Site icon Vistara News

Z Plus Security: ಮಲ್ಲಿಕಾರ್ಜುನ ಖರ್ಗೆಗೆ ‘ಜೆಡ್‌ ಪ್ಲಸ್’ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ

Mallikarjun Kharge has been provided 'Z Plus' security by the central government

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರಿಗೆ ಕೇಂದ್ರ ಸರ್ಕಾರವು (Central Government) ಜೆಡ್ ಪ್ಲಸ್ ಭದ್ರತೆಯನ್ನು (Z Plus Security) ಒದಗಿಸಲು ಮುಂದಾಗಿದೆ. ಖರ್ಗೆ ಅವರಿಗೆ ಬೆದರಿಕೆಯ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಲಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯು(CRPF) ಕಾಂಗ್ರೆಸ್ ಅಧ್ಯಕ್ಷರಿಗೆ ಜೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಿದೆ.

ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರ ಮೇಲಿನ ಬೆದರಿಕೆಯ ಗ್ರಹಿಕೆಯನ್ನು ಎತ್ತಿ ತೋರಿಸುವ ಕೇಂದ್ರ ಗುಪ್ತಚರ ಸಂಸ್ಥೆಗಳ ವರದಿಗಳ ನಂತರ ಕೇಂದ್ರ ಗೃಹ ಸಚಿವಾಲಯವು ಹಿರಿಯ ಕಾಂಗ್ರೆಸ್ ನಾಯಕನಿಗೆ ಜೆಡ್ ಪ್ಲಸ್ ಭದ್ರತೆಯನ್ನು ಆದೇಶಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಗಣ್ಯ ವ್ಯಕ್ತಿಗಳು ಮತ್ತು ರಾಜಕೀಯ ನಾಯಕರ ಮೇಲಿನ ಬೆದರಿಕೆಯ ವಸ್ತು ಸ್ಥಿತಿಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಝಡ್ ಪ್ಲಸ್ ರಕ್ಷಣೆಯನ್ನು ಪಡೆದಿದ್ದಾರೆ. 2019 ರವರೆಗೆ ಗಾಂಧಿ ಕುಟುಂಬವು ವಿಶೇಷ ರಕ್ಷಣಾ ಗುಂಪು (SPG) ಭದ್ರತೆಯನ್ನು ಹೊಂದಿತ್ತು, ನಂತರ ಅದನ್ನು ಜೆಡ್‌ ಪ್ಲಸ್‌ಗೆ ಇಳಿಸಲಾಯಿತು. ಪ್ರಸ್ತುತ, ದೇಶದಲ್ಲಿ ಸುಮಾರು 40 ವಿಐಪಿ ವ್ಯಕ್ತಿಗಳು ಝಡ್ ಪ್ಲಸ್ ಭದ್ರತೆಯನ್ನು ಹೊಂದಿದ್ದಾರೆ.

ಏನಿದು ಜೆಡ್ ಪ್ಲಸ್ ಭದ್ರತೆ?

ಭಾರತದಲ್ಲಿ ವಿಐಪಿ ಭದ್ರತೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಝಡ್ ಪ್ಲಸ್, ಝಡ್, ವೈ ಮತ್ತು ಎಕ್ಸ್ ಶ್ರೇಣಿಯ ಭದ್ರತಾ ವ್ಯವಸ್ಥೆ ಇರುತ್ತದೆ. ಗುಪ್ತಚರ ಕೇಂದ್ರವು ಬೆದರಿಕೆಯ ಪ್ರಮಾಣವನ್ನು ವಿಶ್ಲೇಷಿಸಿದ ನಂತರ ಯಾವ ವಿಭಾಗದ ಭದ್ರತೆಯನ್ನು ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

ಎಸ್‌ಪಿಜಿ ಬಳಿಕ ಜೆಡ್ ಪ್ಲಸ್ ಅತಿ ಹೆಚ್ಚಿನ ಭದ್ರತಾ ವ್ಯವಸ್ಥೆಯಾಗಿದೆ. ಯಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಜೀವ ಬೆದರಿಕೆ ಇರುತ್ತದೆಯೋ ಅಂಥವರಿಗೆ ಜೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗುತ್ತದೆ. ಜೆಡ್ ಪ್ಲಸ್ ಭದ್ರತೆಯಲ್ಲಿ ಸಿಆರ್‌ಪಿಎಫ್ ಕಮಾಂಡೋಗಳು ಸೇರಿದಂತೆ 55 ಸಿಬ್ಬಂದಿ ಇರುತ್ತಾರೆ. ಇವರು ದಿನದ 24 ಗಂಟೆಗೂ ಭದ್ರತೆಯನ್ನು ಒದಗಿಸುತ್ತಾರೆ. ಬುಲೆಟ್‌ಪ್ರೂಫ್ ವಾಹನ ಮತ್ತು ಮೂರು ಶಿಫ್ಟ್‌ದಲ್ಲಿ ಎಸ್ಕಾರ್ಟ್‌ ಸೇವೆಯನ್ನು ನೀಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Mallikarjun Kharge: ಬಿಜೆಪಿ 400 ಸೀಟು ಗೆಲ್ಲುತ್ತೆ ಅಂತಾ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರಾ?

Exit mobile version