Uttarakhand Violence: ಮದರಸ ನೆಲಸಮ ಮಾಡುವಾಗ ಭುಗಿಲೆದ್ದ ಹಿಂಸಾಚಾರ; ಕಂಡಲ್ಲಿ ಗುಂಡು ಹೊಡೆಯಲು ಆದೇಶ! - Vistara News

ದೇಶ

Uttarakhand Violence: ಮದರಸ ನೆಲಸಮ ಮಾಡುವಾಗ ಭುಗಿಲೆದ್ದ ಹಿಂಸಾಚಾರ; ಕಂಡಲ್ಲಿ ಗುಂಡು ಹೊಡೆಯಲು ಆದೇಶ!

Uttarakhand Violence: ಉತ್ತರಾಖಂಡದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮದರಸವನ್ನು ತೆರವುಗೊಳಿಸುವಾಗ ಹಿಂಸಾಚಾರ ಭುಗಿಲೆದ್ದು, 50ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ.

VISTARANEWS.COM


on

Madrasa Demolition, Shoot At Sight Orders After Uttarakhand Violence
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ (Uttarakhand Violence) ಗುರುವಾರ ಮದರಸ ನೆಲಸಮ ಮಾಡುವ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಕಾನೂನುಬಾಹಿರವಾಗಿ ನಿರ್ಮಿಸಲಾದ ಮದರಸವನ್ನು ತೆರವುಗೊಳಿಸಲು (Madrasa Demolition) ಅಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಮುಂದಾಗಿದ್ದರು. ಈ ವೇಳೆ, ಉದ್ರಿಕ್ತರ ಗುಂಪು ಅಧಿಕಾರಿಗಳು ಮತ್ತು ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗಾಯಗೊಂಡ ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಈ ಮಧ್ಯೆ, ಹಿಂಸಾಚಾರ ನಿಯಂತ್ರಣಕ್ಕೆ ಸರ್ಕಾರವು, ಗಲಭೆಕೋರರ ವಿರುದ್ಧ ಕಂಡಲ್ಲಿ ಗುಂಡು ಹೊಡೆಯುವ ಆದೇಶವನ್ನು ನೀಡಿದೆ(Shoot-At-Sight Order).

ಪೊಲೀಸರಲ್ಲದೆ, ಆಡಳಿತ ಮತ್ತು ನಾಗರಿಕ ಅಧಿಕಾರಿಗಳ ತಂಡವು ಪಕ್ಕದ ಮಸೀದಿಯನ್ನು ಹೊಂದಿರುವ ಮದರಸಾಕ್ಕೆ ಹೋಗಿತ್ತು. ಮೂಲಗಳ ಪ್ರಕಾರ ಜೆಸಿಬಿ ಯಂತ್ರ ಆರಂಭವಾಗುತ್ತಿದ್ದಂತೆ ಉದ್ರಿಕ್ತರ ಗುಂಪು ಅಧಿಕಾರಿಗಳ ಮೇಲೆ ದಾಳಿ ನಡೆಸಿ ದೂರದಿಂದಲೇ ಕಲ್ಲು ತೂರಾಟ ನಡೆಸಿತು. ಈ ವೇಳೆ, ಪೊಲೀಸರು ಅಲ್ಲದೆ ಹಲವಾರು ಆಡಳಿತ ಅಧಿಕಾರಿಗಳು ಹಾಗೂ ಪತ್ರಕರ್ತರು ಗಾಯಗೊಂಡರು. ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿತು. ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

ಹಿಂಸಾಚಾರಪೀಡಿತ ಪ್ರದೇಶದಲ್ಲಿ ಗುಂಪು ಸೇರುವುದನ್ನು ನಿಷೇಧಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಹಜ ಸ್ಥಿತಿ ಕಾಪಾಡಲು ಗಲಭೆಕೋರರಿಗೆ ಕಂಡಲ್ಲಿ ಗುಂಡು ಹೊಡೆಯಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ನ್ಯಾಯಾಲಯದ ಆದೇಶದ ಅನುಸಾರ ಅಧಿಕಾರಿಗಳ ತಂಡವು ಅಕ್ರಮ ಕಟ್ಟಡವನ್ನು ಕೆಡವಲು ಹೋಗಿತ್ತು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು. ಆದರೆ, ಅಲ್ಲಿನ ಸಮಾಜ ವಿರೋಧಿಗಳು ಪೊಲೀಸರೊಂದಿಗೆ ಜಗಳವಾಡಿದರು ಎಂದು ಅವರು ಹೇಳಿದ್ದಾರೆ. ಕೂಡಲೇ ಪೊಲೀಸ್ ಮತ್ತು ಕೇಂದ್ರ ಪಡೆಗಳ ಹೆಚ್ಚುವರಿ ತುಕಡಿಗಳನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ನಾವು ಎಲ್ಲರಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇವೆ. ಕರ್ಫ್ಯೂ ಜಾರಿಯಲ್ಲಿದೆ. ದಂಗೆಕೋರರು ಮತ್ತು ಬೆಂಕಿ ಹಚ್ಚಿದ ಅತಿಕ್ರಮಣದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಹೇಳಿದ್ದಾರೆ.

