ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ (Uttarakhand Violence) ಗುರುವಾರ ಮದರಸ ನೆಲಸಮ ಮಾಡುವ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಕಾನೂನುಬಾಹಿರವಾಗಿ ನಿರ್ಮಿಸಲಾದ ಮದರಸವನ್ನು ತೆರವುಗೊಳಿಸಲು (Madrasa Demolition) ಅಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಮುಂದಾಗಿದ್ದರು. ಈ ವೇಳೆ, ಉದ್ರಿಕ್ತರ ಗುಂಪು ಅಧಿಕಾರಿಗಳು ಮತ್ತು ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗಾಯಗೊಂಡ ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಈ ಮಧ್ಯೆ, ಹಿಂಸಾಚಾರ ನಿಯಂತ್ರಣಕ್ಕೆ ಸರ್ಕಾರವು, ಗಲಭೆಕೋರರ ವಿರುದ್ಧ ಕಂಡಲ್ಲಿ ಗುಂಡು ಹೊಡೆಯುವ ಆದೇಶವನ್ನು ನೀಡಿದೆ(Shoot-At-Sight Order).
पत्थरबाजो का आतंक देख लो हिंदूओ 🚨🚨
— Avkush Singh (@AvkushSingh) February 8, 2024
तुम जातियों में बँटना बस इसलिए बंद कर दो एकजुट हो कर उनका साथ दो जो तुम्हारे अधिकारों को सुरक्षित कर रहे हैं!
मैं तो पुष्कर धामी जी के साथ हूँ क्या आप साथ हैं ? #Haldwani #UttarakhandUCCBill #Uttarakhand pic.twitter.com/liNtMY17Ck
ಪೊಲೀಸರಲ್ಲದೆ, ಆಡಳಿತ ಮತ್ತು ನಾಗರಿಕ ಅಧಿಕಾರಿಗಳ ತಂಡವು ಪಕ್ಕದ ಮಸೀದಿಯನ್ನು ಹೊಂದಿರುವ ಮದರಸಾಕ್ಕೆ ಹೋಗಿತ್ತು. ಮೂಲಗಳ ಪ್ರಕಾರ ಜೆಸಿಬಿ ಯಂತ್ರ ಆರಂಭವಾಗುತ್ತಿದ್ದಂತೆ ಉದ್ರಿಕ್ತರ ಗುಂಪು ಅಧಿಕಾರಿಗಳ ಮೇಲೆ ದಾಳಿ ನಡೆಸಿ ದೂರದಿಂದಲೇ ಕಲ್ಲು ತೂರಾಟ ನಡೆಸಿತು. ಈ ವೇಳೆ, ಪೊಲೀಸರು ಅಲ್ಲದೆ ಹಲವಾರು ಆಡಳಿತ ಅಧಿಕಾರಿಗಳು ಹಾಗೂ ಪತ್ರಕರ್ತರು ಗಾಯಗೊಂಡರು. ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿತು. ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.
ಹಿಂಸಾಚಾರಪೀಡಿತ ಪ್ರದೇಶದಲ್ಲಿ ಗುಂಪು ಸೇರುವುದನ್ನು ನಿಷೇಧಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಹಜ ಸ್ಥಿತಿ ಕಾಪಾಡಲು ಗಲಭೆಕೋರರಿಗೆ ಕಂಡಲ್ಲಿ ಗುಂಡು ಹೊಡೆಯಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.
हल्द्वानी के वनभूलपूरा में भारी पत्थरबाजी करने वाले कैमरे में कैद पुलिस इनकी पहचान करे #Uttarakhand. . pic.twitter.com/0hCQS3j6Gi
— Pyara Uttarakhand (प्यारा उत्तराखण्ड) (@PyaraUKofficial) February 8, 2024
ನ್ಯಾಯಾಲಯದ ಆದೇಶದ ಅನುಸಾರ ಅಧಿಕಾರಿಗಳ ತಂಡವು ಅಕ್ರಮ ಕಟ್ಟಡವನ್ನು ಕೆಡವಲು ಹೋಗಿತ್ತು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು. ಆದರೆ, ಅಲ್ಲಿನ ಸಮಾಜ ವಿರೋಧಿಗಳು ಪೊಲೀಸರೊಂದಿಗೆ ಜಗಳವಾಡಿದರು ಎಂದು ಅವರು ಹೇಳಿದ್ದಾರೆ. ಕೂಡಲೇ ಪೊಲೀಸ್ ಮತ್ತು ಕೇಂದ್ರ ಪಡೆಗಳ ಹೆಚ್ಚುವರಿ ತುಕಡಿಗಳನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ನಾವು ಎಲ್ಲರಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇವೆ. ಕರ್ಫ್ಯೂ ಜಾರಿಯಲ್ಲಿದೆ. ದಂಗೆಕೋರರು ಮತ್ತು ಬೆಂಕಿ ಹಚ್ಚಿದ ಅತಿಕ್ರಮಣದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಹೇಳಿದ್ದಾರೆ.
ಮದರಸಾ ಮತ್ತು ನಮಾಜ್ ನಡೆಸಲಾಗುವ ಸ್ಥಳಗಳು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಪಾಲಿಕೆ ಆಯುಕ್ತ ಪಂಕಜ್ ಉಪಾಧ್ಯಾಯ ಹೇಳಿದ್ದಾರೆ. ಈ ಹಿಂದೆ ನಗರಸಭೆಯು ಸಮೀಪದ ಮೂರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಕ್ರಮ ಮದರಸಾ ಮತ್ತು ನಮಾಜ್ ಸ್ಥಳವನ್ನು ಸೀಲ್ ಮಾಡಿತ್ತು. ಈ ಕಟ್ಟಡಗಳನ್ನು ಇಂದು ನೆಲಸಮ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರ ಹಿಂಸಾಚಾರದಲ್ಲಿ ಮಯನ್ಮಾರ್ ಬಂಡುಕೋರರು ಶಾಮೀಲು!