ಬೆಂಗಳೂರು: ಲೋಕ ಸಭಾ ಚುನಾವಣೆಯಲ್ಲಿ ಹಿನ್ನೆಲೆಯ (Lok Sabha Election) ಪ್ರಚಾರ ಸಭೆಯಲ್ಲಿ ಬಿಜೆಪಿ ನಾಯಕಿ ಹೇಮಾ ಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ 48 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿಷೇಧ ಹೇರಿದೆ. ಮಾಲಿನಿ ಬಗ್ಗೆ “ಅಮಾನವೀಯ, ಅನಾಗರಿಕ ಮತ್ತು ಅಶ್ಲೀಲ” ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಚುನಾವಣಾ ಆಯೋಗವು ಸುರ್ಜೆವಾಲಾ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಸುರ್ಜೆವಾಲಾ ಅವರ ಉತ್ತರದಲ್ಲಿ ನೀಡಿದ ಹೇಳಿಕೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ವಿಷಯದಲ್ಲಿ ಹೊರಡಿಸಲಾದ ಅಥವಾ ನಂತರ ಅವರಿಗೆ ನೀಡಿರುವ ಆದೇಶದಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಹರಿಯಾಣದಲ್ಲಿ ನಡೆದ ಚುನಾವಣಾ ಪ್ರಚಾರದ ಸಮಯದಲ್ಲಿ ಸುರ್ಜೇವಾಲಾ ನೀಡಿದ ಹೇಳಿಕೆಯನ್ನು ಆಯೋಗವು ಬಲವಾಗಿ ಖಂಡಿಸುತ್ತದೆ. ದುರ್ನಡತೆಗಾಗಿ ರಣದೀಪ್ ಸುರ್ಜೆವಾಲಾ ಅವರಿಗೆ ಛೀಮಾರಿ ಹಾಕಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
ಸಂವಿಧಾನದ 324 ನೇ ವಿಧಿ ಮತ್ತು ಈ ನಿಟ್ಟಿನಲ್ಲಿ ಇರುವ ಎಲ್ಲ ಅಧಿಕಾರಗಳ ಅಡಿಯಲ್ಲಿ, ಆಯೋಗವು ಏಪ್ರಿಲ್ 16 ರಂದು ಸಂಜೆ 6 ಗಂಟೆಯಿಂದ 48 ಗಂಟೆಗಳ ಕಾಲ ಸುರ್ಜೇವಾಲಾ ಅವರಿಗೆ ನಿಷೇಧ ಹೇರುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಸಭೆಗಳು, ಸಾರ್ವಜನಿಕ ಮೆರವಣಿಗೆಗಳು, ಸಾರ್ವಜನಿಕ ರ್ಯಾಲಿಗಳು, ರೋಡ್ ಶೋಗಳು ಮತ್ತು ಸಂದರ್ಶನಗಳು, ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳು (ಎಲೆಕ್ಟ್ರಾನಿಕ್, ಮುದ್ರಣ, ಸಾಮಾಜಿಕ ಮಾಧ್ಯಮ) ಇತ್ಯಾದಿಗಳನ್ನು ನಡೆಸುವಂತಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಬೆಂಬಲ ನೀಡಿ: ಶಾಸಕ ಉದಯ್
ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಹೇಳಿಕೆಗಳು “ಅತ್ಯಂತ ಅಮಾನವೀಯ, ಅಶ್ಲೀಲ ಮತ್ತು ಅನಾಗರಿಕ” ಮತ್ತು ಮೇಲ್ನೋಟಕ್ಕೆ ಮಾದರಿ ನೀತಿ ಸಂಹಿತೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ. ಕಳೆದ ತಿಂಗಳು ಪಕ್ಷಗಳಿಗೆ ಚುನಾವಣಾ ಆಯೋಗ ನೀಡಿದ ಸಲಹೆಯನ್ನು ಇಲ್ಲಿ ಉಲ್ಲಂಘಿಸಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಮೊದಲ ನಿಷೇಧ
ಈ ಲೋಕಸಭಾ ಚುನಾವಣಾ ಚಕ್ರದಲ್ಲಿ ಚುನಾವಣಾ ಆಯೋಗವು ವಿಧಿಸಿದ ಮೊದಲ ಪ್ರಚಾರ ನಿಷೇಧ ಇದಾಗಿದೆ. ಬಿಜೆಪಿಯನ್ನು ಟೀಕಿಸುವಾಗ ಸುರ್ಜೆವಾಲಾ ಅವರು ಹೇಮಾ ಮಾಲಿನಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಆ ವಿಡಿಯೊವನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹಂಚಿಕೊಂಡ ನಂತರ ಈ ವಿವಾದ ಉದ್ಭವಿಸಿದೆ.
ಸುರ್ಜೇವಾಲಾ ಅವರ ಹೇಳಿಕೆಯನ್ನು “ಅಶ್ಲೀಲ, ಲೈಂಗಿಕ ಮತ್ತು ಅವಮಾನಕರ” ಎಂದು ಖಂಡಿಸಿ ಬಿಜೆಪಿ ತಕ್ಷಣ ಚುನಾವಣಾ ಆಯೋಗಕ್ಕೆ ದೂರು ನೀಡಿತು. ಸುರ್ಜೆವಾಲಾ ತಮ್ಮನ್ನು ಸಮರ್ಥಿಸಿಕೊಂಡಿದ್ದು, ವೀಡಿಯೊವನ್ನು ನಕಲಿ ಮತ್ತು ತಿರುಚಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಸಂಸದರನ್ನು ನೋಯಿಸುವ ಅಥವಾ ಅವಮಾನಿಸುವ ಉದ್ದೇಶ ನನಗಿಲ್ಲ ಎಂದು ಅವರು ಪ್ರತಿಪಾದಿಸಿದರು.