ಮದರಸಾ ಮತ್ತು ನಮಾಜ್ ನಡೆಸಲಾಗುವ ಸ್ಥಳಗಳು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಪಾಲಿಕೆ ಆಯುಕ್ತ ಪಂಕಜ್ ಉಪಾಧ್ಯಾಯ ಹೇಳಿದ್ದಾರೆ. ಈ ಹಿಂದೆ ನಗರಸಭೆಯು ಸಮೀಪದ ಮೂರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಕ್ರಮ ಮದರಸಾ ಮತ್ತು ನಮಾಜ್ ಸ್ಥಳವನ್ನು ಸೀಲ್ ಮಾಡಿತ್ತು. ಈ ಕಟ್ಟಡಗಳನ್ನು ಇಂದು ನೆಲಸಮ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರ ಹಿಂಸಾಚಾರದಲ್ಲಿ ಮಯನ್ಮಾರ್‌ ಬಂಡುಕೋರರು ಶಾಮೀಲು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Ayushman Bharat Diwas 2024: 50 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಅಯುಷ್ಮಾನ್ ಭಾರತ್

Ayushman Bharat Diwas 2024: ದೇಶಾದ್ಯಂತ ಇಂದು ಆಯುಷ್ಮಾನ್ ಭಾರತ್ ದಿನವನ್ನು ಆಚರಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ದಿವಸ್ ಅನ್ನು ಏಪ್ರಿಲ್ 30ರಂದು ಗುರುತಿಸಲಾಗಿದೆ. 2018ರ ಸೆಪ್ಟೆಂಬರ್ 23ರಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಾರಂಭದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ.

VISTARANEWS.COM


on

By

Ayushman Bharat Diwas 2024
Koo

ಬಡ ವರ್ಗದ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 2018ರ ಸೆಪ್ಟೆಂಬರ್ 23ರಂದು ಜಾರಿಗೊಳಿಸಲಾಗಿರುವ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಕುರಿತು ಜನರಲ್ಲಿ ಅರಿವು ಮೂಡಿಸಲು ಇಂದು ದೇಶಾದ್ಯಂತ ಆಯುಷ್ಮಾನ್ ಭಾರತ್ ದಿನವನ್ನು (Ayushman Bharat Diwas 2024) ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನರ ಅರೋಗ್ಯ ರಕ್ಷಣೆಯ ಕುರಿತು ಪ್ರಧಾನಿ (PM) ನರೇಂದ್ರ ಮೋದಿ (narendra modi) ಹೇಳಿರುವ ಸ್ಫೂರ್ತಿದಾಯಕ ಮಾತುಗಳು ಹೀಗಿವೆ.

ಆಯುಷ್ಮಾನ್ ಭಾರತ್ ದಿವಸ್ ಅನ್ನು ಏಪ್ರಿಲ್ 30ರಂದು ಗುರುತಿಸಲಾಗಿದೆ. 2018ರ ಸೆಪ್ಟೆಂಬರ್ 23ರಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಾರಂಭದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. AB-PMJAY ಎಂಬುದು ಫಲಾನುಭವಿಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ. ದ್ವಿತೀಯ ಮತ್ತು ತೃತೀಯ ಆಸ್ಪತ್ರೆಯ ಆರೈಕೆಗಾಗಿ 5 ಲಕ್ಷ ರೂ.ವರೆಗೆ ಉಚಿತ ವೆಚ್ಚವನ್ನು ಒದಗಿಸಲಾಗುತ್ತದೆ.

ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜಂಟಿಯಾಗಿ ಹಣವನ್ನು ನೀಡಲಾಗುತ್ತದೆ. 2021ರ ಜುಲೈ ವೇಳೆಗೆ AB-PMJAY ಅನ್ನು ಪಶ್ಚಿಮ ಬಂಗಾಳ, ದೆಹಲಿಯ NCT ಮತ್ತು ಒಡಿಶಾ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ: Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

ಮಾನದಂಡವೇನು?

ಅಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು 2011ರ ಸಾಮಾಜಿಕ- ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ (SECC) ಉಲ್ಲೇಖಿಸಲಾದ ಮಾನದಂಡಗಳ ಮೇಲೆ ಅರ್ಹರಾಗಿರುತ್ತಾರೆ.

ಮನೆಯಿಲ್ಲದ, ಭೂರಹಿತ ಕುಟುಂಬಗಳು, ಕೂಲಿ ಪಡೆಯುವ ಕಾರ್ಮಿಕರು, ಬುಡಕಟ್ಟು ಜನರು.. ಸೇರಿದಂತೆ ಸರ್ಕಾರ ನಿಗದಿಪಡಿಸುವ ಮಾನದಂಡದ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ನಿವಾಸಿಗಳಿಗೆ ಅರ್ಹತೆಯು ವಿಭಿನ್ನವಾಗಿದೆ.


