Site icon Vistara News

ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವತ್‌ !

Sanjay Raut

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು (Maharashtra politics) ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಲೇ ಇದೆ. ಶಿವಸೇನೆಯ ನಾಯಕ ಏಕನಾಥ ಶಿಂಧೆ, 30ಕ್ಕೂ ಹೆಚ್ಚು ಶಾಸಕರೊಟ್ಟಿಗೆ ಬಂಡಾಯವೆದ್ದು ರೆಸಾರ್ಟ್‌ ಸೇರಿಕೊಂಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆಯ ಮಧ್ಯೆ, ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯ ಸುಳಿವನ್ನು ಶಿವಸೇನೆ ನಾಯಕ ಸಂಜಯ್‌ ರಾವತ್‌ ನೀಡಿದ್ದಾರೆ. ಟ್ವೀಟ್‌ ಮಾಡಿರುವ ಅವರು, ʼಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ರಾಜ್ಯದ ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿವೆʼ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ 11.37ರ ಹೊತ್ತಿಗೆ ಮಾಡಿರುವ ಈ ಟ್ವೀಟ್‌ ಮಹಾರಾಷ್ಟ್ರ ಸರ್ಕಾರದ ಭವಿಷ್ಯ ಹೇಳುತ್ತಿದೆಯಾ ಎಂಬ ಕುತೂಹಲ ಎದ್ದಿದೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆ ಉಂಟಾಗಿದೆ. ಏಕನಾಥ್‌ ಶಿಂಧೆ ತಮ್ಮ ಬೆಂಬಲಿಗರೊಂದಿಗೆ ರೆಸಾರ್ಟ್‌ ಸೇರಿಕೊಂಡ ಬಳಿಕ, ಅವರೊಂದಿಗೆ ಮಾತನಾಡಲು ಉದ್ಧವ್‌ ಠಾಕ್ರೆ, ಶಿವಸೇನೆಯ ಇಬ್ಬರು ಪ್ರಮುಖ ನಾಯಕರನ್ನು ಕಳಿಸಿದ್ದರು. ಅವರಲ್ಲಿ ಒಬ್ಬರು ಮಿಲಿಂದ್‌ ನರ್ವೇಕರ್‌ ಮತ್ತು ಇನ್ನೊಬ್ಬರು ರವೀಂದ್ರ ಪಾಠಕ್‌. ಈ ಇಬ್ಬರ ಸಂಧಾನ ಫಲಪ್ರದವಾಗಲಿಲ್ಲ ಎನ್ನಲಾಗಿದೆ. ʼಉದ್ಧವ್‌ ಠಾಕ್ರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ, ನಾವೆಲ್ಲ ಬಂಡಾಯ ಎದ್ದಿರುವವರು ವಾಪಸ್‌ ಬರುತ್ತೇವೆʼ ಎಂದು ಏಕನಾಥ್‌ ಶಿಂಧೆ ಹೇಳಿದ್ದಾರೆ. ಆದರೆ ಉದ್ಧವ್‌ ಠಾಕ್ರೆ ಮತ್ತೆ ಬಿಜೆಪಿಯೊಂದಿಗೆ ಮೈತ್ರಿಗೆ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಈ ಬಿಕ್ಕಟ್ಟು ಸರ್ಕಾತ ಪತನದೊಂದಿಗೇ ಕೊನೆಗೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಇಷ್ಟೆಲ್ಲ ಭಿನ್ನಾಭಿಪ್ರಾಯಗಳ ಮಧ್ಯೆ ಇಂದು ಮಹಾರಾಷ್ಟ್ರ ಸಚಿವ ಸಂಪುಟ ಸಭೆ ಕೂಡ ನಡೆಯಲಿದ್ದು, ಅಂತಿಮ ನಿರ್ಧಾರ ಹೊರಬೀಳಲಿದೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯದಲ್ಲಿ ಮುಂದೇನಾಗಬಹುದು? ಸದನದಲ್ಲಿ ಬಲಾಬಲ ಏನು?

Exit mobile version