ನವದೆಹಲಿ: ಭಾರತದೊಂದಿಗೆ (India-Maldives) ಕಾಲು ಕೆರೆದುಕೊಂಡು ಜಗಳ ಮಾಡಿ ತೊಂದರೆಗೆ ಸಿಲುಕಿದ್ದ ಮಾಲ್ಡೀವ್ಸ್ ಈಗ ಮತ್ತೊಂದು ಸಮಸ್ಯೆಗೆ ಸಿಲುಕಿಕೊಂಡಿದೆ. ಮಾಲ್ಡೀವ್ಸ್ ಆರ್ಥಿಕವಾಗಿ ದಿವಾಳಿಯಾಗಿದ್ದು(Maldives Bankruptcy), ನೆರವು ನೀಡುವಂತೆ ಐಎಂಎಫ್‌ಗೆ ಮನವಿ (IMF bailout) ಮಾಡಿದೆ ಮಾಧ್ಯಮಗಳು ವರದಿ ಮಾಡಿವೆ. ಇಂಡಿಯಾ ಔಟ್ (India Out) ನೀತಿಯನ್ನು ಸಾರಿರುವ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಕ್ರಮವು ಈಗ ದಿವಾಳಿಯಲ್ಲಿ ಅಂತ್ಯವಾಗಿದ್ದು, ನೆರವಿಗೆ ಅಂಗಲಾಚಲಾಗುತ್ತಿದೆ.
ಭೀಕರ ಆರ್ಥಿಕ ಪರಿಸ್ಥಿತಿಯು ಎದುರಾಗುತ್ತಿದ್ದಂತೆ ಮಾಲ್ಡೀವ್ಸ್ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪರಿಹಾರ ಸಾಲ ಪಡೆಯಲು ಮುಂದಾಗಿದೆ. ದ್ವೀಪ ರಾಷ್ಟ್ರ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಇದು ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಹೇಳಲಾಗುತ್ತಿದೆ. ಭಾರತದ ಜತೆ ಕಿರಿಕ್ ಮಾಡಿಕೊಂಡ ಬೆನ್ನಲ್ಲೇ, ದ್ವೀಪ ರಾಷ್ಟ್ರಕ್ಕೆ ಹೋಗುವ ಭಾರತೀಯ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ ಎನ್ನಲಾಗಿದೆ.
ಭಾರತ ಮತ್ತು ಮಾಲ್ಡೀವ್ಸ್ ರಾಜತಾಂತ್ರಿಕ ಬಿಕ್ಕಟ್ಟು ಮಧ್ಯೆಯೇ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಇಂಡಿಯಾ ಔಟ್ ನೀತಿಯು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಈ ನೀತಿಯ ಅನ್ವಯ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೈನಿಕರನ್ನು ಹೊರಗೆ ಹಾಕುವುದಾಗಿದೆ. ಭಾರತವು ತನ್ನ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳಳು ಮೇ 10 ಗಡುವು ವಿಧಿಸಲಾಗಿದೆ. ಈ ಸಂಬಂಧ ಇತ್ತೀಚೆಗೆಷ್ಟೇ ಉಭಯ ರಾಷ್ಟ್ರಗಳು ಮಾತುಕತೆ ನಡೆಸಿವೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಅವರು ಪ್ರವಾಸಿಗರು ಲಕ್ಷದ್ವೀಪವನ್ನು ಆದ್ಯತೆಯ ತಾಣವಾಗಿ ಬದಲಿಸಿಕೊಳ್ಳಬೇಕು ಎಂದು ಹೇಳಿದ್ದರು. ಮಾಲ್ಡೀವ್ಸ್‌ನ ಮೂವರು ಸಚಿವರು ಪ್ರಧಾನಿಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ವೈಯಕ್ತಿಕ ನಿಂದನೆ ಮಾಡಿದ್ದರು. ಪರಿಣಾಮ ಮಾಲ್ಡೀವ್ಸ್ ಸರ್ಕಾರವು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದರು.
ಈ ಮಧ್ಯೆ ತನ್ನ ಆರ್ಥಿಕ ದುಸ್ಥಿತಿಯನ್ನು ಸುಧಾರಿಸಿಕೊಳ್ಳಲು ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಐಎಂಎಫ್‌ನಿಂದ ನೆರವು ಕೋರಿದೆ. ಒಮ್ಮೆ ಸಕಾರಾತ್ಮಕ ಸಂಬಂಧಗಳನ್ನು ಅನುಭವಿಸಿದ ನಂತರ, ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹಳಸಲಾರಂಭಿಸಿತು. ಮುಯಿಜು ಅವರು ಮಾಲ್ಡೀವ್ಸ್ ಅಧ್ಯಕ್ಷರಾದ ಮೇಲೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹಾಳಾಗಲಾರಂಭಿಸಿದವು. ಅವರ ಭಾರತ-ವಿರೋಧಿ ನಿಲುವು, ಭಾರತೀಯ ಸೇನೆಯನ್ನು ತೆಗೆದುಹಾಕುವ ಪ್ರಯತ್ನಗಳು ಮತ್ತು ಮಂತ್ರಿಗಳ ವಿವಾದಾತ್ಮಕ ಹೇಳಿಕೆಗಳು, ರಾಜತಾಂತ್ರಿಕ ಸಂಬಂಧಗಳನ್ನು ಹದಗೆಡಿಸಿತು.
ಈ ಸುದ್ದಿಯನ್ನೂ ಓದಿ: Lakshadweep: ಲಕ್ಷದ್ವೀಪ ಅಭಿವೃದ್ಧಿಗೆ 4,500 ಕೋಟಿ ರೂ. ಮಂಜೂರು; ಮಾಲ್ಡೀವ್ಸ್‌ಗೆ ಪೆಟ್ಟು