50 ಕೋಟಿಗೂ ಹೆಚ್ಚು ಅರ್ಹರು

2011ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ (ಎಸ್‌ಇಸಿಸಿ) ಪಟ್ಟಿಯನ್ನು ಆಧರಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿಗೂ ಹೆಚ್ಚು ಜನರನ್ನು ಅರ್ಹರೆಂದು ಗುರುತಿಸಲಾಗಿದೆ. ಎಲ್ಲಾ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಕಾರ್ಡ್ ಹೊಂದಿರುವವರು ಸಹ ಈ ಯೋಜನೆಗೆ ಅರ್ಹರಾಗಿದ್ದಾರೆ. ಅವರ ಅರ್ಹತೆಯನ್ನು ಪರಿಶೀಲಿಸಲು ಒಬ್ಬರು AB-PMJAY ಸಹಾಯವಾಣಿಗೆ 14555 ಅಥವಾ 1800-111-565ಗೆ ಕರೆ ಮಾಡಬಹುದು.

ಆರೋಗ್ಯ ಕುರಿತು ಪ್ರಧಾನಿ ಮೋದಿ ಮಾತುಗಳು…

  • – ಉತ್ತಮ ಆರೋಗ್ಯವು ಮಾನವನ ಪ್ರಗತಿ ಮತ್ತು ಸಮೃದ್ಧಿಯ ಅಡಿಪಾಯವಾಗಿದೆ. ಸ್ವಚ್ಛ ಭಾರತ ಅಭಿಯಾನವು ಸ್ವಚ್ಛ ಬೀದಿಗಳ ಬಗ್ಗೆ ಮಾತ್ರವಲ್ಲ, ಎಲ್ಲರಿಗೂ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವುದಾಗಿದೆ.
  • – ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ನಾವು ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಇಂದು ನಮ್ಮ ಗಮನವು ಆರೋಗ್ಯದ ಮೇಲೆ ಮಾತ್ರವಲ್ಲ, ಕ್ಷೇಮದ ಮೇಲೆಯೂ ಇದೆ. ಆರೋಗ್ಯ ರಕ್ಷಣೆಯು ಪ್ರತಿ ಸರ್ಕಾರದ ಆದ್ಯತೆಯಾಗಿರಬೇಕು.

– ರಿಮೋಟ್ ಹೆಲ್ತ್‌ಕೇರ್ ಮತ್ತು ಟೆಲಿಮೆಡಿಸಿನ್ ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಆರೋಗ್ಯ ಪ್ರವೇಶ ವಿಭಜನೆಯನ್ನು ಕಡಿಮೆ ಮಾಡುತ್ತದೆ. ಆಯುಷ್ಮಾನ್ ಭಾರತ್ ನವ ಭಾರತದ ಕ್ರಾಂತಿಕಾರಿ ಹೆಜ್ಜೆಗಳಲ್ಲಿ ಒಂದಾಗಿದೆ. ಇದು ದೇಶದ ಜನಸಾಮಾನ್ಯರ ಮತ್ತು ಬಡವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ಭಾರತವನ್ನು ಪ್ರತಿನಿಧಿಸುವ 130 ಕೋಟಿ ಜನರ ಸಾಮೂಹಿಕ ಸಂಕಲ್ಪ ಮತ್ತು ಶಕ್ತಿಯ ಸಂಕೇತವಾಗಿದೆ.

  • – ಉತ್ತಮ ಆರೋಗ್ಯ ಮೂಲಸೌಕರ್ಯವು ಕೇವಲ ಸೌಲಭ್ಯವಲ್ಲ, ಇದು ಆರೋಗ್ಯ ಸೇವೆಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು ಉತ್ತಮ ಮಾರ್ಗವಾಗಿದೆ. ನಾವು ದೇಶದಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ರಚಿಸಬೇಕಾಗಿದೆ. ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳಲ್ಲಿ ಸ್ವಾವಲಂಬನೆ ಇಲ್ಲದೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ನಮ್ಮ ಉದ್ದೇಶಗಳನ್ನು ಸಾಧಿಸಲಾಗುವುದಿಲ್ಲ.
  • – ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು.
Continue Reading

ಪ್ರಮುಖ ಸುದ್ದಿ

Hassan pen drive case: “ಇದನ್ನು ಸಹಿಸಲು ಸಾಧ್ಯವಿಲ್ಲ…” ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಖಡಕ್‌ ಎಚ್ಚರಿಕೆ

Hassan pen drive case: ಇದುವರೆಗೆ ಕ್ರಮ ಕೈಗೊಳ್ಳದಿರುವ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕೂಡ ಗೃಹ ಸಚಿವರು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. “ಚುನಾವಣೆಯ ಸಂದರ್ಭದಲ್ಲಿಯೇ ಈ ವಿಡಿಯೋ ಯಾಕೆ ಹರಿದಾಡಬೇಕು? ಈ ಸಮಯಸಾಧಕತನ ಸಂಶಯ ಮೂಡಿಸುತ್ತಿದೆ” ಎಂದವರು ಹೇಳಿದ್ದಾರೆ.

