Site icon Vistara News

Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

Lok Sabha Election 2024

ಉತ್ತರಪ್ರದೇಶ: ಲೋಕಸಭೆ ಚುನಾವಣೆ(Lok Sabha Election 2024) ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಚುನಾವಣೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ರಾಜಕೀಯ ನಾಯಕರು ಒಂದರ ಮೇಲೊಂದರಂತೆ ರ್ಯಾಲಿ, ಸಾರ್ವಜನಿಕ ಸಭೆ ನಡೆಸುವ ಮೂಲಕ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ನಿನ್ನೆ ಉತ್ತರಪ್ರದೇಶ(Uttara Pradesh)ದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ಮತ್ತು ಅಖಿಲೇಶ್‌ ಯಾದವ್‌(Akhilesh Yadav) ಭಾಗಿಯಾಗಿದ್ದ ಚುನಾವಣಾ ರ್ಯಲಿಯಲ್ಲಿ ದಾಖಲೆ ಪ್ರಮಾಣದಲ್ಲಿ ಜನಸ್ತೋಮ ಸೇರಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಫುಲ್‌ಫುರದಲ್ಲಿ ಸ್ವತಃ ನಾಯಕರೇ ಆಘಾತಕ್ಕೀಡಾಗುವಂತಹ ರೀತಿಯಲ್ಲಿ ಜನ ಭಾಗಿಯಾಗಿದ್ದರು. ನೆರೆದಿರುವ ಜನರನ್ನು ನಿಯಂತ್ರಿಸಲು ಪೊಲೀಸರು, ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಪಡಿಲ ಮಹಾದೇವ್‌ನಲ್ಲಿ ನಡೆದ ಇಂಡಿಯಾ ಒಕ್ಕೂಟದ ರ್‍ಯಾಲಿಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ಭಾರಿ ಬೆಂಬಲಿಗರು ಸೇರಿದ್ದರು, ಜನ ವೇದಿಕೆ ಮೇಲೆ ಬರಲಿ ಬ್ಯಾರಿಕೇಡ್‌ಗಳನ್ನು ಮುರಿದ ಕಾರಣ, ಗೊಂದಲದ ವಾತಾವರಣ ಉಂಟಾಗಿತ್ತು, ಸಮಾಧಾನದಿಂದ ಇರುವಂತೆ ರಾಹುಲ್ ಗಾಂಧಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಒಟ್ಟಿನಲ್ಲಿ ಒಂದು ಕ್ಷಣಕ್ಕೆ ಕಾಲ್ತುಳಿತದಂತಹ ದುರ್ಘಟನೆ ಸಂಭವಿಸುವ ಎಲ್ಲಾ ಲಕ್ಷಣ ಎದ್ದು ಕಾಣುತ್ತಿತ್ತು.

ಭಾಷಣ ಮಾಡದೇ ವೇದಿಕೆಯಿಂದ ನಿರ್ಗಮಿಸಿದ ರಾಹುಲ್‌, ಅಖಿಲೇಶ್‌

ಭಾರೀ ಜನಸ್ತೋಮ ಕಂಡು ದಂಗಾಗಿದ್ದ ರಾಹುಲ್‌ ಮತ್ತು ಅಖಿಲೇಶ್‌ ವೇದಿಕೆಯಿಂದ ನಿರ್ಗಮಿಸುವುದೇ ಸೂಕ್ತ ಎಂದು ಭಾವಿಸಿದರು. ಉದ್ರಿಕ್ತ ಜನ ಬ್ಯಾರಿಕೇಟ್‌ಗಳನ್ನು ಮುರಿದು ಒಳಗೆ ಪ್ರವೇಶಿಸಿದ್ದರು. ಅಲ್ಲದೇ ಕಹಲವು ವೇದಿಕೆಗೆ ಹತ್ತಲೂ ಯತ್ನಿಸಿದ್ದರು. ಕೆಲವರು ವೇದಿಕೆ ಏರುವಲ್ಲಿ ಯಶಸ್ವಿ ಆಗಿದ್ದರು. ಕಾರ್ಯಕರ್ತರ ಈ ರೀತಿಯಾದ ಅನುಚಿತ ವರ್ತನೆಯಿಂದ ಕುಪಿತಗೊಂಡ ಇಬ್ಬರೂ ನಾಯಕರು ಏನೂ ಮಾತನಾಡಲಿಲ್ಲ. ತಾವು ಮಾಡಬೇಕಾಗಿದ್ದ ಭಾಷಣವನ್ನೂ ಮಾಡದೇ ಇಬ್ಬರೂ ನಾಯಕರು ವೇದಿಕೆಯಿಂದ ನಿರ್ಗಮಿಸಿ ಬಳಿಕ ಇಬ್ಬರೂ ನಾಯಕರು ಇಲ್ಲಿಂದ ಹೆಲಿಕಾಪ್ಟರ್‌ನಲ್ಲಿ ತೆರಳಿದರು.

ಗಲಾಟೆ ಎಷ್ಟು ದೊಡ್ಡದಾಗಿದೆ ಎಂದರೆ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಯಾವುದೇ ಭಾಷಣ ಮಾಡದೆ ಸ್ಥಳದಿಂದ ನಿರ್ಗಮಿಸಿದರು. ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಮತ್ತು ಅಖಿಲೇಶ್ ಜಂಟಿ ಸಾರ್ವಜನಿಕ ಸಭೆ ನಡೆಯಬೇಕಿತ್ತು. ರಾಹುಲ್ ಗಾಂಧಿ ಅವರು ಪ್ರಯಾಗ್‌ರಾಜ್‌ನ ಪಕ್ಷದ ಅಭ್ಯರ್ಥಿ ಉಜ್ವಲ್ ರಾಮನ್‌ಸಿಂಗ್‌ಗೆ ಮತ ನೀಡುವಂತೆ ಮತದಾರರಿಗೆ ಮನವಿ ಮಾಡಿದರು.

ಇದನ್ನೂ ಓದಿ:Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

ಕಾಂಗ್ರೆಸ್-ಸಮಾಜವಾದಿ ಪಕ್ಷದ ಸಹಭಾಗಿತ್ವವನ್ನು ಬೆಂಬಲಿಸಲು ನಮ್ಮ ಸಾವಿರಾರು ಕಾರ್ಯಕರ್ತರು ಇಲ್ಲಿದ್ದಾರೆ. ಮತಗಟ್ಟೆಗಳಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ನಿಂತು ಇಲ್ಲಿನ ಅಭ್ಯರ್ಥಿಯನ್ನು 5 ಲಕ್ಷ ಮತಗಳಿಂದ ಗೆಲ್ಲಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ, ಇಲ್ಲಿ ನಮ್ಮ ಅಭ್ಯರ್ಥಿ ಉಜ್ವಲ್ ರಮಣ್‌ಸಿಂಗ್ ಇದ್ದಾರೆ, ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸಿ ಎಂದಷ್ಟೇ ಹೇಳಿ ವೇದಿಕೆಯಿಂದ ನಿರ್ಗಮಿಸಿದರು.

Exit mobile version