Site icon Vistara News

ಮಹಾ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ: ನಾಳೆ 14+14 ಸಚಿವರ ಸೇರ್ಪಡೆ ಸಾಧ್ಯತೆ

shindhe Phadnavis

ಮುಂಬಯಿ: ೪೦ ದಿನಗಳ ಹಿಂದೆ ಅಸ್ತಿತ್ವಕ್ಕೆ ಬಂದ ಮಹಾರಾಷ್ಟ್ರದ ಏಕನಾಥ ಶಿಂಧೆ ಸಂಪುಟಕ್ಕೆ ಕೊನೆಗೂ ವಿಸ್ತರಣೆ ಮುಹೂರ್ತ ಕೂಡಿಬಂದಿದೆ. ಜೂನ್‌ ೩೦ರಂದು ಶಿವಸೇನೆಯ ಏಕನಾಥ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ಬಿಜೆಪಿ-ಶಿವಸೇನೆ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಇದುವರೆಗೂ ದ್ವಿಸದಸ್ಯ ಸಂಪುಟ ವಿಸ್ತರಣೆ ಕಂಡಿರಲಿಲ್ಲ.

ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಪ್ರಕಟಿಸಲಾಗಿದೆ. ಶಿವಸೇನೆಯ ಹದಿನಾಲ್ಕು ಮತ್ತು ಬಿಜೆಪಿಯ ಹದಿನಾಲ್ಕು ಮಂದಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯ ಸಚಿವ ಸಂಪುಟಕ್ಕೆ ೪೨ ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಮೊದಲ ಹಂತದಲ್ಲಿ ಕೇವಲ ೧೪ ಮಂದಿಯನ್ನು ಸೇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಯಾರು ಯಾರು ಸೇರ್ಪಡೆ?
ಬಿಜೆಪಿ ಪಾಳಯದಿಂದ ಸುಧೀರ್‌ ಮುಂಗಂಟಿವಾರ್‌, ಚಂದ್ರಕಾಂತ್‌ ಪಾಟೀಲ್‌ ಮತ್ತು ಗಿರೀಶ್‌ ಮಹಾಜನ್‌ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಶಿವಸೇನೆಯ ಶಿಂಧೆ ಬಣದಿಂದ ಗುಲಾಬ್‌ ರಘುನಾಥ್‌ ಪಾಟೀಲ್‌, ಸದಾ ಸರ್ವಾಣ್ಕರ್‌, ದೀಪಕ್‌ ವಸಂತ್‌ ಕೇಸರ್ಕರ್‌ ಅವರ ಹೆಸರಿದೆ.

ಜೂನ್‌ ೨೦ರಂದು ಶಿವಸೇನೆಯಲ್ಲಿ ಬಂಡಾಯ ಚಟುವಟಿಕೆ ಕಾಣಿಸಿಕೊಂಡಿತ್ತು. ಏಕನಾಥ ಶಿಂಧೆ ಬಂಡೆದ್ದಿದ್ದು, ಸುಮಾರು ೪೦ ಶಾಸಕರು ಅವರನ್ನು ಬೆಂಬಲಿಸಿದ್ದರು. ಸೂರತ್‌ನ ರೆಸಾರ್ಟ್‌ನಿಂದ ಗುವಾಹಟಿಗೆ ತೆರಳಿದ್ದು ಟೀಮ್‌ ಮುಂದೆ ಬಿಜೆಪಿಯೊಂದಿಗೆ ಮೈತ್ರಿ ಕುದುರಿಸಿಕೊಂಡು ಸರಕಾರ ರಚಿಸಿಕೊಂಡರು. ಈ ಪ್ರಕ್ರಿಯೆಯ ಬಳಿಕ ಉದ್ಧವ್‌ ಠಾಕ್ರೆಯವರ ಮೂಲ ಬಿಜೆಪಿಯಲ್ಲಿ ಉಳಿದದ್ದು ಕೇವಲ ೧೫ ಶಾಸಕರು ಮಾತ್ರ.

ಸುಪ್ರೀಂಕೋರ್ಟ್‌ ವಿಚಾರಣೆ, ಕಾನೂನು ಹೋರಾಟಗಳ ಪ್ರಕ್ರಿಯೆಯನ್ನು ಕಾಯುತ್ತಾ ಸಂಪುಟ ವಿಸ್ತರಣೆ ನಡೆದೇ ಇರಲಿಲ್ಲ. ಕೇವಲ ಇಬ್ಬರು ರಾಜ್ಯದ ಎಲ್ಲ ಇಲಾಖೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇದರಿಂದ ಬಹಳಷ್ಟು ಸಮಸ್ಯೆಗಳು ಎದುರಾಗಿದ್ದವು. ಆದರೆ, ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮಾತ್ರ ಈ ರೀತಿ ಏನೂ ಆಗಿಲ್ಲ. ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದು ಹೇಳಿದ್ದರು.

ಈ ನಡುವೆ ಮುಖ್ಯಮಂತ್ರಿಯಾಗಿರುವ ಏಕನಾಥ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್‌ ಅವರು ಗೃಹ ಮತ್ತು ಹಣಕಾಸು ಖಾತೆಯನ್ನು ಹಂಚಿಕೊಳ್ಳುವ ಸಾಧ್ಯತೆ ಕಂಡುಬಂದಿದೆ.

ಇದನ್ನೂ ಓದಿ| Maha politics: ನಮ್ಮದೇ ನಿಜವಾದ ಶಿವಸೇನೆ, ಚು.ಆಯೋಗದ ಮುಂದೆ ಹಕ್ಕು ಮಂಡಿಸಿದ ಶಿಂಧೆ

Exit mobile version