VISTARANEWS.COM


on

amith shah
Koo

ಬೆಂಗಳೂರು: ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (JDS MP Prajwal Revanna) ಅವರ ಅಶ್ಲೀಲ ಟೇಪ್ ವಿವಾದಕ್ಕೆ (Hassan pen drive case) ಕೇಂದ್ರ ಗೃಹ ಸಚಿವ ಅಮಿತ್ ಶಾ (Home minister Amit Shah) ಅವರು ಮಂಗಳವಾರ ಪ್ರತಿಕ್ರಿಯಿಸಿದ್ದು, “ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಹಾಗೆಯೇ ಈ ಪ್ರಕರಣದಲ್ಲಿ ರಾಜಕೀಯ ಕೈವಾಡದ ಬಗೆಗೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

“ಇದನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿಯ ನಿಲುವು ಈ ವಿಚಾರದಲ್ಲಿ ಸ್ಪಷ್ಟವಾಗಿದೆ- ನಾವು ನಾರಿ ಶಕ್ತಿಯೊಂದಿಗೆ ನಿಲ್ಲುತ್ತೇವೆ” ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಇದುವರೆಗೆ ಕ್ರಮ ಕೈಗೊಳ್ಳದಿರುವ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕೂಡ ಗೃಹ ಸಚಿವರು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. “ಚುನಾವಣೆಯ ಸಂದರ್ಭದಲ್ಲಿಯೇ ಈ ವಿಡಿಯೋ ಯಾಕೆ ಹರಿದಾಡಬೇಕು? ಈ ಸಮಯಸಾಧಕತನ ಸಂಶಯ ಮೂಡಿಸುತ್ತಿದೆ” ಎಂದವರು ಹೇಳಿದ್ದಾರೆ.

ಹಾಸನ ಸಂಸದರು ಭಾಗಿಯಾಗಿದ್ದಾರೆ ಎಂದು ಹೇಳಲಾದ ಸ್ಪಷ್ಟ ವೀಡಿಯೊಗಳು ಸೋರಿಕೆಯಾದ ಸಮಯದ ಬಗ್ಗೆಯೂ ಷಾ ಪ್ರಶ್ನೆಗಳನ್ನು ಎತ್ತಿದ್ದಾರೆ. ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಕೆಲವು ಸರ್ಕಾರಿ ನೌಕರರು ಸೇರಿದಂತೆ ಹಲವು ಮಹಿಳೆಯರೊಂದಿಗೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎನ್ನಲಾದ ವೀಡಿಯೋ ತುಣುಕುಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು. ಅದನ್ನನುಸರಿಸಿ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ತನಿಖಾ ತಂಡ ರಚಿಸಿದ್ದಾರೆ.

ಏಪ್ರಿಲ್ 26ರಂದು ಹಾಸನ ಕ್ಷೇತ್ರದಲ್ಲಿ ಮತದಾನ ನಡೆದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಪ್ರಜ್ವಲ್ ರೇವಣ್ಣ ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ. ರಾಜ್ಯದಲ್ಲಿ ಜೆಡಿಎಸ್‌, ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. 33 ವರ್ಷದ ಪ್ರಜ್ವಲ್ ಅವರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧವೂ ದೂರು ದಾಖಲಾಗಿದೆ.

ಸಿದ್ದರಾಮಯ್ಯ ಅವರು ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡಿ ಆದೇಶಿಸಿದ್ದಾರೆ. ಲೈಂಗಿಕ ಅಪರಾಧ ಎಸಗಿದವರನ್ನು, ಅದನ್ನು ಚಿತ್ರೀಕರಿಸಿ ಸಾರ್ವಜನಿಕಗೊಳಿಸಿದವರನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಎಸ್‌ಐಟಿಯ ಸರ್ಕಾರಿ ಆದೇಶ ತಿಳಿಸಿದೆ. ಈಗಾಗಲೇ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಎ) (ಲೈಂಗಿಕ ಕಿರುಕುಳ), 354 (ಡಿ) (ಹಿಂಬಾಲಿಸುವಿಕೆ) ಮತ್ತು 506 (ಅಪರಾಧ ಬೆದರಿಕೆ) ಮತ್ತು 509 (ಪದ, ಸನ್ನೆ ಅಥವಾ ಚಿತ್ರದ ಮೂಲಕ ಮಹಿಳೆಯ ಅವಮಾ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರ ಅಡುಗೆಯವರು ನೀಡಿದ ದೂರಿನ ಮೇರೆಗೆ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆಯು ರೇವಣ್ಣ ಅವರ ಪತ್ನಿ ಭವಾನಿ ಅವರ ಸಂಬಂಧಿ ಎಂದು ದೂರುದಾರರು ತಿಳಿಸಿದ್ದಾರೆ. ತಾನು ಕೆಲಸ ಮಾಡಲು ಪ್ರಾರಂಭಿಸಿದ ನಾಲ್ಕು ತಿಂಗಳ ನಂತರ ರೇವಣ್ಣ ತನಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದರು. ಅವರ ಮಗ ಪ್ರಜ್ವಲ್ ತಮ್ಮ ಮಗಳಿಗೆ ವೀಡಿಯೊ ಕರೆಗಳನ್ನು ಮಾಡುತ್ತಿದ್ದರು ಮತ್ತು ಅವಳೊಂದಿಗೆ ಅಸಭ್ಯವಾಗಿ ಮಾತನಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Hassan Pen Drive Case: ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

