ಶ್ರೀನಗರ/ಚಂಡೀಗಢ: ‘ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ’ ಎಂಬ ಮಾತಿದೆ. ಆದರೆ, ಜಮ್ಮು-ಕಾಶ್ಮೀರದಲ್ಲಿ ವ್ಯಕ್ತಿಯೊಬ್ಬ ಹಣಕ್ಕಾಗಿ ತನ್ನನ್ನೂ ಒಳಗೊಂಡು ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ ಎಂಬುದಾಗಿ ಸುಳ್ಳು ಹೇಳಿ (Man Fakes Own Death) ಈಗ ಸಿಕ್ಕಿಬಿದ್ದಿದ್ದಾನೆ. ಇನ್ಶುರೆನ್ಸ್ ಹಣಕ್ಕಾಗಿ ಇಷ್ಟೆಲ್ಲ ಸರ್ಕಸ್ ಮಾಡಿದವ ಜೈಲುಪಾಲಾಗಿದ್ದಾನೆ.
ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯ ಮಂಜೀತ್ ಸಿಂಗ್ ಎಂಬಾತನು ಇನ್ಶುರೆನ್ಸ್ ಹಣಕ್ಕಾಗಿ ಸಿನಿಮಾ ಶೈಲಿಯಲ್ಲಿ ಕತೆಕಟ್ಟಿದ್ದಾನೆ. ಕಾರು ಅಪಘಾತದಲ್ಲಿ ತಾನು, ತನ್ನ ಹೆಂಡತಿ ಹಾಗೂ ಮಗಳು ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿದ್ದಾನೆ. ಹಾಗೆಯೇ, ಕಾರನ್ನು ಕಣಿವೆಗೆ ತಳ್ಳಿ ಹರಿಯಾಣಕ್ಕೆ ಪರಾರಿಯಾಗಿದ್ದಾನೆ.
ಪೊಲೀಸರು ಮಂಜೀತ್ ಸಿಂಗ್‌ನ ಎಲೆಕ್ಟ್ರಾನಿಕ್ ಸಹಿಯನ್ನು ಟ್ರೇಸ್ ಮಾಡಿ, ಬಳಿಕ ಕಣಿವೆಗೆ ತಳ್ಳಿದ್ದ ಕಾರನ್ನು ಪತ್ತೆಹಚ್ಚಿದ್ದಾರೆ. ಮಂಜೀತ್ ಸಿಂಗ್ 30 ಲಕ್ಷ ರೂ. ಸಾಲ ತೀರಿಸಬೇಕಾದ ಕಾರಣ ಇಂತಹ ಕತೆ ಕಟ್ಟಿದ್ದಾನೆ ಎಂದು ತಿಳಿದುಬಂದಿದೆ. ಹರಿಯಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿರುದ್ಧ ಚೆಕ್ ಬೌನ್ಸ್ ಕೇಸ್ ಕೂಡ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | Man Kills Wife | ಇನ್ಶುರೆನ್ಸ್‌ನ 1.9 ಕೋಟಿ ರೂ.ಗಾಗಿ ಹೆಂಡತಿಯನ್ನೇ ಅಪಘಾತದಲ್ಲಿ ಕೊಲ್ಲಿಸಿದ!