ಹೊಸದಿಲ್ಲಿ: ಎರಡು ದಿನಗಳ ಹಿಂದಷ್ಟೇ ಮನೆ ಬಳಕೆದಾರ ಎಲ್‌ಪಿಜಿ (Domestic LPG) ಸಿಲಿಂಡರ್‌ಗಳಿಗೆ 200 ರೂ.ಗಳಷ್ಟು ಇಳಿಕೆ (LPG Price cut) ಮಾಡಿದ್ದ ಕೇಂದ್ರ ಸರ್ಕಾರ, ಇಂದು ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. ವಾಣಿಜ್ಯ ಎಲ್‌ಪಿಜಿ (Commercial LPG) ಸಿಲಿಂಡರ್‌ಗಳ ಬೆಲೆಯಲ್ಲಿ ರೂ.157ರಷ್ಟು ಕಡಿತ ಮಾಡಲಾಗಿದೆ.
ಸರ್ಕಾರಿ ತೈಲ ಕಂಪನಿಗಳು ಮನೆಬಳಕೆ ಅನಿಲ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಗಳನ್ನು ಸೆಪ್ಟೆಂಬರ್ 1ರಂದು ನವೀಕರಿಸಿವೆ. ಈ ಬದಲಾವಣೆಯಿಂದಾಗಿ ದೇಶದ ರಾಜಧಾನಿ ನವದೆಹಲಿಯಲ್ಲಿ LPG ಸಿಲಿಂಡರ್ ಬೆಲೆ 1522.50 ರೂ. ಇದೆ. ಈ ಮೊದಲು ಏರಿಕೆಯೊಂದಿಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಜುಲೈ 4ರಂದು 1780 ರೂ.ಗೆ ತಲುಪಿತ್ತು.
ಆಗಸ್ಟ್ 30ರಂದು ಮಾಡಿದ ಕೇಂದ್ರ ಕ್ಯಾಬಿನೆಟ್ ಪ್ರಕಟಣೆಯ ಪ್ರಕಾರ ಮನೆಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ರೂ. 200ರಷ್ಟು ಕಡಿಮೆ ಮಾಡಲಾಗಿದೆ. ಸರ್ಕಾರದ ಈ ಹೊಸ ನಿರ್ಧಾರದ ನಂತರ, ಎಲ್‌ಪಿಜಿ ಸಿಲಿಂಡರ್‌ಗಳ (14.2 ಕೆಜಿ) ಬೆಲೆಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಈಗ 903 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಈಗ ಮೊದಲಿಗಿಂತ 200 ರೂಪಾಯಿ ಕಡಿಮೆ ಬೆಲೆಗೆ ಸಿಲಿಂಡರ್ ಪಡೆಯುತ್ತಿದ್ದಾರೆ.
ಸೆಪ್ಟೆಂಬರ್ 1ರಿಂದ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 157 ರೂಪಾಯಿ ಕಡಿತಗೊಂಡಿದೆ. ದೆಹಲಿಯಲ್ಲಿ 1680 ರೂಪಾಯಿ ಬದಲಿಗೆ 1522.50 ರೂಪಾಯಿ, ಬೆಂಗಳೂರಿನಲ್ಲಿ 1766 ರೂ. ಬದಲಿಗೆ 1609.50 ರೂ, ಮುಂಬೈನಲ್ಲಿ 1640.50 ರೂ. ಬದಲಿಗೆ ರೂ. 1482ಕ್ಕೆ ಸಿಗಲಿದೆ.
ಉಜ್ವಲ ಯೋಜನೆಯಡಿ ಒಳಪಡುವ 10 ಕೋಟಿಗೂ ಹೆಚ್ಚು ಜನರು 400 ರೂ.ಗಳ ಪ್ರಯೋಜನವನ್ನು ಪಡೆಯುತ್ತಾರೆ. ಏಕೆಂದರೆ ಅವರಿಗೆ ಈಗಾಗಲೇ 200 ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: Petrol Price Cut: ಎಲ್‌ಪಿಜಿ ದರ ಇಳಿಯಿತು, ಕೆಲವೇ ದಿನದಲ್ಲಿ ಪೆಟ್ರೋಲ್ ಬೆಲೆಯೂ ಇಳಿಕೆ? ಮೋದಿ ಪ್ಲಾನ್ ಏನು?