ಹರ್ಯಾಣ: ಹರಿಯಾಣ ಮುಖ್ಯಮಂತ್ರಿ (Haryana CM) ಮನೋಹರ್ ಲಾಲ್ ಖಟ್ಟರ್ (Manohar Lal Khattar ) ರಾಜೀನಾಮೆ ನೀಡಿದ್ದಾರೆ. ಮಿತ್ರಪಕ್ಷ ಜೆಜೆಪಿ (JJP) ಜೊತೆಗಿನ ಲೋಕಸಭೆ ಚುನಾವಣೆ (Lok Sabha Election 2024) ಸೀಟು ಹಂಚಿಕೆ (Seat sharing) ಮಾತುಕತೆ ವಿಫಲಗೊಂಡಿರುವ ಪರಿಣಾಮ ಈ ರಾಜೀನಾಮೆ ಎನ್ನಲಾಗಿದೆ. ಸ್ವತಂತ್ರ ಶಾಸಕರ ಜೊತೆ ಸೇರಿ ಸರ್ಕಾರ ರಚಿಸಲು ಬಿಜೆಪಿ (BJP) ಮುಂದಾಗಿದೆ ಎಂದು ತಿಳಿದುಬಂದಿದೆ.
ಹರಿಯಾಣ ನಿವಾಸದಲ್ಲಿ ಆರು ಮಂದಿ ಸ್ವತಂತ್ರ ಶಾಸಕರು ಹಾಗೂ ಬಿಜೆಪಿ ಶಾಸಕರು ಭಾಗವಹಿಸಿದ್ದ ಸಭೆ ನಡೆಸಿದ ನಂತರ ಹರಿಯಾಣ ಸಿಎಂ ರಾಜಭವನಕ್ಕೆ ದೌಡಾಯಿಸಿ ರಾಜೀನಾಮೆ ನೀಡಿದರು. ಬಿಜೆಪಿ ಇಲ್ಲಿ ದುಷ್ಯಂತ್ ಚೌತಾಲಾ ನೇತೃತ್ವದ ಜೆಜೆಪಿ ಜೊತೆ ಸೇರಿ ಸರ್ಕಾರ ರಚಿಸಿತ್ತು. ಚೌತಾಲಾ ಉಪಮುಖ್ಯಮಂತ್ರಿಯಾಗಿದ್ದರು. ಇದೀಗ ಬಿಜೆಪಿ ಹಾಗೂ ಚೌತಾಲಾ ನಡುವೆ ಸಂಬಂಧ ಹಳಸಿದೆ. ಪ್ರಾಥಮಿಕವಾಗಿ, ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ಎರಡೂ ಪಕ್ಷಗಳು ವಿಫಲವಾಗಿವೆ.
ಹರಿಯಾಣ ಸರ್ಕಾರದಲ್ಲಿ ಮಹತ್ವದ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ, ಕೇಂದ್ರ ಬಿಜೆಪಿ ನಾಯಕತ್ವವು ಕೇಂದ್ರ ಸಚಿವ ಅರ್ಜುನ್ ಮುಂಡಾ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ರಾಜ್ಯಕ್ಕೆ ರಾಜಕೀಯ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಸಚಿವರು ರಾಜೀನಾಮೆ ನೀಡುವಂತೆ ಸಿಎಂ ಖಟ್ಟರ್ ಸೂಚಿಸಿದ್ದು, ಸಂಜೆ ವೇಳೆಗೆ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸದಸ್ಯಬಲ ಹೊಂದಿದೆ. 10 ಶಾಸಕರನ್ನು ಹೊಂದಿರುವ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಕ್ಟೋಬರ್ 2019ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು.
ಇದನ್ನೂ ಓದಿ: Free Bus Travel: ಕರ್ನಾಟಕ ಮಾದರಿ, ಮಹಿಳೆಯರೊಂದಿಗೆ ಪುರುಷರಿಗೂ ಉಚಿತ ಪ್ರಯಾಣ ನೀಡಿದ ಹರಿಯಾಣ ಬಿಜೆಪಿ ಸರ್ಕಾರ