Site icon Vistara News

Lok Sabha Election 2024: ಬಿಜೆಪಿ 400+ ಸೀಟು ಗೆಲ್ಲುತ್ತಾ? ಸಟ್ಟಾ ಬಜಾರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

Lok Sabha Election 2024

ನವದೆಹಲಿ: ಲೋಕಸಭಾ ಚುನಾವಣೆಯ(Lok Sabha Election 2024) ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದ್ದು, ಈಗಿನಿಂದಲೇ ಸೋಲು ಗೆಲವಿನ ಲೆಕ್ಕಾಚಾರ ಒಂದೆಡೆಯಾದರೆ ಬಿಜೆಪಿ(BJP)ಯ 400 ಸ್ಥಾನಗಳ ಟಾರ್ಗೆಟ್‌ ಬಗೆಗಿನ ಚರ್ಚೆ ಮತ್ತೊಂದೆಡೆ. ಇದರ ನಡುವೆ ನಿಖರ ಚುನಾವಣಾ ಫಲಿತಾಂಶ(Election Result)ದ ಬಗ್ಗೆ ನಿಖರವಾದ ಸಮೀಕ್ಷೆ ವರದಿಗೆ ಖ್ಯಾತಿ ಪಡೆದಿರುವ ಪಲೋಡಿ ಸಟ್ಟಾ ಬಜಾರ್‌(Phalodi Satta Bazar) ಫಲಿತಾಂಶದ ಬಗ್ಗೆ ವರದಿಯೊಂದನ್ನು ನೀಡಿದೆ. ಈ ಬಾರಿ 400ಕ್ಕೂ ಅಧಿಕ ಸೀಟ್‌ ಪಡೆಯುವ ನಿರೀಕ್ಷೆಯಲ್ಲಿರುವ ಬಿಜೆಪಿಗೆ ಈ ವರದಿ ಶಾಕ್‌ ನೀಡಿದೆ. ಈ ವರದಿ ಬಿಜೆಪಿಯ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

ಈಗಾಗಲೇ ಮೊದಲ ನಾಲ್ಕು ಹಂತಗಳಲ್ಲಿ ಒಟ್ಟು 379 ಕ್ಷೇತ್ರಗಳಲ್ಲಿ ಅಂದರೆ ಶೇ.70ರಷ್ಟು ಕ್ಷೇತ್ರಗಳಲ್ಲಿ ಚುನಾವಣೆ ಪೂರ್ಣಗೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲೂ ಸ್ವಲ್ಪ ಇಳಿಕೆ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಾನು ಈ ಹಿಂದೆ ನೀಡಿದ್ದ ವರದಿಯನ್ನು ಮರು ಪರಿಷ್ಕರಣೆ ಮಾಡಿರುವ ಪಲೋಡಿ ಸಟ್ಟಾ ಬಜಾರ್‌, ಬಿಜೆಪಿ 2019ರ ಚುನಾವಣೆಗಿಂತಲೂ ಕಡಿಮೆ ಅಂದರೆ 303 ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನಗಳನ್ನು ಗಳಿಸಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ನಾಲ್ಕನೇ ಹಂತದ ಮತದಾನ ನಡೆಯುವ ಮುನ್ನ ಪಲೋಡಿ ಸಟ್ಟಾ ಬಜಾರ್‌ ಫಲಿತಾಂಶದ ಸಮೀಕ್ಷೆ ವರದಿಯೊಂದನ್ನು ನೀಡಿತ್ತು. ಅದರಲ್ಲಿ ಈ ಬಾರಿ ಬಿಜೆಪಿ 307-310 ಸ್ಥಾನಗಳನ್ನು ಗಳಿಸಲಿದೆ ಎಂಬುದು ತಿಳಿದುಬಂದಿತ್ತು. ಆದರೆ ಈಗ ಹೊಸದಾಗಿ ಒಂದು ವರದಿ ನೀಡಿದ್ದು, ಈ ಬಾರಿ ಬಿಜೆಪಿ ಕೇವಲ 296-300 ಸ್ಥಾನಗಳನ್ನು ಹಾಗೂ ಎನ್‌ಡಿಎ 329 to 332 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ. ಇನ್ನು ಕಾಂಗ್ರೆಸ್‌ 58 ರಿಂದ 62 ಸ್ಥಾನಗಳನ್ನು ಗೆಲ್ಲಲಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಇನ್ನುಳಿದ 164 ಕ್ಷೇತ್ರಗಳಲ್ಲಿ ಮೇ 20, ಮೇ 25 ಮತ್ತು ಜೂ. 1 ರಂದು ಮತದಾನ ನಡೆಯಲಿದೆ.

