ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಕಾವು ದಿನೇದಿನೆ ಜಾಸ್ತಿಯಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿ ಈಗಾಗಲೇ ನೂರಾರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದ್ದು, ಪ್ರಚಾರ ಆರಂಭಿಸಿದ್ದಾರೆ. ಇನ್ನು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮೀಕ್ಷೆಗಳು ಕೂಡ ಜೋರಾಗಿವೆ. ಸುದ್ದಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳ ಸಾಲು ಸಾಲು ಸಮೀಕ್ಷಾ ವರದಿಗಳು ಪ್ರಕಟವಾಗುತ್ತಿವೆ. ಆ ಮೂಲಕ ದೇಶದ ಜನರ ಬೆಂಬಲ ಯಾವ ಪಕ್ಷಕ್ಕಿದೆ ಎಂಬುದನ್ನು ಚುನಾವಣೆಗೂ ಮೊದಲೇ ಬಹಿರಂಗಪಡಿಸುವ ಯತ್ನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಏಪ್ರಿಲ್ 19ರಿಂದ ಜೂನ್ 1ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು (Exit Polls) ಕೈಗೊಳ್ಳುವಂತಿಲ್ಲ ಎಂದ ಚುನಾವಣಾ ಆಯೋಗವು (Election Commission Of India) ಆದೇಶಿಸಿದೆ.
ಮೊದಲ ಹಂತದ ಮತದಾನ ನಡೆಯುವ ಏಪ್ರಿಲ್ 19ರ ಬೆಳಗ್ಗೆ 7 ಗಂಟೆಯಿಂದ ಚುನಾವಣೆ ಮುಗಿಯುವ ಜೂನ್ 1ರ ಸಂಜೆ 6.30ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುವಂತಿಲ್ಲ. ಚುನಾವಣೆಯಲ್ಲಿ ಪಕ್ಷಗಳಿಗೆ ಬೆಂಬಲ, ಅಭಿಪ್ರಾಯ ಸಂಗ್ರಹ ಸೇರಿ ಯಾವುದೇ ರೀತಿಯ ಸಮೀಕ್ಷೆಗಳನ್ನು ನಡೆಸಬಾರದು ಹಾಗೂ ಅವುಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂಬುದಾಗಿ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ಏಪ್ರಿಲ್ 19ರಿಂದ ಚುನಾವಣೆ ಆರಂಭವಾಗಲಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 1ರಂದು ಚುನಾವಣೆ ಮುಗಿಯಲಿದೆ.
चुनाव आयोग ने एग्जिट पोल के आयोजन और प्रसारण पर रोक लगाने के लिए अधिसूचना जारी कर दी है।
— PIB in Bihar 🇮🇳 (@PIB_Patna) March 29, 2024
यह प्रतिबंध #LokSabhaElection2024 के प्रारंभ होने से पूर्ण होने तक अर्थात आगामी 19 अप्रैल को सुबह 7:00 बजे से 1 जून को शाम 6:30 बजे तक लागू रहेगा।#ElectionCommission #ExitPolls pic.twitter.com/PWOSZxJ7RK
ಯಾವ ರಾಜ್ಯಗಳಲ್ಲಿ ಎಷ್ಟು ಹಂತಗಳ ಮತದಾನ?
ಒಂದು ಹಂತ: ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್ ದ್ವೀಪ, ಆಂಧ್ರಪ್ರದೇಶ, ಚಂಡೀಗಢ, ದಿಯು-ದಮನ್ ನಾಗರ & ಹವೇಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಲಕ್ಷದ್ವೀಪ, ಲಡಾಕ್, ಮಿಜೀರಾಂ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ ಹಾಗೂ ಉತ್ತರಾಖಂಡ
ಎರಡು ಹಂತ: ಕರ್ನಾಟಕ, ರಾಜಸ್ಥಾನ, ತ್ರಿಪುರಾ, ಮಣಿಪುರ
ಮೂರು ಹಂತ: ಛತ್ತೀಸ್‌ಗಢ, ಅಸ್ಸಾಂ
ನಾಲ್ಕು ಹಂತ: ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್
ಮೂರು ಹಂತ: ಛತ್ತೀಸ್‌ಗಢ, ಅಸ್ಸಾಂ
ನಾಲ್ಕು ಹಂತ: ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್
ಇದನ್ನೂ ಓದಿ: Lok Sabha Election 2024: ಅಮಿತ್ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
97 ಕೋಟಿ ನೋಂದಣಿ ಮಾಡಿಕೊಂಡ ಮತದಾರರು
97 ಕೋಟಿ ಮತದಾರರು ಈ ನೋಂದಣಿ ಮಾಡಿಕೊಂಡಿದ್ದಾರೆ. 10.5 ಲಕ್ಷ ಮತಗಟ್ಟೆಗಳನ್ನು ರಚಿಸಲಾಗುತ್ತದೆ. 55 ಲಕ್ಷ ಮತಯಂತ್ರಗಳನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತೇವೆ. ಇದುವರೆಗೆ 100 ಅಧಿಕ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಚುನಾವಣಾ ಆಯೋಗದ್ದಾಗಿದೆ. ಈ ಬಾರಿ 18-19 ವರ್ಷದ 1.89 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 85 ವರ್ಷ ದಾಟಿದವರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ವಿಶೇಷ ಚೇತನರಿಗೂ ಕೂಡ ಮನೆಯಿಂದಲೇ ಮತದಾನ ಮಾಡಬಹುದಾಗಿದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