Site icon Vistara News

Flight Tyre Burst: ಚೆನ್ನೈನಿಂದ ಮಲೇಷ್ಯಾಗೆ ಹೊರಟ ವಿಮಾನದ ಟೈರ್‌ ಸ್ಫೋಟ; ಬೆಚ್ಚಿದ 130 ಜನ

Flight

Malaysia-bound flight suffers tyre burst at Chennai airport, all passengers safe

ಚೆನ್ನೈ: ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಿಂದ (Chennai Airport) ಮಲೇಷ್ಯಾಗೆ ಹೊರಡಬೇಕಿದ್ದ ವಿಮಾನದ ಟೈರ್‌ ಸ್ಫೋಟಗೊಂಡಿದೆ. ಗುರುವಾರ ಬೆಳಗ್ಗೆ ಚೆನ್ನೈ ಏರ್‌ಪೋರ್ಟ್‌ನಿಂದ ಮಲೇಷ್ಯಾದ ಕೌಲಾಲಂಪುರಕ್ಕೆ 130 ಪ್ರಯಾಣಿಕರು ಇದ್ದ ವಿಮಾನ ಹಾರಾಟ ನಡೆಸಬೇಕಿತ್ತು. ವಿಮಾನ ಟೇಕಾಫ್‌ ಆಗಲು ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿತ್ತು. ಇದೇ ವೇಳೆ ವಿಮಾನದ ಟೈರ್‌ (Flight Tyre Burst) ಸ್ಫೋಟಗೊಂಡಿದೆ. ಅದೃಷ್ಟವಶಾತ್‌, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಿಮಾನದ ಟೈರ್‌ ಸ್ಫೋಟಗೊಳ್ಳುತ್ತಲೇ 130 ಪ್ರಯಾಣಿಕರು ಕೂಡ ಬೆಚ್ಚಿಬಿದ್ದರು. ಆದರೆ, ವಿಮಾನದ ಸಿಬ್ಬಂದಿಯು ನಿಧಾನವಾಗಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಿದರು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಅವರಿಗೆ ಚೆನ್ನೈನ ಹಲವು ಹೋಟೆಲ್‌ಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಊಟ, ವಸತಿಯ ವ್ಯವಸ್ಥೆಯನ್ನು ವಿಮಾನಯಾನ ಸಂಸ್ಥೆಯೇ ಮಾಡಿದೆ.

ಟೈರ್‌ ಸ್ಫೋಟಗೊಂಡ ಕಾರಣ ವಿಮಾನವು ಶುಕ್ರವಾರ ಬೆಳಗ್ಗೆ (ಜನವರಿ 19) ಕೌಲಾಲಂಪುರಕ್ಕೆ ಹಾರಾಟ ಆರಂಭಿಸಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ವಿಮಾನದ ಟೈರ್‌ ಸ್ಫೋಟ ಸಂಭವಿಸಿದ್ದು ಬೇರೆ ವಿಮಾನಗಳ ಹಾರಾಟಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ವಿಮಾನದ ಹಿಂದಿನ ಟೈರ್‌ ಸ್ಫೋಟಗೊಂಡ ಕಾರಣ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: SpiceJet: ಟಿಕೆಟ್‌ ಇದ್ದರೂ ಮುಂಬೈನಿಂದ ಬೆಂಗಳೂರಿಗೆ ವಿಮಾನದ ಟಾಯ್ಲೆಟ್‌ನಲ್ಲೇ ಬಂದ ವ್ಯಕ್ತಿ; ಏಕೆ?

177 ವಿಮಾನಗಳ ಹಾರಾಟ ಸ್ಥಗಿತ

ಕೆಲ ದಿನಗಳ ಹಿಂದೆ ಅಲಾಸ್ಕ ವಿಮಾನಯಾನ ಸಂಸ್ಥೆಯ ಬೋಯಿಂಗ್‌ ವಿಮಾನದ ಬಾಗಿಲು ಹಾರಾಡುತ್ತಿರುವಾಗಲೇ ಕಳಚಿ ಬಿದ್ದ ಪ್ರಕರಣವು ಭಾರಿ ಸುದ್ದಿಯಾದ ಬೆನ್ನಲ್ಲೇ ಅಮೆರಿಕದಲ್ಲಿ ಬೋಯಿಂಗ್‌ 737-9 ಮ್ಯಾಕ್ಸ್ ಸರಣಿಯ (Boeing 737-9 MAX) ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಅಲಾಸ್ಕ ವಿಮಾನ ದುರಂತ ಪ್ರಕರಣದ ಬಳಿಕ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿದ್ದು, ಕೆಲ ಬೋಯಿಂಗ್‌ ವಿಮಾನಗಳ ಬಿಡಿ ಭಾಗಗಳಲ್ಲಿ ದೋಷ ಕಂಡುಬಂದಿದೆ. ಹಾಗಾಗಿ, ಅಮೆರಿಕದ ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ ಬೋಯಿಂಗ್‌ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 177 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version