Continue Reading

ದೇಶ

Physical abuse: JNU ಉಪನ್ಯಾಸಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಭುಗಿಲೆದ್ದ ಆಕ್ರೋಶ

Physical abuse: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದು, ಉಪನ್ಯಾಸಕನ ಅಮಾನತು ಮಾಡುವಂತೆ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

VISTARANEWS.COM


on

JNU Campus
Koo

ನವದೆಹಲಿ: ಗುಂಪು ಘರ್ಷಣೆ, ಹೊಡೆದಾಟ, ದೇಶವಿರೋಧಿ ಘೋಷಣೆ, ಪ್ರತಿಭಟನೆ ಹೀಗೆ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ದಿಲ್ಲಿಯ(Delhi) ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯದಲ್ಲಿ (JNU) ಉಪನ್ಯಾಸಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ(physical abuse) ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದು, ಉಪನ್ಯಾಸಕನ ಅಮಾನತು ಮಾಡುವಂತೆ ವಿದ್ಯಾರ್ಥಿ ಸಂಘ(Students Union) ಒತ್ತಾಯಿಸಿದೆ. ಆರೋಪಿ ಉಪನ್ಯಾಸಕ ಸಂತ್ರಸ್ತೆಗೆ ಪೋನ್‌ ಕರೆ, ಮೆಸೇಜ್‌ ಮಾಡುವುದು, ಪೋಲಿ ಜೋಕ್‌ಗಳನ್ನು ಕಳುಹಿಸುವುದು, ಏಕಾಂತದಲ್ಲಿ ಭೇಟಿಯಾಗುವಂತೆ ಒತ್ತಾಯಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೇ ಅದಕ್ಕೆ ನಿರಾಕರಿಸಿದರೆ ಫೈಲ್‌ ಮಾಡೋದಾಗಿಯೂ ಬೆದರಿಕೆಯನ್ನೊಡ್ಡಿದ್ದ. ಕೊನೆಗೆ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಆಕೆ ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸಿದ್ದಾಳೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ನವದೆಹಲಿ: ಗುಂಪು ಘರ್ಷಣೆ, ಹೊಡೆದಾಟ, ದೇಶವಿರೋಧಿ ಘೋಷಣೆ, ಪ್ರತಿಭಟನೆ ಹೀಗೆ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯದಲ್ಲಿ (JNU) ಉಪನ್ಯಾಸಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ(physical abuse) ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದು, ಉಪನ್ಯಾಸಕನ ಅಮಾನತು ಮಾಡುವಂತೆ ವಿದ್ಯಾರ್ಥಿ ಸಂಘ(Students Union) ಒತ್ತಾಯಿಸಿದೆ. ಆರೋಪಿ ಉಪನ್ಯಾಸಕ ಸಂತ್ರಸ್ತೆಗೆ ಪೋನ್‌ ಕರೆ, ಮೆಸೇಜ್‌ ಮಾಡುವುದು, ಪೋಲಿ ಜೋಕ್‌ಗಳನ್ನು ಕಳುಹಿಸುವುದು, ಏಕಾಂತದಲ್ಲಿ ಭೇಟಿಯಾಗುವಂತೆ ಒತ್ತಾಯಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೇ ಅದಕ್ಕೆ ನಿರಾಕರಿಸಿದರೆ ಫೈಲ್‌ ಮಾಡೋದಾಗಿಯೂ ಬೆದರಿಕೆಯನ್ನೊಡ್ಡಿದ್ದ. ಕೊನೆಗೆ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಆಕೆ ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸಿದ್ದಾಳೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಏ.10ರಂದು ಸಂತ್ರಸ್ತ ವಿದ್ಯಾರ್ಥಿನಿ ವಿವಿಯ ಆಂತರಿಕ ದೂರುಗಳ ಸಮಿತಿ(ICC)ಗೆ ದೂರು ನೀಡಿದ್ದಳು. ಇದಾದ ಬಳಿಕ ಆಕೆಯ ಕೆಲವು ಸಹಸಪಾಠಿಗಳೂ ಕೂಡ ಉಪನ್ಯಾಸಕನಿಂದ ತಮಗಾಗುತ್ತಿರುವ ಮಾನಸಿಕ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರು. ಎರಡೂ ದೂರುಗಳನ್ನು ಗಂಭೀರಾಗಿ ಪರಿಗಣಿಸದೇ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಿದ್ಯಾರ್ಥಿಗಳ ಸಂಘಟನೆ ದೂರಿದೆ. ಘಟನೆ ಬಗ್ಗೆ ICC ತಕ್ಷಣ ಉಪನ್ಯಾಸಕನ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಆತನನ್ನು ಅಮಾನತಗೊಳಿಸಬೇಕೆಂದು ಒತ್ತಾಯಿಸಿದೆ.

