Site icon Vistara News

Lok Sabha Election 2024: 2.5 ಲಕ್ಷ ಗ್ರಾಮಗಳಲ್ಲಿ ಬಿಜೆಪಿ ‘ರಥ’ಯಾತ್ರೆ; ‘ಲೋಕ’ ಸಮರಕ್ಕೆ ರಣತಂತ್ರ

Narendra Modi

No Viksit Bharat Sankalp Yatra in election bound states till Dec 5: Poll body

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಬಿಜೆಪಿ ಸೇರಿ ಎಲ್ಲ ಪಕ್ಷಗಳು ಸಕಲ ರೀತಿಯಲ್ಲಿ ಸಜ್ಜಾಗುತ್ತಿವೆ. ಸುಮಾರು 26 ಪಕ್ಷಗಳನ್ನು ಒಗ್ಗೂಡಿಸಿಕೊಂಡು ಪ್ರತಿಪಕ್ಷಗಳು ಇಂಡಿಯಾ ಒಕ್ಕೂಟ (INDIA Bloc) ರಚಿಸಿದರೆ, ಬಿಜೆಪಿಯೂ ಎನ್‌ಡಿಎ (NDA) ಮೈತ್ರಿಕೂಟವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿದೆ. ಅದರಲ್ಲೂ, ಲೋಕಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದು, ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಲು ಹೊಸ ಮಾದರಿಯಲ್ಲಿ ರಥಯಾತ್ರೆ (Grameen Samvaad Yatra) ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಹೌದು, ಬಿಜೆಪಿಯು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಗ್ರಾಮೀಣ ಸಂವಾದ ಯಾತ್ರೆ’ ಕೈಗೊಳ್ಳಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವುದು, ಕೇಂದ್ರದ ಸಾಧನೆ, ಪ್ರಮುಖ ತೀರ್ಮಾನಗಳನ್ನು ಜನರಿಗೆ ತಿಳಿಸುವುದು ಗ್ರಾಮೀಣ ಸಂವಾದ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದರೊಂದಿಗೆ, ಲೋಕಸಭೆ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಜನರನ್ನು ತನ್ನತ್ತ ಸೆಳೆಯುವುದು ಬಿಜೆಪಿಯ ರಣತಂತ್ರವಾಗಿದೆ ಎನ್ನಲಾಗಿದೆ.

BJP Flag

1,500 ರಥಗಳು ಸಜ್ಜು

ದೇಶದ ಸುಮಾರು 2.5 ಲಕ್ಷ ಗ್ರಾಮಗಳಲ್ಲಿ ರಥಗಳ ಮೂಲಕ ಗ್ರಾಮೀಣ ಸಂವಾದ ಯಾತ್ರೆ ಕೈಗೊಳ್ಳುವುದು ಬಿಜೆಪಿಯ ಯೋಜನೆಯಾಗಿದೆ. ಇದಕ್ಕಾಗಿ 1,500 ಅತ್ಯಾಧುನಿಕ ರಥಗಳನ್ನು ಕೂಡ ಸಿದ್ಧಪಡಿಸಲಾಗುತ್ತಿದೆ. ಜಿಪಿಎಸ್‌ ಅಳವಡಿಕೆ ಮಾಡಲಾದ, ಡ್ರೋನ್‌ಗಳ ನಿರ್ವಹಣೆ ಸೇರಿ ಹಲವು ರೀತಿಯಲ್ಲಿ ಜನರ ಜತೆ ಸಂವಾದ ನಡೆಸಲು ಸಾಧ್ಯವಾಗುವ ಅತ್ಯಾಧುನಿಕ ರಥಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Lok Sabha Election 2024 : ಸೀಟು ಹಂಚಿಕೆ ಚರ್ಚೆ ಆಗಿಲ್ಲ; ಸುಮಲತಾ ʼಅತಂತ್ರʼದ ಬಗ್ಗೆ ಎಚ್‌ಡಿಕೆ ಹೇಳಿದ್ದೇನು?

ಕೇಂದ್ರದ ಸಚಿವರು, ಸಂಸದರು, ಬಿಜೆಪಿ ನಾಯಕರು, ಶಾಸಕರು ಸೇರಿ ಹಲವರು ಗ್ರಾಮೀಣ ಸಂವಾದ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಇಳಿಸಿದೆ. ಇದರ ಜತೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನೂ ಇಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಭಾರಿ ಪ್ರಮಾಣದ ಪ್ರಚಾರಕ್ಕೂ ಬಿಜೆಪಿ ಎಲ್ಲ ರೀತಿಯಲ್ಲಿ ಸಜ್ಜಾಗುತ್ತಿದೆ.

Exit mobile version