ಕೋಲ್ಕತ್ತಾ: ಸದಾ ರಾಜಕೀಯದಲ್ಲಿ ಬ್ಯುಸಿ ಇರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ರಾಜಕೀಯವನ್ನೆಲ್ಲ ಮರೆತು ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಜತೆ ಮಮತಾ ಸ್ಟೆಪ್ ಮಾಡಿದ್ದು, ವಿಡಿಯೊ ವೈರಲ್ ಆಗಿದೆ. ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 29ನೇ ಕೋಲ್ಕತ್ತಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (KIFF) ಮಂಗಳವಾರ (ಡಿಸೆಂಬರ್ 6) ಉದ್ಘಾಟನೆಗೊಂಡಿತು. ಈ ವೇಳೆ ಮಮತಾ ಡ್ಯಾನ್ಸ್ ಮಾಡಿ ಬೆರಗು ಮೂಡಿಸಿದರು.
#Watch: #WestBengal CM #MamataBanerjee shaking a leg with Salman Khan, Anil Kapoor & Sonakshi Sinha on stage at the Kolkata International Film Festival pic.twitter.com/MooKqcgovI
— Pooja Mehta (@pooja_news) December 5, 2023
ಸಲ್ಮಾನ್ ಖಾನ್ ಹಾಗೂ ಇತರ ಸೆಲೆಬ್ರಿಟಿಗಳು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಆ ವೇಳೆ ಮಮತಾ ಬ್ಯಾನರ್ಜಿ ವೇದಿಕೆ ಮೇಲೆ ಕುಳಿತಿದ್ದರು. ಈ ವೇಳೆ ಡ್ಯಾನ್ಸ್ ಮಾಡುವಂತೆ ಮಮತಾ ಬ್ಯಾನರ್ಜಿ ಬಳಿ ಬಂದು ಸಲ್ಮಾನ್ ಖಾನ್ ಮನವಿ ಮಾಡಿದರು. ಅದಕ್ಕೆ ಮಮತಾ ಬ್ಯಾನರ್ಜಿ ಒಪ್ಪಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಸಲ್ಮಾನ್, ಮಮತಾ ಮಾತ್ರವಲ್ಲದೆ ಮಹೇಶ್ ಭಟ್, ಅನಿಲ್ ಕಪೂರ್, ಸೋನಾಕ್ಷಿ ಸಿನ್ಹಾ, ಶತ್ರುಘ್ನ ಸಿನ್ಹಾ ಕೂಡ ಸೊಂಟ ಬಳುಕಿಸಿದ್ದಾರೆ. ವೇದಿಕೆಯಲ್ಲೇ ಇದ್ದ ಸೌರವ್ ಗಂಗೂಲಿ ನಗುತ್ತಾ ಚಪ್ಪಾಳೆ ತಟ್ಟುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಮಮತಾ ಬ್ಯಾನರ್ಜಿ ಜಾಸ್ತಿ ಸ್ಟೆಪ್ಸ್ ಹಾಕಿಲ್ಲ. ಬರೀ ಕೈ ಬೀಸಿದ್ದಾರೆ. ಇದನ್ನೇ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಮಮತಾ ಬ್ಯಾನರ್ಜಿ ಅವರಿಂದ ಸ್ಟೆಪ್ ಮಾಡಿಸಿದ ಸಲ್ಮಾನ್ ಖಾನ್ ಅವರಿಗೂ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಡಿಸೆಂಬರ್ 12ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ. ಈ ವೇಳೆ 39 ದೇಶಗಳ 219 ಚಲನಚಿತ್ರ ಪ್ರದರ್ಶನವಾಗಲಿದೆ. ಹಲವು ಸೆಲೆಬ್ರಿಟಿಗಳು, ನಿರ್ದೇಶಕರು, ವಿಮರ್ಶಕರು ಭಾಗಿ ಆಗಲಿದ್ದಾರೆ.
ಇದನ್ನೂ ಓದಿ: Aamir Khan: ಚೆನ್ನೈ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್ ನಟ ಆಮೀರ್ ಖಾನ್ ಗ್ರೇಟ್ ಎಸ್ಕೇಪ್