ಇನ್ನು ವಿದ್ಯಾರ್ಥಿ ಸಂಘದ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲು ಆ ಉಪನ್ಯಾಸಕ ಮತ್ತು ICC ನಿರಾಕರಿಸಿದೆ. ICC ಪ್ರಭಾವಿಗಳ ರಕ್ಷಣಗೆ ಪಣತೊಟ್ಟು ನಿಂತಿದೆ. ಹೀಗಾಗಿ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ. ಕೆಲವು ದಿನಗಳ ಹಿಂದೆ ವಿದ್ಯಾರ್ಥಿ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಾಗಲೂ ಇದೇ ರೀತಿಯ ನಿರ್ಲಕ್ಷ್ಯ ವ್ಯಕ್ತವಾಗಿತ್ತು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ತಿಂಗಳು ನಾಲ್ವರು ವಿದ್ಯಾರ್ಥಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ದೂರು ನೀಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸುಮಾರು 10ದಿನಗಳ ಕಾಲ ವಿವಿಯ ಎದುರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು.

ಜೆಎನ್‌ಯುವಿನಲ್ಲಿ ಕಳೆದ ತಿಂಗಳು ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಕ್ಷಗಳು ಜಯಭೇರಿ ಬಾರಿಸಿದ್ದವು. ಮತ ಎಣಿಕೆಯ ಆರಂಭಿಕ ಗಂಟೆಗಳಲ್ಲಿ ಎಬಿವಿಪಿ (ABVP) ಮುಂದಿದ್ದು, ನಂತರ ಅದನ್ನು ಹಿಂದಿಕ್ಕಿದ ಎಡಪಕ್ಷಗಳು ಮತ್ತೊಮ್ಮೆ ವಿಶ್ವವಿದ್ಯಾಲಯದಲ್ಲಿ ತಮ್ಮ ಪ್ರಾಬಲ್ಯವನ್ನು ತೋರಿಸಿದವು. ವಿದ್ಯಾರ್ಥಿ ಸಂಘದ ಎಲ್ಲಾ ನಾಲ್ಕು ಹುದ್ದೆಗಳನ್ನು ಎಡಪಕ್ಷಗಳು ಬಾಚಿಕೊಂಡಿವೆ. ಆ ಮೂಲಕ ಆರ್‌ಎಸ್‌ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಭರವಸೆಯನ್ನು ಹುಸಿಗೊಳಿಸಿವೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ ಯಾವಾಗಲೂ ವಿವಾದದಿಂದ ಕೂಡಿದ್ದಾಗಿದ್ದು, ಅಂತಾರಾಷ್ಟ್ರೀಯ ಗಮನ ಸೆಳೆಯುತ್ತದೆ.

ಇದನ್ನೂ ಓದಿ:Pakistan: “ಭಾರತ ಸೂಪರ್‌ ಪವರ್‌ಪುಲ್‌ ರಾಷ್ಟ್ರ..ಪಾಕಿಸ್ತಾನ ಮಾತ್ರ ಭಿಕ್ಷೆ ಬೇಡ್ತಿದೆ”; ಹೀಗಂದಿದ್ದು ಯಾರು ಗೊತ್ತಾ?

4 ವರ್ಷಗಳ ಕೋವಿಡ್ ವಿರಾಮದ ನಂತರ ನಡೆದ ಚುನಾವಣೆಯಲ್ಲಿ, ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (ಡಿಎಸ್‌ಎಫ್), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್‌ಎಫ್) ಒಳಗೊಂಡ ಯುನೈಟೆಡ್ ಲೆಫ್ಟ್ ಮೈತ್ರಿ ಅಭ್ಯರ್ಥಿಗಳು, ಆರ್‌ಎಸ್‌ಎಸ್-ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಸ್ಪರ್ಧಿಸಿದ್ದರು. ಎಬಿವಿಪಿಯ ಅಧ್ಯಕ್ಷೀಯ ಅಭ್ಯರ್ಥಿ ಉಮೇಶ್ ಚಂದ್ರ 2,118 ಮತಗಳನ್ನು ಪಡೆದರೆ, ಎಡಪಕ್ಷ ಅಭ್ಯರ್ಥಿ ಧನಂಜಯ್ 3,100 ಮತಗಳನ್ನು ಪಡೆದಿದ್ದರು.

Continue Reading

ದೇಶ

Manipur Violence:ಮಹಿಳೆಯರ ವಿವಸ್ತ್ರ ಕೇಸ್‌; ಪೊಲೀಸರೆದುರೇ ನಡೆದಿತ್ತು ನೀಚ ಕೃತ್ಯ

Manipur Violence: ಇಬ್ಬರು ಮಹಿಳೆಯರ ನಗ್ನ ಮೆರವಣಿಗೆಗೂ ಮುನ್ನ ಆ ಮಹಿಳೆಯರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್‌ ಜಿಪ್ಸಿಯಲ್ಲಿ ಅಡಗಿಕುಳಿತು ಅಲ್ಲಿಂದ ಪಾರಾಗಲು ಯತ್ನಿಸಿದ್ದರು ಎಂಬ ವಿಚಾರ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.

