Site icon Vistara News

Aishwarya Rai : ಐಶ್ವರ್ಯಾ ರೈಯಂತ ಕಣ್ಣು ಬೇಕೇ? ಮೀನು ತಿನ್ನಿ; ಮಹಾರಾಷ್ಟ್ರದ ಸಚಿವನ ವಿವಾದಾತ್ಮಕ ಹೇಳಿಕೆ

Vijaykumar Gavit

ಮುಂಬಯಿ: ರಾಜಕಾರಣಿಗಳು ಕೆಲವೊಂದು ಬಾರಿ ಅಭಿಮಾನಿಗಳನ್ನು ರಂಜಿಸಲು ಹೋಗಿ ಪೇಚಿಗೆ ಸಿಲುಕುತ್ತಾರೆ. ಅಲ್ಲಸಲ್ಲದ ಪೆದ್ದು ಉದಾಹರಣೆಗಳನ್ನು ನೀಡುವ ಮೂಲಕ ವಿವಾದಕ್ಕೆ ಕಾರಣವಾಗುತ್ತಾರೆ. ಅಂಥದ್ದೇ ಒಂದು ಪರಿಸ್ಥಿತಿಗೆ ಸಿಲುಕಿದ್ದಾರೆ ಮಹಾರಾಷ್ಟ್ರ ಬುಡಕಟ್ಟು ಅಭಿವೃದ್ಧಿ ಸಚಿವ ವಿಜಯಕುಮಾರ್ ಗವಿತ್. ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ನಿಯಮಿತವಾಗಿ ಮೀನು ತಿನ್ನುತ್ತಿದ್ದರಿಂದ ಅವರಿಗೆ ಸುಂದರವಾದ ಕಣ್ಣುಗಳಿವೆ ಎಂದು ಹೇಳಿಕೆ ನೀಡುವ ಮೂಲಕ ಟೀಕೆಗೆ ಆಹಾರವಾಗಿದ್ದಾರೆ.

ಉತ್ತರ ಮಹಾರಾಷ್ಟ್ರದ ಪ್ರಭಾವಿ ಬುಡಕಟ್ಟು ನಾಯಕ ಎಂದು ಪರಿಗಣಿಸಲ್ಪಟ್ಟಿರುವ ವಿಜಯಕುಮಾರ್ ಅವರು ನಂದೂರ್​ಬಾನಾದ ಬಿಜೆಪಿ ಶಾಸಕ. ಧುಲೆ ಜಿಲ್ಲೆಯಲ್ಲಿ ಮೀನುಗಾರರ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಾ , ಮೀನು ತಿನ್ನುವುದರ ಪ್ರಾಮುಖ್ಯತೆ ಮತ್ತು ಪ್ರಯೋಜನಗಳನ್ನು ವಿವರಿಸುವಾಗ ಮಾಜಿ ವಿಶ್ವ ಸುಂದರಿಯ ಬಗ್ಗೆ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Prakash Raj : ಟೀಕೆಗಳ ಪ್ರಹಾರದ ಬಳಿಕ ಚಂದ್ರಯಾನ ಕುರಿತ ವ್ಯಂಗ್ಯಕ್ಕೆ ಸ್ಟಷ್ಟನೆ ಕೊಟ್ಟ ಪ್ರಕಾಶ್​ ರೈ

ನೀವು ಐಶ್ವರ್ಯಾ ರೈ ಅವರ ಕಣ್ಣುಗಳನ್ನು ನೋಡಿರಬಹುದು. ಅವರು ಎಷ್ಟು ಸುಂದರವಾಗಿದ್ದಾರೆ. ಅವರು ಕರ್ನಾಟಕದ ಮಂಗಳೂರಿನ ಕರಾವಳಿ ಪ್ರದೇಶದಲ್ಲಿ ಬೆಳೆದರು. ಅವರು ನಿಯಮಿತವಾಗಿ ಮೀನು ತಿನ್ನುತ್ತಿದ್ದರು. ಮತ್ತು ಅದಕ್ಕಾಗಿಯೇ ಅವರು ತುಂಬಾ ಸುಂದರವಾದಕಣ್ಣುಗಳನ್ನು ಹೊಂದಿದ್ದಾರೆ ” ಎಂದು ಗವಿತ್ ಹೇಳಿಕೆ ನೀಡಿದ್ದಾರೆ. ಅಂದ ಹಾಗೆ ಗವಿತ್ ಅವರ ಪುತ್ರಿ ಹೀನಾ ಅವರು ನಂದೂರ್ಬಾರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ.

ಯುವಕರು ಮೀನು ತಿನ್ನಲು ಪ್ರಾರಂಭಿಸಿದರೆ, ಅವರು ಸಹ ಚೆನ್ನಾಗಿ ಕಾಣುತ್ತಾರೆ ಅದೇ ರೀತಿ ಹುಡುಗಿಯರ ಹೃದಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಸಚಿವರು ಸಭೆಗೆ ಸಲಹೆ ಹೇಳಿದ್ದರು. ಮೀನಿನಲ್ಲಿ ಕೆಲವು ಎಣ್ಣೆಗಳಿವೆ, ಇದು ನಿಮ್ಮ ಚರ್ಮವನ್ನು ನಯವಾಗಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸ್ವಪಕ್ಷದಿಂದಲೇ ಟೀಕೆ

ವಿಜಯ್​ಕುಮಾರ್​ ಅವರ ಹೇಳಿಕೆಗೆ ಪಕ್ಷದಿಂದಲೇ ಟೀಕೆಗೆ ಒಳಗಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಿಜೆಪಿ ಶಾಸಕ ನಿತೇಶ್ ರಾಣೆ ಮಾತನಾಡಿ ನಾನು ಪ್ರತಿದಿನ ಮೀನು ತಿನ್ನುತ್ತೇನೆ. ನನ್ನ ಕಣ್ಣುಗಳು ಚೆನ್ನಾಗಿ ಆಗಬೇಕಿತ್ತು (ಐಶ್ವರ್ಯಾ ರೈ ಅವರಂತೆ). ಈ ಬಗ್ಗೆ ಏನಾದರೂ ಸಂಶೋಧನೆ ಇದೆಯೇ ಎಂದು ನಾನು ಗವಿತ್ ಸಾಹೇಬರನ್ನು ಕೇಳುತ್ತೇನೆ ಎಂದು ಪ್ರಶ್ನಿಸಿದ್ದರು.

ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡುವ ಬದಲು ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಶಾಸಕ ಅಮೋಲ್ ಮಿತ್ಕರಿ ಹೇಳಿದ್ದಾರೆ.

Exit mobile version