ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಈ ಬಾರಿ ಭಾರತೀಯ ಜನತಾ ಪಕ್ಷ (BJP) ಬಹುಮತದ ಸಂಖ್ಯೆಯನ್ನು ದಾಟಲು ವಿಫಲವಾದರೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಮ್ಯಾಜಿಕ್ ಸಂಖ್ಯೆಯನ್ನು ಭದ್ರಪಡಿಸುವಲ್ಲಿ ಯಶಸ್ವಿಯಾಯಿತು. ಇಂಡಿ ಒಕ್ಕೂಟದ (India alliance) ಅದ್ಭುತ ಪ್ರದರ್ಶನದಿಂದಾಗಿ 400ರ ಗುರಿ ತಲುಪುವ ಎನ್ ಡಿ ಎ ಯ ಕನಸು ನುಚ್ಚುನೂರಾಯಿತು.
ಬಿಜೆಪಿ 543 ಸ್ಥಾನಗಳಲ್ಲಿ 240 ಸ್ಥಾನಗಳನ್ನು ಗೆದ್ದಿದ್ದು 2019 ರ ಲೆಕ್ಕಾಚಾರದಿಂದ 60ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಆದರೆ ಆಂಧ್ರಪ್ರದೇಶದಲ್ಲಿ ಎನ್. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳದ (ಯು) ಬೆಂಬಲದಿಂದ ಎನ್ ಡಿ ಎ ಸಂಖ್ಯೆ 292ಕ್ಕೆ ತಲುಪಿದೆ. 16 ಸ್ಥಾನಗಳ ಗೆಲುವುಗಳೊಂದಿಗೆ ಟಿಡಿಪಿ ಎನ್‌ಡಿಎಯಲ್ಲಿ ದೊಡ್ಡ ಪಕ್ಷಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಮತ್ತೊಂದೆಡೆ ಕಾಂಗ್ರೆಸ್ ತನ್ನ 2019ರಲ್ಲಿದ್ದ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ತನ್ನ ಭದ್ರಕೋಟೆಯನ್ನು ಮರಳಿ ಪಡೆದುಕೊಂಡಿದ್ದು, ಭಾರತ ಬ್ಲಾಕ್ ನ ಸಂಖ್ಯೆ 234 ಸ್ಥಾನಗಳಿಗೇರಲು ಸಹಾಯವಾಯಿತು.
ನಿತೀಶ್ ಮತ್ತು ನಾಯ್ಡು ಈ ಹಿಂದೆ ಬಿಜೆಪಿ ವಿರೋಧಿ ಮೈತ್ರಿಯಲ್ಲಿದ್ದ ಕಾರಣ ಇಂಡಿ ಬಣದ ಕೆಲವು ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಲು ಪ್ರಯತ್ನಗಳನ್ನು ಮಾಡಲು ಬಯಸಿದ್ದವು. ಆದರೆ ಬಹುಮತದ ಹಕ್ಕು ಬೆಂಬಲಿಸಲು ಇಂಡಿ ಬ್ಲಾಕ್‌ನಲ್ಲಿ ಇಲ್ಲದ ಮತ್ತಷ್ಟು ಪಕ್ಷಗಳ ಬೆಂಬಲದ ಅಗತ್ಯವಿದೆ.
ಇಂಡಿಯಾ ಮತ್ತು ಎನ್ ಡಿ ಎನಲ್ಲಿ ಇವರಿಲ್ಲ!
ಕಾಂಗ್ರೆಸ್ ಮೈತ್ರಿ ಪಕ್ಷ ಇಂಡಿ ಒಕ್ಕೂಟ ಹಾಗೂ ಬಿಜೆಪಿ ನೇತೃತ್ವದ ಎನ್ ಡಿ ಎ ಒಕ್ಕೂಟ ಈ ಎರಡಕ್ಕೂ ಸೇರದ 17 ಮಂದಿ ಲೋಕಸಭೆ ಚುನಾವಣೆ 2024ರಲ್ಲಿ ಗೆದ್ದು ಸಂಸತ್ತು ಪ್ರವೇಶಿಸಿದ್ದಾರೆ.