VISTARANEWS.COM


on

Manipur Violence
Koo

ನವದೆಹಲಿ:ಮಣಿಪುರದಲ್ಲಿ ಕಳೆದ ವರ್ಷ ನಡೆದ ಜನಾಂಗೀಯ ಹಿಂಸಾಚಾರ(Manipur Violence)ಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌(CBI Chargesheet)ನಲ್ಲಿ ಭಯಾನಕ ವಿಚಾರವೊಂದು ಬೆಳಕಿಗೆ ಬಂದಿದೆ. ಮಣಿಪುರದ ಚೂರಚಂದಪುರ(Churchandpur) ಜಿಲ್ಲೆಯಲ್ಲಿ ನಡೆದ ಕುಕ್ಕಿ ಸಮುದಾಯದ ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣಕೆ ಸಂಬಂಧಿಸಿದಂತೆ ಮಹತ್ವದ ವಿಚಾರವೊಂದನ್ನು ಸಿಬಿಐ(CBI) ತಾನು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಇಬ್ಬರು ಮಹಿಳೆಯರ ನಗ್ನ ಮೆರವಣಿಗೆಗೂ ಮುನ್ನ ಆ ಮಹಿಳೆಯರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್‌ ಜಿಪ್ಸಿಯಲ್ಲಿ ಅಡಗಿಕುಳಿತು ಅಲ್ಲಿಂದ ಪಾರಾಗಲು ಯತ್ನಿಸಿದ್ದರು. ಆದರೆ ಪೊಲೀಸ್‌ ಜೀಪ್‌ ಡ್ರೈವರ್‌ ಹಾಗೂ ಮತ್ತೋರ್ವ ಪೊಲೀಸ್‌ ಸಿಬ್ಬಂದಿ ತನ್ನ ಬಳಿ ಗಾಡಿಯ ಕೀ ಇಲ್ಲ ಎಂದು ನೆಪ ಹೇಳಿ ಆ ಮಹಿಳೆಯರನ್ನು ದುಷ್ಕರ್ಮಿಗಳ ತಂಡಕ್ಕೆ ಒಪ್ಪಿಸಿದ್ದರು ಎಂಬ ವಿಚಾರ ಬಯಲಾಗಿದೆ.

ಗಲಭೆ ವೇಳೆ ಪೊಲೀಸ್‌ ವಾಹನದಲ್ಲಿ ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ವರು ರಕ್ಷಣೆಗಾಗಿ ಅಡಗಿ ಕುಳಿತಿದ್ದರು. ಆದರೆ ಅವರನ್ನು ಕೆಳಗಿಳಿಸಿದ್ದ ಪೊಲೀಸರು ಉದ್ರಿಕ್ತ ಜನರ ಗುಂಪಿಗೆ ಒಪ್ಪಿಸಿ ಅಲ್ಲಿಂದ ತೆರಳಿದ್ದರು. ಈ ನಾಲ್ವರನ್ನು ಜೀಪಿನಿಂದ ಹೊರಗೆಳೆದು ಅವರನ್ನು ಚೆನ್ನಾಗಿ ಥಳಿಸಿದ್ದ ಜನ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದರು ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ. ಈ ಘಟನೆ ದೇಶ-ವಿದೇಶಗಳಲ್ಲಿ ಬಹುದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇನ್ನು ಈ ಬಗ್ಗೆ ಮಣಿಪುರ ಡಿಜಿಪಿ ರಾಜೀವ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, ಆ ಪೊಲೀಸ್‌ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗಿದೆ. ಆತನ ವಿರುದ್ಧ ಕಾನೂನಾತ್ಮಕ ಕ್ರಮದ ಬಗ್ಗೆ ಸಿಬಿಐ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಜರುಗಿಸಲಾಗುತ್ತದೆ ಎಂದು ತಿಳಿಸಿದರು. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಸಂಘಟನೆಗಳು ಮೆರವಣಿಗೆ ಆಯೋಜಿಸಿದ ಬಳಿಕ ಮೇ 3ರಂದು ಹಿಂಸಾಚಾರ ಭುಗಿಲೆದ್ದಿತ್ತು. ಆ ಸಂದರ್ಭದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಇದರ ವಿಡಿಯೋ ವೈರಲ್‌ ಆಗಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿತ್ತು. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 180ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದರು.