ರಾಜ್ಯಗಳಲ್ಲಿ ಗೆಲುವಿನ ಲೆಕ್ಕಾಚಾರ ಹೇಗಿದೆ?

ಪಲೋಡಿ ಸಟ್ಟಾ ಬಜಾರ್‌ ನೀಡಿರುವ ವರದಿ ಪ್ರಕಾರ, ಗುಜರಾತ್‌ನ ಎಲ್ಲಾ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವ ಸಾಧಿಸಿದರೆ, ಮಧ್ಯಪ್ರದೇಶದ 29 ಕ್ಷೇತ್ರಗಳಲ್ಲಿ 27-28 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವುದು ಖಚಿತವಾಗಿದೆ. ರಾಜಸ್ಥಾನದಲ್ಲಿ 25 ಸ್ಥಾನಗಳಲ್ಲಿ ಈ ಬಾರಿ 18-20 ಸ್ಥಾನಗಳನ್ನು ಮಾತ್ರ ಬಿಜೆಪಿ ಗೆಲ್ಲಬಹುದಾಗಿದೆ. ಒಡಿಶಾದ 21 ಸ್ಥಾನಗಳಲ್ಲಿ, ಬಿಜೆಪಿ 11-12 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ .

ಪಂಜಾಬ್‌ನಲ್ಲಿ ಪಕ್ಷವು ಯಾವುದೇ ಪ್ರಮುಖ ಬದಲಾವಣೆಯನ್ನು ಕಾಣುವ ಸಾಧ್ಯತೆಯಿಲ್ಲ, ರಾಜ್ಯದಲ್ಲಿ 2-3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷಿ ಇದೆ. 2019ರ ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಬಾರಿ 1೦ಸ್ಥಾನಗಳನ್ನು ಗೆದ್ದುಕೊಂಡಿದ್ದ ನೆರೆಯ ಹರಿಯಾಣದಲ್ಲಿ, ಪಕ್ಷಕ್ಕೆ 5-6 ಸ್ಥಾನಗಳು ಮಾತ್ರ ದೊರೆಯಲಿದೆ. ತೆಲಂಗಾಣದಲ್ಲಿ ಬಿಜೆಪಿಗೆ 5-6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಹಿಮಾಚಲ ಪ್ರದೇಶದಲ್ಲಿ ಪಕ್ಷವು ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ, ಕ್ಲೀನ್ ಸ್ವೀಪ್ ಆಗುವ ಸಾಧ್ಯತೆ ಇದೆ. ಪಕ್ಷ ಉತ್ತರಾಖಂಡದಲ್ಲಿ 5 ಸ್ಥಾನ ಬಿಜೆಪಿ ಬಿಜೆಪಿ ಪಾಲಾಗಾಲಿದೆ.

ಇದನ್ನೂ ಓದಿ: Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಛತ್ತೀಸ್‌ಗಢದ 11 ಸ್ಥಾನಗಳಲ್ಲಿ ಪಕ್ಷವು 10-11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. 2019ರ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದಿತ್ತು. ಪಕ್ಷವು ದೆಹಲಿಯಲ್ಲಿ 6-7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ – ಅದು 2019 ರಲ್ಲಿಯೂ ಎಲ್ಲಾ 7 ಸ್ಥಾನಗಳನ್ನು ಗೆದ್ದಿತ್ತು. ಸಟ್ಟಾ ಬಜಾರ್ ಪ್ರಕಾರ ತಮಿಳುನಾಡಿನಲ್ಲಿ ಪಕ್ಷವು 3-4 ಸ್ಥಾನಗಳೊಂದಿಗೆ ಕೆಲವು ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಫಲೋಡಿ ಸತ್ತಾ ಬಜಾರ್ ಪ್ರಕಾರ, ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ತನ್ನ ಸಂಖ್ಯೆಯನ್ನು ಸುಧಾರಿಸುವ ಸಾಧ್ಯತೆಯಿದೆ, ಅದರ ಅಂದಾಜಿನ ಪ್ರಕಾರ 42 ಸ್ಥಾನಗಳಲ್ಲಿ 21-22 ಸ್ಥಾನಗಳನ್ನು ಗೆಲ್ಲಬಹುದೆಂದು ಸೂಚಿಸುತ್ತದೆ.

Exit mobile version