ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಧರಿಸಿರುವ ಸ್ಕಾರ್ಫ್ ಈಗ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಟೀಕಿಸಲಾಗುತ್ತಿದೆ. ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿರುವ ಖರ್ಗೆ ಅವರು ದುಬಾರಿ Louis Vuitton ಸ್ಕಾರ್ಪ್ ಧರಿಸಿ ಪಾಲ್ಗೊಂಡಿದ್ದರು(Parliament Budget Session).
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸುಮಾರು 50 ಸಾವಿರ ರೂ. ಮೌಲ್ಯದ ದುಬಾರಿ ಸ್ಕಾರ್ಫ್ ಧರಿಸಿ ಕಲಾಪಕ್ಕೆ ಹಾಜರಾಗಿದ್ದಾರೆ. ಅದೇ ಪ್ರಧಾನಿ ಮೋದಿ, ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಲಾದ ವಿಶೇಷ ಜಾಕೆಟ್ ಧರಿಸಿಕೊಂಡು ಬಂದಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಹೇಳಿದ್ದಾರೆ.
ಇದನ್ನೂ ಓದಿ: PM Modi Parliament Speech: ಈಗ ಬೇರೆ ದೇಶಗಳು ಭಾರತವನ್ನು ಅವಲಂಬಿಸಿವೆ! ನಮ್ಮದು 5ನೇ ದೊಡ್ಡ ಆರ್ಥಿಕತೆ: ಮೋದಿ
ಈ ಕುರಿತು ಟ್ವೀಟ್ ಮಾಡಿರುವ ಪೂನಾವಾಲ, ಅವರವರ ಅಭಿರುಚಿಗೆ ತಕ್ಕಂತೆ ಸಂದೇಶ ರವಾನಿಸುತ್ತಾರೆ. ಪ್ರಧಾನಿ ಮೋದಿ ಅವರು, ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರಕ್ಕಾಗಿ ಜನರು ಪಾಲ್ಗೊಳ್ಳುವಂತೆ ಮಾಡಲು ಸುಸ್ಥಿರ ನೀಲಿ ಜಾಕೆಟ್ ಧರಿಸಿ, ಗ್ರೀನ್ ಮೆಸೇಜ್ ರವಾನಿಸಿದ್ದಾರೆ. ಖರ್ಗೆ ಅವರು ದುಬಾರಿ ಸ್ಕಾರ್ಪ್ ಧರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.