ಇದನ್ನೂ ಓದಿ:Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

ಗಲಭೆ ಶುರುವಾಗುತ್ತಿದ್ದಂತೆ ಸಂತ್ರಸ್ತ ಕುಟುಂಬ ಪ್ರಾಣ ರಕ್ಷಣೆಗೆ ಅಲ್ಲಿ ಇಲ್ಲಿ ಓಡಲು ಶುರು ಮಾಡಿದ್ದರು. ಕೆಲವರು ಕಾಡಿಗೆ ಓಡಿ ಅಡಗಿ ಕೂರಲು ಯತ್ನಿಸಿದರೆ ಇನ್ನುಳಿದ ನಾಲ್ವರು ಪೊಲೀಸ್‌ ವಾಹನದಲ್ಲಿ ಅಡಗಿ ಕುಳಿತಿದ್ದರು. ಪೊಲೀಸ್‌ ವಾಹನದಲ್ಲಿ ಇಬ್ಬರು ಸಮವಸ್ತ್ರ ಧರಿಸದೇ ಇದ್ದ ಪೊಲೀಸರು ಕುಳಿತಿದ್ದರು. ರಕ್ಷಿಸುವಂತೆ ಅವರ ಬಳಿ ಎಷ್ಟೇ ಬೇಡಿಕೊಂಡರೂ ವಾಹನದ ಕೀ ಇಲ್ಲ ಎಂದು ನೆಪ ಹೇಳಿ ಅವರನ್ನು ಜನರಿಗೆ ಒಪ್ಪಿಸಿದ್ದರು. ಚುರಾಚಂದ್‌ಪುರದಲ್ಲಿ ನೀವು ನಮ್ಮನ್ನು (ಮೇಟಿಯ ಜನರು) ಹೇಗೆ ನಡೆಸಿಕೊಂಡಿದ್ದೀರಿ, ನಾವು ನಿಮಗೂ ಅದೇ ರೀತಿ ಮಾಡುತ್ತೇವೆ ಎಂದು ಅವರನ್ನು ಚೆನ್ನಾಗಿ ಥಳಿಸಿ, ಬಳಿಕ ಈ ನೀಚ ಕೃತ್ಯ ಎಸಗಿದ್ದಾರೆ ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಅದನ್ನು ಗಮನಿಸಿದ ಜನರ ಗುಂಪು ಅವರ ಬಳಿ ಓಡಿಬಂದಿತ್ತು. ತಕ್ಷಣ ಪೊಲೀಸ್‌


Continue Reading
Advertisement
Ayushman Bharat Diwas 2024
ಆರೋಗ್ಯ7 mins ago

Ayushman Bharat Diwas 2024: 50 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಅಯುಷ್ಮಾನ್ ಭಾರತ್

Hassan Pen Drive Case Revanna and Siddaramaiah pact in Prajwal case Says Pralhad Joshi
ಕ್ರೈಂ31 mins ago

Hassan Pen Drive Case: ಪ್ರಜ್ವಲ್ ಪ್ರಕರಣದಲ್ಲಿ ರೇವಣ್ಣ-ಸಿದ್ದರಾಮಯ್ಯ ಒಪ್ಪಂದ; ಪ್ರಲ್ಹಾದ್ ಜೋಶಿ ಹೇಳಿದ್ದೇನು?

amith shah
ಪ್ರಮುಖ ಸುದ್ದಿ43 mins ago

Hassan pen drive case: “ಇದನ್ನು ಸಹಿಸಲು ಸಾಧ್ಯವಿಲ್ಲ…” ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಖಡಕ್‌ ಎಚ್ಚರಿಕೆ

JNU Campus
ದೇಶ1 hour ago

Physical abuse: JNU ಉಪನ್ಯಾಸಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಭುಗಿಲೆದ್ದ ಆಕ್ರೋಶ

LSG vs MI
ಕ್ರೀಡೆ1 hour ago

LSG vs MI: ಫಿಟ್​ ಆದ ಶರವೇಗದ ಎಸೆತಗಾರ ಮಾಯಾಂಕ್‌ ಯಾದವ್‌; ಮುಂಬೈ ವಿರುದ್ಧ ಕಣಕ್ಕೆ

gold rate today 34
ಪ್ರಮುಖ ಸುದ್ದಿ1 hour ago

Gold Rate Today: ಯಥಾಸ್ಥಿತಿ ಕಾಪಾಡಿಕೊಂಡ ಚಿನ್ನ- ಬೆಳ್ಳಿಯ ಬೆಲೆ; 22, 24 ಕ್ಯಾರಟ್‌ ದರಗಳು ಇಲ್ಲಿವೆ

Paris Olympics
ಕ್ರೀಡೆ2 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 7 ಶಟ್ಲರ್​ಗಳು; ಕನ್ನಡತಿ ಅಶ್ವಿನಿ ಪೊನ್ನಪ್ಪಗೂ ಅವಕಾಶ

ವಿದೇಶ2 hours ago

Pakistan: ಭಾರತ ಸೂಪರ್‌ ಪವರ್‌ ಆಗುತ್ತಿದೆ, ಪಾಕಿಸ್ತಾನ ಮಾತ್ರ ಭಿಕ್ಷೆ ಬೇಡ್ತಿದೆ; ಪಾಕ್ ಸಂಸತ್ ನಲ್ಲೇ ರೋದನ!

IPL 2024
ಕ್ರೀಡೆ2 hours ago

IPL 2024: ಸೌರವ್ ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್​

Hassan Pen Drive Case
ಪ್ರಮುಖ ಸುದ್ದಿ2 hours ago

Hassan Pen Drive Case: ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ7 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202423 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