ಸ್ವತಂತ್ರರು 7
ಬಿಹಾರ ಪೂರ್ನಿಯಾದ ಕ್ರಿಮಿನಲ್ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್, ಮಹಾರಾಷ್ಟ್ರ ಸಾಂಗ್ಲಿಯ ವಿಶಾಲ್ (ದಾದಾ) ಪ್ರಕಾಶಬಾಪು ಪಾಟೀಲ್ , ಪಂಜಾಬ್ ಖಾದೂರ್ ಸಾಹಿಬ್‌ನ ಸಿಖ್ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್, ಫರೀದ್ಕೋಟ್‌ನ ಸರಬ್ಜೀತ್ ಸಿಂಗ್ ಖಾಲ್ಸಾ, ದಮನ್ ಮತ್ತು ದಿಯು (UT)ನ ಪಟೇಲ್ ಉಮೇಶಭಾಯ್ ಬಾಬುಭಾಯ್ , ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಪ್ರತ್ಯೇಕತಾವಾದಿ ಅಬ್ದುಲ್ ರಶೀದ್ ಶೇಖ್, ಲಡಾಖ್‌ನ ಮೊಹಮ್ಮದ್ ಹನೀಫಾ.
ವೈಎಎಸ್‌ಆರ್‌ಸಿಪಿ 4
ಆಂಧ್ರಪ್ರದೇಶದ ಅರಕು(ಎಸ್ಟಿ) ಕ್ಷೇತ್ರದ ಗುಮ್ಮ ತನುಜಾ ರಾಣಿ, ಕಡಪದ ವೈ.ಎಸ್. ಅವಿನಾಶ್ ರೆಡ್ಡಿ, ತಿರುಪತಿ(SC)ಯ ಗುರುಮೂರ್ತಿ ಮಡ್ಡಿಲ, ರಾಜಂಪೇಟೆಯ ಪಿವಿ ಮಿಧುನ್ ರೆಡ್ಡಿ
ಇದನ್ನೂ ಓದಿ: Agnipath Scheme: ಸರ್ಕಾರ ರಚನೆಗೂ ಮುನ್ನ ನಿತೀಶ್ ಕುಮಾರ್ ಬಿಗ್ ಡಿಮ್ಯಾಂಡ್! ಬಿಜೆಪಿಗೆ ʼಅಗ್ನಿʼ ಪರೀಕ್ಷೆ ಗ್ಯಾರಂಟಿ!
ಎಐಎಂಐಎಂ 1
ತೆಲಂಗಾಣದ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ
ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್) 1
ಉತ್ತರಪ್ರದೇಶ ನಾಗಿನಾದ ಚಂದ್ರಶೇಖರ್
ಶಿರೋಮಣಿ ಅಕಾಲಿದಳ 1
ಪಂಜಾಬ್ ಭಟಿಂಡಾದ ಹರ್ಸಿಮ್ರತ್ ಕೌರ್ ಬಾದಲ್
ಭಾರತ್ ಆದಿವಾಸಿ ಪಕ್ಷ 1
ರಾಜಸ್ಥಾನದ ಬನ್ಸ್ವಾರಾದ ರಾಜ್ ಕುಮಾರ್ ರೋಟ್
ಜೋರಾಮ್ ಪೀಪಲ್ಸ್ ಮೂವ್ಮೆಂಟ್ 1
ಮಿಜೋರಾಂನ ರಿಚರ್ಡ್ ವನ್ಲಾಲ್ಮಂಗೈಹ
ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ 1
ಮೇಘಾಲಯ ಶಿಲಾಂಗ್‌ನ ಡಾ ರಿಕಿ ಆಂಡ್ರ್ಯೂ ಜೆ ಸಿಂಗಾನ್