ಯ)

3.ಬಾಗಲಕೋಟೆ (ಸಾಮಾನ್ಯ)

4.ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು)

5.ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)

6.ರಾಯಚೂರು(ಪರಿಶಿಷ್ಟ ಪಂಗಡ ಮೀಸಲು)

7.ಬೀದರ್ (ಸಾಮಾನ್ಯ)

8,ಕೊಪ್ಪಳ (ಸಾಮಾನ್ಯ)

9.ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)

10. ಹಾವೇರಿ (ಸಾಮಾನ್ಯ)

11. ಧಾರವಾಡ (ಸಾಮಾನ್ಯ)

12.ಉತ್ತರ ಕನ್ನಡ (ಸಾಮಾನ್ಯ)

13.ದಾವಣಗೆರೆ (ಸಾಮಾನ್ಯ)

14.ಶಿವಮೊಗ್ಗ (ಸಾಮಾನ್ಯ)

ಎರಡನೇ ಹಂತದ ಮತದಾನದ ವಿವರ ಹೀಗಿದೆ

ಚುನಾವಣೆ ಘೋಷಣೆ: ಮಾರ್ಚ್‌ 16

ಗಜೆಟ್‌ ನೋಟಿಫಿಕೇಶನ್‌: ಏಪ್ರಿಲ್‌ 12

ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್‌ 19

ನಾಮಪತ್ರ ಪರಿಶೀಲನೆ: ಏಪ್ರಿಲ್‌ 20

ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್‌ 22

ಮತದಾನದ ದಿನಾಂಕ: ಮೇ 07, ಮಂಗಳವಾರ

ಈಗ ರಾಜ್ಯದ ರಾಜಕೀಯ ಸ್ಥಿತಿ ಗತಿ ಹೇಗಿದೆ?

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಎಲ್ಲ ಕಡೆ ಕಾಂಗ್ರೆಸ್‌ ಮತ್ತು ಎನ್‌ಡಿಎ ನಡುವೆ ಪ್ರಬಲ ಪೈಪೋಟಿ ಇದೆ. 2019ರ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ ಒಂದು ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆದಿದ್ದರು.

ಈ ಬಾರಿ ಬಿಜೆಪಿ ಮತ್ತು ಜೆಡಿಎಸ್‌ ಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದು 28 ಕ್ಷೇತ್ರಗಳನ್ನು ಹಂಚಿಕೊಂಡಿವೆ. ಬಿಜೆಪಿ 25 ಮತ್ತು ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಹೇಳಲಾಗಿದೆ. (ಇನ್ನೂ ಅಂತಿಮವಾಗಿಲ್ಲ.) ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಎನ್‌ಡಿಎ ನಡುವೆ ಹೋರಾಟ ನಡೆಯಲಿದೆ.

ಸುರಪುರ ಕ್ಷೇತ್ರದ ಉಪಚುನಾವಣೆಯೂ ಜತೆಗೇ ನಡೆಯಲಿದೆ

ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾಗಿದ್ದು, ಅವರ ನಿಧನದಿಂದ ತೆರವಾಗಿರುವ ಕ್ಷೇತ್ರವಾಗಿರುವ ಕ್ಷೇತ್ರಕ್ಕೆ ಲೋಕಸಭಾ ಚುನಾವಣೆಯ ಜತೆಗೇ ಮತದಾನ ನಡೆಯಲಿದೆ.

Exit mobile version