Site icon Vistara News

Lok Sabha Election 2024: ಏಪ್ರಿಲ್‌ 16ರಿಂದ ಲೋಕಸಭೆ ಚುನಾವಣೆ?‌ ಚುನಾವಣೆ ಆಯೋಗ ಹೇಳಿದ್ದೇನು?

One Nation One Election

ಹೊಸದಿಲ್ಲಿ: ಲೋಕಸಭೆ ಚುನಾವಣೆ-2024ಕ್ಕೆ (Lok Sabha Election 2024) ಇಷ್ಟರಲ್ಲಿಯೇ ದಿನಾಂಕ ಘೋಷಿಸಲಾಗುತ್ತದೆ ಎಂದು ಸುದ್ದಿ ಹರಡುತ್ತಿರುವ ಬೆನ್ನಲ್ಲಿಯೇ, ಮಹತ್ವದ ಸಂದೇಶವೊಂದನ್ನು ಚುನಾವಣಾ ಆಯೋಗ (Election commission) ತನ್ನ ಎಕ್ಸ್‌ (ಟ್ವಿಟರ್)‌ ಹ್ಯಾಂಡಲ್‌ನಲ್ಲಿ ಹರಿಬಿಟ್ಟಿದೆ.

ಅದರ ಪ್ರಕಾರ, ʼಪರಿಶೀಲನೆʼಗಾಗಿ ದಿನಾಂಕವೊಂದನ್ನು ʼತಾತ್ಕಾಲಿಕʼವಾಗಿ ನಿಗದಿಪಡಿಸಿರುವುದಾಗಿ ತಿಳಿಸಿದೆ. ಆ ದಿನಾಂಕ ಏಪ್ರಿಲ್‌ 16. ಆಯೋಗದ ಪ್ರಕಾರ ಇದು ʼಅಧಿಕಾರಿಗಳ ಕರ್ತವ್ಯ ಪರಿಪಾಲನೆʼಯ ʼಪರಿಶೀಲನೆʼಗಾಗಿ ನಿಗದಿಪಡಿಸಲಾದ ತಾತ್ಕಾಲಿಕ ದಿನಾಂಕವಾಗಿದೆ.

“ಏಪ್ರಿಲ್‌ 16ನ್ನು ಲೋಕಸಭೆ ಚುನಾವಣೆ ಮತದಾನದ ಹಂತಗಳ ಆರಂಭದ ದಿನಾಂಕ ಎಂದು ನಿಗದಿಪಡಿಸಲಾಗಿದೆಯೇ? ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೆಲವು ಮಾಧ್ಯಮಗಳು ನಮ್ಮನ್ನು ಸಂಪರ್ಕಿಸಿವೆ. ಏಪ್ರಿಲ್‌ 16 ಚುನಾವಣಾ ಆಯೋಗದ ಅಧಿಕಾರಿಗಳು ಮುಂದಿನ ಕಾರ್ಯಯೋಜನೆಯನ್ನು ರೂಪಿಸಲು ಪರಿಶೀಲನೆಗಾಗಿ ಈ ದಿನಾಂಕವನ್ನು ʼತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ” ಎಂದು ಚುನಾವಣಾ ಆಯೋಗ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆದ ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಘೋಷಿಸಲಿದೆ ಎಂಬ ಊಹೆ ದಟ್ಟವಾಗಿ ಹರಡಿದೆ. ಇತ್ತೀಚೆಗೆ ಆಯೋಗದ ದಿಲ್ಲಿ ಕಚೇರಿ ಈ ಕುರಿತ ಪ್ಲಾನಿಂಗ್‌ಗಾಗಿ ತನ್ನ ಅಧಿಕಾರಿಗಳಿಗೆ ಸರ್ಕ್ಯುಲರ್‌ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಅನುಮಾನ ಮೂಡಿತ್ತು.

ಇದನ್ನೂ ಓದಿ: Lok Sabha Election 2024: 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು!

Exit mobile version